WPL: ಯುಪಿ ವಿರುದ್ಧ ಡೆಲ್ಲಿ 9 ವಿಕೆಟ್ ಜಯಭೇರಿ
Team Udayavani, Feb 26, 2024, 11:24 PM IST
ಬೆಂಗಳೂರು: ವನಿತಾ ಪ್ರೀಮಿಯರ್ ಲೀಗ್‌ನ ಸೋಮವಾರದ ಮುಖಾಮುಖಿಯಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್‌ಗಳಿಂದ ಯುಪಿ ವಾರಿಯರ್ಗೆ ಸೋಲುಣಿಸಿತು.
ಎರಡೂ ತಂಡಗಳು ತಮ್ಮ ಆರಂಭಿಕ ಪಂದ್ಯದಲ್ಲಿ ಸೋಲನು ಭವಿಸಿದ್ದವು. ಹೀಗಾಗಿ ಪರಾಜಿತ ತಂಡಗಳ ನಡುವಿನ ಈ ಕದನ ತೀವ್ರ ಕುತೂಹಲ ಮೂಡಿಸಿತ್ತು.ಮೊದಲು ಬ್ಯಾಟಿಂಗ್ ನಡೆಸಿದ ಯುಪಿ, ದಕ್ಷಿಣ ಆಫ್ರಿಕಾದ ಮಧ್ಯಮ ವೇಗಿ ಮರಿಜಾನ್ ಕಾಪ್ ಮತ್ತು ಭಾರತದ ಎಡಗೈ ಸ್ಪಿನ್ನರ್ ರಾಧಾ ಯಾದವ್ ಅವರ ದಾಳಿಗೆ ತತ್ತರಿಸಿ 9 ವಿಕೆಟಿಗೆ ಕೇವಲ 119 ರನ್ ಮಾಡಿತು. ಜವಾಬಿತ್ತ ಡೆಲ್ಲಿ 14.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 123 ರನ್ ಬಾರಿಸಿತು.
ಮರಿಜಾನ್ ಕಾಪ್ ಕೇವಲ 5 ರನ್ ನೀಡಿ 3 ವಿಕೆಟ್ ಉಡಾಯಿಸಿದರು. ಅವರ 4 ಓವರ್‌ಗಳ ಕೋಟಾದಲ್ಲಿ ಒಂದು ಮೇಡನ್ ಆಗಿತ್ತು. ರಾಧಾ ಯಾದವ್ ಸಾಧನೆ 20ಕ್ಕೆ 4 ವಿಕೆಟ್. ಯುಪಿ ಪರ ಶ್ವೇತಾ ಸೆಹ್ರಾವತ್ ಸರ್ವಾಧಿಕ 45 ರನ್ ಹೊಡೆದರು.
ಚೇಸಿಂಗ್ ವೇಳೆ ಆರಂಭಿಕರಾದ ಶಫಾಲಿ ವರ್ಮ-ಮೆಗ್ ಲ್ಯಾನಿಂಗ್ ಯುಪಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. 14.2 ಓವರ್‌ಗಳಲ್ಲಿ 119 ರನ್ ಪೇರಿಸಿದರು. ಸ್ಕೋರ್ ಸಮಬಲಗೊಂಡಾಗ ಲ್ಯಾನಿಂಗ್ ವಿಕೆಟ್ ಬಿತ್ತು. ಎಂದಿನಂತೆ ಆಕ್ರಮಣಕಾರಿಯಾಗಿ ಆಡಿದ ಶಫಾಲಿ 43 ಎಸೆತಗಳಿಂದ ಅಜೇಯ 64 ರನ್ ಬಾರಿಸಿದರು. ಸಿಡಿಸಿದ್ದು 6 ಬೌಂಡರಿ ಹಾಗೂ 4 ಸಿಕ್ಸರ್. ಲ್ಯಾನಿಂಗ್ ಗಳಿಕೆ 51 ರನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.