Para cricketer ಅಮೀರ್ ಹುಸೇನ್ ಭೇಟಿ ಮಾಡಿದ ಸಚಿನ್
Team Udayavani, Feb 24, 2024, 11:38 PM IST
ಶ್ರೀನಗರ: ಪ್ಯಾರಾ ಕ್ರಿಕೆಟರ್ ಒಬ್ಬರು ಬ್ಯಾಟಿಂಗ್ ಮಾಡುತ್ತಿದ್ದ ವೀಡಿಯೋ ಕಳೆದ ತಿಂಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎರಡೂ ಕೈಗಳು ಇಲ್ಲದೆಯೂ ಬ್ಯಾಟಿಂಗ್ ಮಾಡುತ್ತಿದ್ದ ಅವರ ಕ್ರಿಕೆಟ್ ಪ್ರೇಮಕ್ಕೆ ಸ್ವತಃ ಸಚಿನ್ ತೆಂಡುಲ್ಕರ್ ಅವರೇ ಮನ ಸೋತಿದ್ದರು. ಅಂದು ವೈರಲ್ ಆದ ವೀಡಿಯೋದಲ್ಲಿದ್ದ ರಿಯಲ್ ಹೀರೋ ಅಮೀರ್ ಹುಸೇನ್ ಲೋನ್ ಅವರನ್ನು ಸಚಿನ್ ಶನಿವಾರ ಭೇಟಿಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನವರಾದ 34ರ ಹರೆಯದ ಅಮೀರ್ ಹುಸೇನ್ಗೆ ಎರಡೂ ಕೈಗಳಿಲ್ಲ. ಏಳನೇ ವಯಸ್ಸಿನವರಾಗಿದ್ದಾಗ ನಡೆದ ಅಪಘಾತದಲ್ಲಿ ಅಮೀರ್ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರು. ಅಷ್ಟಾಗಿಯೂ ಅಮೀರ್ಗೆ ಕ್ರಿಕೆಟ್ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಕಾಲಿನಲ್ಲೇ ಬೌಲಿಂಗ್, ಭುಜ ಮತ್ತು ಕುತ್ತಿಗೆಯ ಸಹಾಯ ದಿಂದ ಬ್ಯಾಟಿಂಗ್ ಮಾಡುತ್ತಿದ್ದ ಅಮೀರ್ ಅವರ ವೀಡಿಯೋ ಜಾಲತಾಣದಲ್ಲಿ ಹರಿದಾಡಿತ್ತು. ವೀಡಿಯೋ ಕಂಡು ಸ್ಫೂರ್ತಿಗೊಂಡಿದ್ದ ಸಚಿನ್, ಅಮೀರ್ನನ್ನು ಭೇಟಿ ಮಾಡುವುದಾಗಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದರು.
ಕಾಶ್ಮೀರಕ್ಕೆ ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದ ಸಚಿನ್, ಅನಂತ್ನಾಗ್ನ ಬಿಜ್ಬೇಹರದಲ್ಲಿರುವ ಅಮೀರ್ ಹುಸೇನ್ ಅವರ ಮನೆಗೂ ಭೇಟಿ ನೀಡಿದ್ದಾರೆ. ಸಚಿನ್ ಆಗಮನ ಕಂಡು ಅಮೀರ್ ಭಾವುಕರಾಗಿದ್ದಾರೆ. ಇದೇ ವೇಳೆ ಅಮೀರ್ಗೆ ಸಚಿನ್ ಕ್ರಿಕೆಟ್ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.