Bangalore: ನಿರ್ವಹಣೆ ಇಲ್ಲದೆ ಅವಸಾನದತ್ತ 140 ಕೆರೆ


Team Udayavani, Feb 25, 2024, 10:49 AM IST

Bangalore: ನಿರ್ವಹಣೆ ಇಲ್ಲದೆ ಅವಸಾನದತ್ತ 140 ಕೆರೆ

ಬೆಂಗಳೂರು:  ಹಿಂದೆ ರಾಜ್ಯ ರಾಜಧಾನಿಗೆ ಜಲಮೂಲಗಳಾಗಿದ್ದ ಕೆರೆಗಳು ತೀವ್ರ ನಗರೀಕರಣದ ಪರಿಣಾಮ ಮುಚ್ಚಿಹೋಗಿದ್ದು, ಸದ್ಯ ಇರುವ 753 ಕೆರೆಗಳ ಪೈಕಿ 140 ನಿರ್ವಹಣೆ ಇಲ್ಲದೇ ಹೂಳು ತುಂಬಿ ನಶಿಸುವ ಹಂತದಲ್ಲಿವೆ. ಹೀಗಾಗಿ, ನಗರದಲ್ಲಿ ನೀರಿಗೆ ಹಾಹಾಕಾರ ಹೆಚ್ಚಿದ್ದು, ಕಾವೇರಿ ನದಿ ನೀರು ಅವಲಂಬನೆ ಅನಿವಾರ್ಯವಾಗಿದೆ.

ನೀರಿನ ಸಮಸ್ಯೆ ಉಲ್ಬಣಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರಿನ ಕೆರೆಗಳ ಮಹತ್ವ ಗೊತ್ತಾಗುತ್ತಿದೆ. ಒಂದು ಕಾಲದಲ್ಲಿ ಬೆಂಗಳೂರಿಗೆ ನೀರು ಒದಗಿಸುತ್ತಿದ್ದ ಬಹುತೇಕ ಕೆರೆಗಳು ನಿರ್ವಹಣೆ ಇಲ್ಲದೇ ನಶಿಸಿಹೋಗುವ ಹಂತದಲ್ಲಿವೆ. ಚರಂಡಿ ನೀರು, ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿವೆ. ಇಲ್ಲಿನ ಕೆರೆಗಳ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಬೆಂಗಳೂರು ಜಿಪಂ ವ್ಯಾಪ್ತಿಯಲ್ಲಿ 495, ಬಿಬಿಎಂಪಿ ವ್ಯಾಪ್ತಿಯಲ್ಲಿ 207, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 47, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 4 ಸೇರಿ ಬೆಂಗಳೂರಿನಲ್ಲಿ ಒಟ್ಟು 753 ಕೆರೆಗಳಿವೆ.

ಶೇ.60 ಕೆರೆಗಳಲ್ಲಿ ಹೂಳು: ರಾಜ್ಯ ರಾಜ ಧಾನಿಯ ಶೇ.60 ಕೆರೆಗಳಲ್ಲಿ ಹೂಳು ತುಂಬಿಕೊಂ ಡಿದೆ. ಅನುದಾನದ ಲಭ್ಯತೆ ಮೇರೆಗೆ ಹೂಳು ತೆಗೆಯುವ ಕಾರ್ಯ ನಡೆಸಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಅನುದಾನ ಸಿಗದೇ ಕೆರೆಗಳ ಹೂಳು ತೆಗೆಯುವ ಕಾರ್ಯ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಸಾಮಾಜಿಕ ಅರಣ್ಯ ಯೋಜನೆಗಳಡಿ ಬೆಂಗಳೂರಿನ ಬಹುತೇಕ ಕೆರೆಗಳಲ್ಲಿ ಜಾಲಿ ಮರಗಳನ್ನು ನೆಡಲಾಗಿದೆ.

