Reliance ‘ವಂತಾರಾ’; ಅನಂತ್ ಅಂಬಾನಿ ಅವರಿಂದ ಪ್ರಾಣಿ ಕಲ್ಯಾಣ ಉಪಕ್ರಮ ಅನಾವರಣ
ಅದ್ಭುತ ಯೋಜನೆಯ ವಿಶೇಷಗಳೇನು ತಿಳಿದುಕೊಳ್ಳಿ...
Team Udayavani, Feb 26, 2024, 5:59 PM IST
ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಸೋಮವಾರ ‘ವಂತಾರ’ (ಸ್ಟಾರ್ ಆಫ್ ದಿ ಫಾರೆಸ್ಟ್) ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮ ಭಾರತ ಮತ್ತು ವಿದೇಶಗಳಲ್ಲಿ ಗಾಯಗೊಂಡ, ಸಂಕಷ್ಟಕ್ಕೊಗೊಳಗಾದ ಮತ್ತು ಬೆದರಿಕೆಗೆ ಒಳಗಾದ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿ ಮೇಲೆ ಕೇಂದ್ರೀಕರಿಸಲಿದೆ.
ಆರ್‌ಐಎಲ್ ಮತ್ತು ರಿಲಯನ್ಸ್ ಫೌಂಡೇಶನ್‌ನ ನಿರ್ದೇಶಕ ಅನಂತ್ ಅಂಬಾನಿ ಅವರ ನೇತೃತ್ವದಲ್ಲಿ ವಂತಾರಾ ಉಪಕ್ರಮದ ಪರಿಕಲ್ಪನೆ ಮಾಡಲಾಗಿದ್ದು, “ಚಿಕ್ಕ ವಯಸ್ಸಿನಲ್ಲೇ ಉತ್ಸಾಹವಾಗಿ ಪ್ರಾರಂಭವಾದದ್ದು ಈಗ ‘ವಂತಾರಾ’. ನಮ್ಮ ಅದ್ಭುತ ಮತ್ತು ಬದ್ಧತೆಯ ತಂಡದೊಂದಿಗೆ ಮಿಷನ್ ಆಗಿ ಮಾರ್ಪಟ್ಟಿದೆ. ಭಾರತದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ರಕ್ಷಿಸುವಲ್ಲಿ ನಾವು ಗಮನಹರಿಸಿದ್ದೇವೆ” ಎಂದು ಹೇಳಿದ್ದಾರೆ.
“ನಾವು ಪ್ರಾಣಿಗಳ ಪ್ರಮುಖ ಆವಾಸಸ್ಥಾನಗಳನ್ನು ಪುನಃಸ್ಥಾಪಿಸಲು ಬಯಸುತ್ತಿದ್ದು, ಪ್ರಾಣಿಗಳಿಗೆ ತುರ್ತು ಬೆದರಿಕೆಗಳನ್ನು ಪರಿಹರಿಸಲು ಮತ್ತು ವಂತಾರಾವನ್ನು ಪ್ರಮುಖ ಸಂರಕ್ಷಣ ಕಾರ್ಯಕ್ರಮವಾಗಿಸಲು ಬಯಸುತ್ತೇವೆ. ನಮ್ಮ ಪ್ರಯತ್ನಗಳು ಭಾರತದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ, ”ಎಂದು ಅನಂತ್ ಹೇಳಿದ್ದಾರೆ.
ಭಾರತ ಮತ್ತು ವಿಶ್ವದ ಕೆಲವು ಉನ್ನತ ಪ್ರಾಣಿಶಾಸ್ತ್ರ ಮತ್ತು ವೈದ್ಯಕೀಯ ತಜ್ಞರು ವಂತಾರಾ ಮಿಷನ್‌ಗೆ ಸೇರಿಕೊಂಡಿದ್ದಾರೆ. ಕಾರ್ಯಕ್ರಮ ಸರಕಾರಿ ಸಂಸ್ಥೆಗಳು, ಸಂಶೋಧನೆ, ಶಿಕ್ಷಣ ಸಂಸ್ಥೆಗಳ ಸಕ್ರಿಯ ಸಹಯೋಗ ಮತ್ತು ಮಾರ್ಗದರ್ಶನವನ್ನು ಪಡೆಯುತ್ತಿದೆ ಎಂದು ಅನಂತ್ ಅಂಬಾನಿ ವಿಚಾರ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ
Jharkhand Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ… ಸೋರೆನ್ ಸರ್ಕಾರದ ವಿರುದ್ಧ ಕಿಡಿ
Tragedy: ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಪೌರ ಕಾರ್ಮಿಕರ ದುರಂತ ಅಂತ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.