Chennai: ಅನ್ಯ ಜಾತಿಯ ಯುವತಿಯನ್ನು ವಿವಾಹವಾಗಿದ್ದ ಯುವಕನ ಹತ್ಯೆ: ಭಾಮೈದ ಸೇರಿ ಐವರ ಬಂಧನ
Team Udayavani, Feb 25, 2024, 3:40 PM IST
ಚೆನ್ನೈ: ಅನ್ಯ ಜಾತಿಯ ಯುವತಿಯನ್ನು ವಿವಾಹವಾಗಿದ್ದ ಯುವಕನ ಮೇಲೆ ಹಲ್ಲೆಗೈದು ಹತ್ಯೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾಗಿ ಮೃತಪಟ್ಟಿರುವ ಯುವಕನನ್ನು ಪ್ರವೀಣ್(26) ಎಂದು ಗುರುತಿಸಲಾಗಿದೆ. ಈತ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ನಗರದ ಪಲ್ಲಿಕರಣೈ ಬಳಿ ಶನಿವಾರ ಈ ಘಟನೆ ನಡೆದಿದೆ.
ನಾಲ್ಕು ತಿಂಗಳ ಹಿಂದಷ್ಟೇ ಪ್ರವೀಣ್ ಪ್ರೀತಿಸಿದ ಯುವತಿ ಜೊತೆ ವಿವಾಹವಾಗಿದ್ದ. ಯುವತಿ ಶರ್ಮಿಳಾ ಅನ್ಯ ಜಾತಿಯವಳಾಗಿದ್ದು, ಮನೆಯವರ ವಿರೋಧದ ನಡುವೆಯೂ ವಿವಾಹವಾಗಿದ್ದರು.
ಶನಿವಾರ(ಫೆ.24 ರಂದು )ಪ್ರವೀಣ್ ಆಹಾರ ತರಲು ಹೊಟೇಲ್ ಗೆ ತೆರಳಿದ್ದ, ಈ ವೇಳೆ ಶರ್ಮಿಳಾ ಅವರ ಸಹೋದರ ದಿನೇಶ್ ಹಾಗೂ ಇತರ ನಾಲ್ವರು ಆರೋಪಿಗಳು ಪ್ರವೀಣ್ ನನ್ನು ಸುತ್ತುವರೆದು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಈ ಸಂಬಂಧ ಪೊಲೀಸರು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿ, ಐವರು ಆರೋಪಿಗಳಾದ ಸ್ಟೀಫನ್ ಕುಮಾರ್, ಜೋತಿಲಿಂಗಂ, ಶ್ರೀರಾಮ್, ಅಶೋಕ್, ವಿಷ್ಣು ರಾಜ್ ಮತ್ತು ದಿನೇಶ್ ನನ್ನು ಬಂಧಿಸಲಾಗಿದೆ.
“ನನ್ನ ಮಗ ಹೊರಗೆ ಹೋಗಿ ಎರಡು ಗಂಟೆ ಮೇಲಾದರೂ ವಾಪಾಸ್ ಬರದೇ ಇದ್ದಾಗ, ಚಿಂತೆ ಆಗಲು ಶುರುವಾಯಿತು. ಇತ್ತ ನನ್ನ ಸೊಸೆ ಕೂಡ ಚಿಂತೆಯಲ್ಲಿದ್ದಳು. ಏನೋ ತಪ್ಪಾಗಿರಬಹುದೆನ್ನುವಾಗಲೇ ಘಟನೆ ನಡೆದಿರುವುದು ಗೊತ್ತಾಯಿತು. ತಪ್ಪಿಸ್ಥರಿಗೆ ಶಿಕ್ಷೆ ಆಗಬೇಕು. ನನ್ನ ಸೊಸೆ ಸರ್ಕಾರ ಏನಾದರೂ ಪರಿಹಾರ ನೀಡಬೇಕು” ಎಂದು ಮೃತ ಪ್ರವೀಣ್ ತಂದೆ ಗೋಪಿ ಹೇಳಿದ್ದಾರೆ.
ಇದು ಮರ್ಯಾದಾ ಹತ್ಯೆಯೋ ಅಥವಾ ಬೇರೆ ಯಾವುದಾದರೂ ಕಾರಣವಿರಬಹುದೇ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.