Arrested: ಆಸ್ಟ್ರೇಲಿಯಾ ಪ್ರಜೆ ಕಿಡ್ನ್ಯಾಪ್: 6 ಬಂಧನ
Team Udayavani, Feb 26, 2024, 12:38 PM IST
ಬೆಂಗಳೂರು: ಗಾಂಜಾ ಖರೀದಿ ಮಾಡುತ್ತಿದ್ದ ಆಸ್ಟ್ರೇಲಿಯಾ ಪ್ರಜೆ ಅಪಹರಿಸಿ ಒಂದೂವರೆ ಲಕ್ಷ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದ ತಮಿಳುನಾಡು ಮೂಲದ ಆರು ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಸಮೀಪದ ಚನ್ನ ಕೇಶವ ನಗರ ನಿವಾಸಿ ಮೋನಿಷ್ ಅಲಿ ಯಾಸ್ ಮನು(24), ಹೊಂಗಸಂದ್ರ ನಿವಾಸಿ ಲೋಕೇಶ್(2), ಬೊಮ್ಮನಹಳ್ಳಿ ನಿವಾಸಿ ಕಿಶೋರ ಶಿವ (19), ಎಂ.ಆದಿ ಅಲಿಯಾಸ್ ಆಥಿ(21), ಜಯನಗರ ನಿವಾಸಿ ದಿಲೀಪ್ ಕುಮಾರ್ (26) ಮತ್ತು ತಿಲಕ ನಗರ ನಿವಾಸಿ ಸತೀಶ್(25) ಬಂಧಿತರು. ಆರೋಪಿಗಳು ಫೆ.5ರಂದು ಆಸ್ಟ್ರೇಲಿಯಾ ಪ್ರಜೆ ಅಲೋಕ್ ರಾಣಾ ಎಂಬುವರನ್ನು ಅಪಹರಿಸಿದ್ದರು.
ಈ ಸಂಬಂಧ ಅಲೋಕ್ ರಾಣಾ ಸಹೋ ದರ ಅಮೀತ್ ರಾಣಾ ಫೆ.20 ರಂದು ದೂರು ನೀಡಿ ದ್ದರು. ಈ ಹಿನ್ನೆಲೆ ಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಕೇವಲ ಆರೇಳು ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ಸಾವಿರಾರು ರೂ. ನಗದು, ಮೊಬೈಲ್ ಮತ್ತು ವಾಹನ ಜಪ್ತಿ ಮಾಡಲಾಗಿದೆ.
ಆರೋಪಿಗಳು ಮೂಲತಃ ತಮಿಳುನಾಡಿನವರು. 2-3 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸ ವಾಗಿದ್ದಾರೆ. ಆರೋಪಿಗಳ ಪೈಕಿ ಮೋನಿಷ್ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿ ಕೊಂಡಿದ್ದ. ಜತೆ ಟ್ಯಾಟು ಹಾಕುತ್ತಿದ್ದ. ಜತೆಗೆ ಗಾಂಜಾ ವ್ಯಾಪಾರ ಮಾಡುತ್ತಿದ್ದ. ಲೋಕೇಶ್, ಸಣ್ಣ ಹೋಟೆಲ್ ನಡೆಸುತ್ತಿದ್ದ. ಕಿಶೋರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನು ಆದಿ, ದಿಲೀಪ್ ಕುಮಾರ್, ಸತೀಶ್ ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು.
ಗಾಂಜಾ ಖರೀದಿಗೆ ಬಂದಾಗ ಅಪಹರಣ: ಕೆಲ ವರ್ಷಗಳ ಹಿಂದೆಯೇ ಆಸ್ಟ್ರೇಲಿಯಾಗೆ ತೆರಳಿದ್ದ ಅಪಹೃತ ಅಲೋಕ್ ರಾಣಾ, ಅಲ್ಲಿನ ಪೌರತ್ವ ಪಡೆದುಕೊಂಡಿದ್ದಾನೆ. ಕೆಲ ತಿಂಗಳ ಹಿಂದೆ ಬೆಂಗ ಳೂರಿನ ಜೆ.ಪಿ.ನಗರದಲ್ಲಿ ವಾಸವಾಗಿರುವ ಸಹೋದರ ಅಮೀತ್ ರಾಣಾ ಮನೆಗೆ ಬಂದಿ ದ್ದಾನೆ. ಈ ವೇಳೆ ಪರಿಚಯಸ್ಥರ ಮೂಲಕ ಮೋನಿಷ್ ಪರಿಚಯವಾಗಿದ್ದು, ಆತನಿಂದ ಪದೇ ಪದೆ ಗಾಂಜಾ ಖರೀದಿಸುತ್ತಿದ್ದನು. ಆತ ಆಸ್ಟ್ರೇ ಲಿಯಾ ಪ್ರಜೆ. ಆತನ ಬಳಿ ಲಕ್ಷಾಂತರ ರೂ. ಇದೆ ಎಂಬುದು ಗೊತ್ತಾಗಿದೆ. ಬಳಿಕ ಆತನನ್ನು ತನ್ನ ಸಹಚರರ ಜೊತೆ ಸೇರಿ ಮೋನಿಷ್ ಅಪಹರಿಸಿದ್ದಾನೆ.