ಜಾಲಿ ಮರಗಳಿಂದ ಕೆರೆಗಳಲ್ಲಿ ನೀರಿನ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ದಟ್ಟವಾಗಿ ಜಾಲಿ ಮರ ಬೆಳೆದಿರುವುದನ್ನು ಗುರುತಿಸಿ ಅಲ್ಲಲ್ಲಿ ಅವುಗಳನ್ನು ತೆರವು ಗೊಳಿಸುವ ಕಾರ್ಯವೂ ಅರ್ಧಕ್ಕೆ ನಿಂತಿದೆ. ಸದ್ಯ ಮಳೆ ಕೊರತೆಯಿಂದ ಬೆಂಗಳೂರಿನ ಬಹುತೇಕ ಕೆರೆಗಳು ಬತ್ತಿ ಹೋಗುತ್ತಿದೆ. ಅವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ ಪುನಶ್ಚೇತನಗೊಳಿಸುವ ಅಗತ್ಯವಿದೆ ಎಂದು ಕೆರೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎನ್‌ಜಿಒಗಳ ಆಗ್ರಹವಾಗಿದೆ.

ಬೆಂಗಳೂರಿಗೆ ಕಾವೇರಿ ನದಿ ನೀರೇ ಆಧಾರ: 

ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದ ರಿಂದ ವಿವಿಧ ನೀರಿನ ಮೂಲಗಳನ್ನು ಆಶ್ರಯಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮುಂದಾಗಿದೆ. ಆದರೆ, ಒಂದು ಕಾಲದಲ್ಲಿ ಬೆಂಗಳೂರಿಗೆ ನೀರು ಒದಗಿಸುತ್ತಿದ್ದ ಬಹುತೇಕ ಕೆರೆಗಳು ನಿರ್ವಹಣೆ ಇಲ್ಲದೇ ಇಲ್ಲಿನ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬುದು ಪರಿ ಶೀಲನೆ ವೇಳೆ ತಿಳಿದು ಬಂದಿದೆ. ಹೀಗಾಗಿ ಸದ್ಯ ಬೆಂಗ ಳೂರಿಗರಿಗೆ ಕುಡಿಯುವ ನೀರಿಗೆ ಕಾವೇರಿಯೊಂದೇ ಗತಿ. ಬೇರೆ ನೀರಿನ ಮೂಲಗಳೇ ಇಲ್ಲವೆಂದು ಜಲ ಮಂಡಳಿಯ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಬೆಂಗಳೂರಿಗೆ ಕೆರೆಗಳು ಏಕೆ ಮುಖ್ಯ?:

ಬೆಂಗಳೂರಿನಲ್ಲಿ ಜೀವನದಿ ಗಳಿಲ್ಲ, ಸಮುದ್ರವೂ ಇಲ್ಲದಿರು ವುದ ರಿಂದ ಕೆರೆಗಳು ಹೆಚ್ಚು ಪ್ರಾಮು ಖ್ಯತೆ ಪಡೆಯುತ್ತವೆ. ಗಾಳಿಯಲ್ಲಿ ತೇವಾಂಶ ಹೆಚ್ಚಿ ಸಲು ಕೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಗಾಳಿಯಲ್ಲಿ ತೇವಾಂಶ ಪ್ರಮಾಣ ಇಳಿಕೆಯಾ ದರೆ ಉಸಿರಾಟ ಸೇರಿ ಆರೋ ಗ್ಯದ ಸಮಸ್ಯೆಗಳು ಕಂಡು ಬರುವ ಸಾಧ್ಯತೆಗಳಿ ರುತ್ತದೆ ಎಂಬುದು ಕೆರೆ ಹಾಗೂ ಪರಿಸರ ತಜ್ಞರ ಆತಂಕ.

ಅಭಿವೃದ್ಧಿಯ ಹೊಡೆತಕ್ಕೆ 700 ಕೆರೆ ಮಾಯ :

