World’s largest ಧಾನ್ಯ ಸಂಗ್ರಹ ಯೋಜನೆಗೆ ಮೋದಿ ಚಾಲನೆ : 1.25 ಲಕ್ಷ ಕೋಟಿ ರೂ. ಹೂಡಿಕೆ
ಐದು ವರ್ಷಗಳಲ್ಲಿ 7 ಕೋಟಿ ಟನ್ ಧಾನ್ಯ ಸಂಗ್ರಹ ಗುರಿ
Team Udayavani, Feb 25, 2024, 1:03 AM IST
ಹೊಸದಿಲ್ಲಿ: ವಿಶ್ವದ ಬೃಹತ್ ಧಾನ್ಯ ಸಂಗ್ರಹಾಗಾರ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಮುಂದಿನ ಐದು ವರ್ಷಗಳಲ್ಲಿ 7 ಕೋಟಿ ಟನ್ ಧಾನ್ಯ ಸಂಗ್ರಹ ಮಾಡಲು ಸಾಧ್ಯವಾಗುವಂತೆ ಗೋದಾಮುಗಳು, ಸಂಗ್ರಹಾಗಾರ ನಿರ್ಮಿಸುವುದು ಯೋಜನೆಯ ಗುರಿ. ಈ ಹಿನ್ನೆಲೆಯಲ್ಲಿ ದೇಶದ 11 ರಾಜ್ಯಗಳ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ (ಪ್ಯಾಕ್ಸ್) 11 ಗೋದಾಮುಗಳನ್ನು ಸಾಂಕೇತಿಕ ವಾಗಿ ಉದ್ಘಾಟಿಸಲಾಯಿತು.
ಸಹಕಾರಿ ಕ್ಷೇತ್ರದಲ್ಲಿ ಸಂಘಗಳನ್ನು ಬಲ ಪಡಿಸುವುದರ ಜತೆಗೆ ರೈತರ ಧಾನ್ಯಗಳ ದಾಸ್ತಾನಿಗೆ ಅಗತ್ಯ ವ್ಯವಸ್ಥೆ ಮಾಡಿಕೊಡಲು ಕೇಂದ್ರ ಸರಕಾರವು 1.25 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ. ಕಾರ್ಯಕ್ರಮದಲ್ಲಿ ಮೋದಿಯವರು 500 ಇತರ ಪ್ಯಾಕ್ಸ್ ಗಳಲ್ಲಿ ಗೋದಾಮುಗಳು, ಇತರ ಕೃಷಿ ಸೌಲಭ್ಯಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಮೋದಿ ಹೇಳಿದ್ದೇನು?
ಯೋಜನೆ ಉದ್ಘಾಟಿಸಿ ಮಾತನಾಡಿದ ಮೋದಿ, ಇವತ್ತು ನಾವು ವಿಶ್ವದ ಬೃಹತ್ ಧಾನ್ಯ ಸಂಗ್ರಹ ಯೋಜನೆಗೆ ಚಾಲನೆ ನೀಡಿದ್ದೇವೆ. ಈ ಬೃಹತ್ ಯೋಜನೆ ಮೂಲಕ, ಮುಂದಿನ ಐದು ವರ್ಷಗಳಲ್ಲಿ 7 ಕೋಟಿ ಟನ್ ಸಂಗ್ರಹ ಸಾಮರ್ಥ್ಯವನ್ನು ನಿರ್ಮಿಸ ಲಾಗುವುದು. ಇದಕ್ಕಾಗಿ 1.25 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು’ ಎಂದು ಹೇಳಿದ್ದಾರೆ.
ನಾವು ವಿಶ್ವದ ಬೃಹತ್ ಧಾನ್ಯ ಸಂಗ್ರಹ ಯೋಜನೆಗೆ ಚಾಲನೆ ನೀಡಿದ್ದೇವೆ. ಇದರ ಮೂಲಕ ದೇಶಾದ್ಯಂತ ಸಾವಿರಾರು ಸಂಗ್ರಹಾಗಾರಗಳು, ಗೋದಾಮುಗಳನ್ನು ನಿರ್ಮಿಸಲಾಗು ವುದು. ಹಿಂದಿನ ಸರಕಾರಗಳು ಈ ವಿಚಾರಕ್ಕೆ ಆದ್ಯತೆಯನ್ನೇ ನೀಡಿರಲಿಲ್ಲ. ಇವತ್ತು ಸಹಕಾರಿ ಸಂಘಗಳ ಮೂಲಕ ಈ ಸಮಸ್ಯೆಗೆ ಉತ್ತರ ನೀಡಿದ್ದೇವೆ.
ಗೋದಾಮುಗಳಿಂದ ಲಾಭಗಳೇನು?
ಈ ಸಂಗ್ರಹಾಗಾರಗಳಲ್ಲಿ ರೈತರು ಧಾನ್ಯ ಸಂಗ್ರಹಿಸಿಡಬಹುದು. ಸೂಕ್ತ ಬೆಲೆ ಬಂದಾಗ ಮಾರಬಹುದು. ಇಲ್ಲಿ ಧಾನ್ಯಗಳನ್ನು ಇರಿಸಿ ಸಾಲವನ್ನೂ ಪಡೆಯಬಹುದು.
2 ಲಕ್ಷ ಪ್ಯಾಕ್ಸ್ ಸ್ಥಾಪನೆ ಗುರಿ
ದೇಶಾದ್ಯಂತ ಕೃಷಿ ಸಹಕಾರಿ ಸಂಘ (ಪ್ಯಾಕ್ಸ್)ಗಳನ್ನು 2 ಲಕ್ಷಕ್ಕೇರಿಸುವ ಗುರಿಯನ್ನು ಮೋದಿ ಸರಕಾರ ಹೊಂದಿದೆ. ಒಟ್ಟು ಕೃಷಿ ಉತ್ಪಾದಕ ಸಂಘಗಳನ್ನು (ಎಫ್ಪಿಒ) 10 ಸಾವಿರಕ್ಕೆ ಏರಿಸುವ ಗುರಿಯಿದೆ. ಈಗಾಗಲೇ 8 ಸಾವಿರ ಎಫ್ಪಿಒಗಳನ್ನು ಸ್ಥಾಪಿಸಲಾಗಿದೆ ಎಂದೂ ಮೋದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
IED explodes: ನಕ್ಸಲರು ಇರಿಸಿದ್ದ ಐಇಡಿ ಸ್ಫೋಟ: ಮೂರು ಕರಡಿಗಳು ಸಾವು
Formula E race; ಫಾರ್ಮುಲಾ-ಇ ರೇಸ್ ಪ್ರಕರಣ: ಕೆಟಿಆರ್ ಮೇಲೆ ಎಸಿಬಿ ಎಫ್ಐಆರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.