ಆ ನಂತರ ಅರವಿಂದ್ ಎಂಬ ಹೆಸರಿಗೆ 78 ಸಾವಿರ ರೂ., ಆದಿ ಅಲಿಯಾಸ್ ಆಥಿ ಖಾತೆಗೆ 20 ಸಾವಿರ ರೂ. ಹಣ ವರ್ಗಾಹಿಸಿಕೊಂಡಿದ್ದಾರೆ. ಅಲ್ಲದೆ, ಮತ್ತೂಮ್ಮೆ ಹಲ್ಲೆ ನಡೆಸಿ, ಸಹೋದರ ಅಮೀತ್ ರಾಣಾನಿಂದ ತುರ್ತು ಸಮಸ್ಯೆ ಎಂದು 40 ಸಾವಿರ ರೂ. ವರ್ಗಾಯಿಸಿಕೊಳ್ಳುವಂತೆ ಹೇಳಿ, ಆ ಹಣವನ್ನೂ ಆರೋಪಿಗಳು ಸುಲಿಗೆ ಮಾಡಿ ದ್ದಾರೆ. ಅಷ್ಟಾದರೂ ಮತ್ತೂಮ್ಮೆ ಅಮೀತ್ ರಾಣಾಗೆ ಕರೆ ಮಾಡಿಸಿ, ಹಣಕ್ಕೆ ಬೇಡಿಕೆ ಇಡಿಸಿ ದ್ದಾರೆ. ಅದರಿಂದ ಅನುಮಾನಗೊಂಡ ಅಮೀತ್ ರಾಣಾ, ಅಲೋಕ್ ರಾಣಾನ ಕಾರಿನ ಜಿಪಿಎಸ್ ಆಧರಿಸಿ ಸ್ಥಳಕ್ಕೆ ತೆರಳಿದ್ದಾರೆ. ಆಗ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಮೊಬೈಲ್ ನೆಟ್‌ವರ್ಕ್ ಆಧರಿಸಿ ಬಂಧನ: ಪರಾರಿ ಆಗುವಾಗ ಅಲೋಕ್ ರಾಣಾನ ಕಾರಿನಲ್ಲಿ ಮೋನಿಷ್ ಮೊಬೈಲ್ ಬಿಟ್ಟು ಹೋಗಿದ್ದ. ಈ ಮೊಬೈಲ್ ನೆಟ್‌ವರ್ಕ್ ಆಧರಿಸಿ, ಮೊದಲಿಗೆ ಆತನನ್ನು ಬಂಧಿಸಲಾಗಿತ್ತು. ಬಳಿಕ ತಮಿಳುನಾಡು ಇತರೆಡೆ ಹೋಗಿದ್ದ ಇತರೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮೈಕೋ ಲೇಔಟ್ ಉಪವಿಭಾಗದ ಎಸಿಪಿ ಎಂ.ಇ.ಮನೋಜ್, ಬೊಮ್ಮನಹಳ್ಳಿ ಠಾಣಾಧಿಕಾರಿ ಎಂ.ಚಂದ್ರಶೇಖರ್, ಪಿಎಸ್‌ಐ ಹರೀಶ್,ದರ್ಶನ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.
ಬಿಹಾರದ ಡ್ರಗ್ಸ್ ಪೆಡ್ಲರ್ ಬಂಧನ :
ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೋನಿಷ್ ಹೇಳಿಕೆ ಆಧರಿಸಿ ಬಿಹಾರ ಮೂಲದ ಗಾಂಜಾ ಪೆಡ್ಲರ್‌ನನ್ನು ಬಂಧಿಸಲಾಗಿದೆ. ಸುದ್ದಗುಂಟೆಪಾಳ್ಯ ನಿವಾಸಿ ಸತ್ಯನಾರಾಯಣ ಮಹತೋ(25) ಬಂಧಿತ. ಈತನಿಂದ 24 ಸಾವಿರ ರೂ. ಮೌಲ್ಯದ 410 ಗ್ರಾಂ ಗಾಂಜಾ, ಒಂದು ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ಬಿಹಾರ ಮೂಲದ ಸತ್ಯನಾರಾಯಣ ಮಹತೋ ಉದ್ಯೋಗ ಅರಸಿ ನಗರಕ್ಕೆ ಬಂದು ಸುದ್ದಗುಂಟೆಪಾಳ್ಯದಲ್ಲಿ ನೆಲೆಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Belagavi: ಮರಾಠ ರೆಜಿಮೆಂಟ್‌ನಲ್ಲಿ ನೇಮಕಾತಿ ರಾಲಿ; ಯುವಕರಿಂದ ನೂಕುನುಗ್ಗಲು, ತಳ್ಳಾಟ
BMTC Bus: ಎಲ್ಲ ಬಿಎಂಟಿಸಿ ಬಸ್ಸಲ್ಲೂ ಸಿಗ್ತಿಲ್ಲ ಯುಪಿಐ ಟಿಕೆಟ್
Bellary: ಶೀಘ್ರದಲ್ಲೇ ಸಿಎಂ ರಾಜೀನಾಮೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.