1896ರವರೆಗೆ ಇಡೀ ಬೆಂಗಳೂರಿಗೆ ಬೇಕಾದಷ್ಟು ನೀರನ್ನು ಧರ್ಮಾಂಬುಧಿ, ಸಂಪಂಗಿ, ಹಲಸೂರು, ಸ್ಯಾಂಕಿ ಕೆರೆಗಳಂತಹ ಸಾವಿರಾರು ಕೆರೆಗಳು ಪೂರೈಸುತ್ತಿದ್ದವು. ಇವಕ್ಕೆ ಪೂರಕವಾಗಿ ತೆರೆದ ಬಾವಿ, ಕಲ್ಯಾಣಿಗಳಂತಹ ಜಲಮೂಲಗಳೂ ಇದ್ದವು. ಸಾವಿರಾರು ಕೆರೆಗಳಿಂದಾಗಿ ಕೆರೆಗಳ ನಗರಿ ಎಂಬ ಹೆಗ್ಗಳಿಕೆಗೂ ಬೆಂಗಳೂರು ಪಾತ್ರವಾಗಿತ್ತು. ಆದರೆ, ನಗರದಲ್ಲಿದ್ದ ಬಹುತೇಕ ದೊಡ್ಡ ಕೆರೆಗಳು ಬಸ್‌ ನಿಲ್ದಾಣ, ಮಾರುಕಟ್ಟೆ, ಬಡಾವಣೆ, ಅಪಾರ್ಟ್‌ಮೆಂಟ್‌, ಮಾಲ್‌ಗ‌ಳು, ಐಟಿ-ಬಿಟಿ ಕಂಪನಿಗಳ ಕಟ್ಟಡಗಳಿಗೆ ನೆಲೆ ಕಲ್ಪಿಸಿವೆ. ಅಭಿವೃದ್ಧಿಯ ಹೊಡೆತಕ್ಕೆ ಸಿಲುಕಿ 700 ಕೆರೆಗಳು ಕಣ್ಮರೆಯಾಗಿವೆ. ಇನ್ನು ಕೆಲವು ಕೆರೆಗಳು ಒತ್ತುವರಿದಾರರ ಪಾಲಾಗಿವೆ. ಬೆಂಗಳೂರಿನ ಕೆರೆಗಳಿಗೆ ಕಸ ಎಸೆಯುವ ದೊಡ್ಡ ಜಾಲವಿದೆ. ಜೊತೆಗೆ ಗುತ್ತಿಗೆ ಮೇಲೆ ಕಸ ವಿಲೇವಾರಿ ಮಾಡುವವರು ಕೆರೆಗಳನ್ನೇ ವಿಲೇವಾರಿ ತಾಣ ಮಾಡಿಕೊಂಡಿದ್ದಾರೆ.

ಒಂದು ಕಾಲದಲ್ಲಿ ರಾಜ್ಯ ರಾಜಧಾನಿಯು ಕೆರೆಗಳಿಂದ ಸಮೃದ್ಧವಾಗಿತ್ತು. 6 ಸಾವಿರಕ್ಕೂ ಅಧಿಕ ಕೆರೆಗಳು ನೀರಿನ ಮೂಲವಾಗಿದ್ದವು. ಸದ್ಯ ಇರುವ ಕೆರೆಗಳನ್ನು ನಿರ್ವಹಣೆ ಮಾಡಲಾಗದೇ ನಶಿಸಿಹೋಗುತ್ತಿರುವುದು ಆತಂಕಕಾರಿ. ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕೆರೆ ಸಂರಕ್ಷಿಸೋಣ.ಡಾ.ಎ.ಎನ್‌.ಯಲ್ಲಪ್ಪರೆಡ್ಡಿ, ಕೆರೆ, ಪರಿಸರ ತಜ್ಞ.

ನಗರದಲ್ಲಿರುವ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರವು ಕ್ರಮಕೈಗೊಂಡಿದೆ. ಕೆಲವು ಕೆರೆಗಳಲ್ಲಿನ ಬೆಳೆದಿದ್ದ ಗಿಡಗಂಟಿ, ತ್ಯಾಜ್ಯ ಹೊರತೆಗೆದು ಸ್ವಚ್ಛಗೊಳಿಸಲಾಗುತ್ತಿದೆ. ಪಾರ್ಕ್‌, ವಾಕಿಂಗ್‌ ಪಾತ್‌, ಹಲವು ಅಭಿವೃದ್ಧಿ ಕಾರ್ಯಕೈಗೊಳ್ಳಲು ಸರ್ಕಾರ ಚಿಂತಿಸಿದೆ.ರಾಕೇಶ್‌ ಸಿಂಗ್‌, ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ.

-ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು

Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು

7

Bengaluru: ನಗರದಲ್ಲಿ ಏಕಕಾಲಕ್ಕೆ  200 ಗಣೇಶ ಮೂರ್ತಿಗಳ ಮೆರವಣಿಗೆ

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

5

Bengaluru: ಚಿನ್ನಾಭರಣ ಮಳಿಗೆಯಲ್ಲಿ ತಡರಾತ್ರಿ ದುಷ್ಕರ್ಮಿಗಳಿಂದ ಕಳವಿಗೆ ಯತ್ನ

BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು

BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.