Rajya Sabha; 3 ರಾಜ್ಯಗಳ 15 ಸ್ಥಾನಗಳಿಗೆ ಇಂದು ಚುನಾವಣೆ

Team Udayavani, Feb 27, 2024, 6:20 AM IST

new-parli

ಹೊಸದಿಲ್ಲಿ: ರಾಜ್ಯಸಭೆಯ 56 ಸ್ಥಾನಗಳ ಪೈಕಿ 41 ನಾಯಕರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಮಂಗಳವಾರ ಉಳಿದ 15 ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ.

ಈ 15 ಸ್ಥಾನಗಳು ಉತ್ತರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ್ದಾಗಿವೆ. ಉತ್ತರಪ್ರದೇಶದಲ್ಲಿ 10 ಸ್ಥಾನಗಳಿದ್ದು, 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಸ್‌ಪಿ ತನ್ನ 3 ಅಭ್ಯರ್ಥಿಗಳನ್ನು (ಜಯಾ ಬಚ್ಚನ್‌, ರಾಮ್‌ಜಿಲಾಲ್‌ ಸುಮನ್‌, ಅಲೋಕ್‌ ರಂಜನ್‌) ಮರುನಾಮ ನಿರ್ದೇಶನ ಮಾಡಿದೆ. ಇನ್ನು, ಬಿಜೆಪಿ 7ರ ಬದಲಾಗಿ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಒಂದು ವೇಳೆ ಬಿಜೆಪಿಯು 8ನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುತ್ತಿದ್ದರೆ, ಉ.ಪ್ರದೇಶದ ಎಲ್ಲ 10 ರಾಜ್ಯಸಭಾ ಸ್ಥಾನಗಳ ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂದರೆ, ಪ್ರತೀ ಅಭ್ಯರ್ಥಿಯು ಸುಮಾರು 37 ಪ್ರಥಮ ಆದ್ಯತೆಯ ಮತಗಳನ್ನು ಗಳಿಸಬೇಕಾಗುತ್ತದೆ.

ಇನ್ನು, ಹಿಮಾಚಲ ಪ್ರದೇಶದಲ್ಲಿ ಇರುವ ಒಂದೇ ಒಂದು ರಾಜ್ಯಸಭಾ ಸೀಟಿಗೆ ಬಿಜೆಪಿಯು ಕಾಂಗ್ರೆಸ್‌ನ ಅಭಿಷೇಕ್‌ ಮನು ಸಿಂಘ್ವಿ ವಿರುದ್ಧ ಹರ್ಷ್‌ ಮಹಾಜನ್‌ರನ್ನು ಕಣಕ್ಕಿಳಿಸಿದೆ. ತನ್ನ ಅಭ್ಯರ್ಥಿಯ ಗೆಲುವಿಗೆ ಸಾಕಷ್ಟು ಮತಗಳು ಇಲ್ಲದಿದ್ದರೂ ಬಿಜೆಪಿ ಈ ಸಾಹಸಕ್ಕೆ ಕೈಹಾಕಿದೆ. ಹಿಮಾಚಲದಲ್ಲಿ ಬಿಜೆಪಿ 25 ಶಾಸಕರನ್ನು ಹೊಂದಿದ್ದರೆ, ಕಾಂಗ್ರೆಸ್‌ 40 ಶಾಸಕರನ್ನು ಹೊಂದಿದೆ. ಇದೇ ವೇಳೆ, ಕರ್ನಾಟಕದ 4 ಸ್ಥಾನಗಳಿಗೂ ಮಂಗಳವಾರ ಚುನಾವಣೆ
ನಡೆಯಲಿದೆ.

ಅವಿರೋಧ ಆಯ್ಕೆ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಅಶೋಕ್‌ ಚವಾಣ್‌, ಕೇಂದ್ರ ಸಚಿವರಾದ ಅಶ್ವಿ‌ನಿ ವೈಷ್ಣವ್‌, ಎಲ್‌. ಮುರುಗನ್‌ ಸೇರಿದಂತೆ ಒಟ್ಟು 41 ನಾಯಕರು ಅವಿರೋಧವಾಗಿ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.

ಈ ಪೈಕಿ ಬಿಜೆಪಿಯ 20 ಮಂದಿಯಿದ್ದರೆ, ಕಾಂಗ್ರೆಸ್‌ನ 6, ಟಿಎಂಸಿಯ 4, ವೈಎಸ್‌ಆರ್‌ ಕಾಂಗ್ರೆಸ್‌ನ 3, ಆರ್‌ಜೆಡಿ, ಬಿಜೆಡಿಯ ತಲಾ ಇಬ್ಬರು, ಎನ್‌ಸಿಪಿ, ಶಿವಸೇನೆ, ಬಿಆರ್‌ಎಸ್‌ ಮತ್ತು ಜೆಡಿಯು ಪಕ್ಷದ ತಲಾ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಟಾಪ್ ನ್ಯೂಸ್

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

GST

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

Horoscope

Daily Horoscope: ಕರ್ಮದ ಫ‌ಲವನ್ನು ಸಂತೋಷದಿಂದ ಸ್ವೀಕರಿಸಿ

ರಾಜೀನಾಮೆಗೆ ಸಿದ್ಧ , ನೀವೂ ಕೊಡುತ್ತೀರಾ?: ಅಶೋಕ್‌ ಸವಾಲು

BJP: ರಾಜೀನಾಮೆಗೆ ಸಿದ್ಧ , ನೀವೂ ಕೊಡುತ್ತೀರಾ?: ಅಶೋಕ್‌ ಸವಾಲು

State Government: “ಸ್ಥಳೀಯ’ ಚುನಾವಣೆ ನಡೆಸದಿದ್ದರೆ ಅನುದಾನಕ್ಕೆ ಕತ್ತರಿ?

State Government: “ಸ್ಥಳೀಯ’ ಚುನಾವಣೆ ನಡೆಸದಿದ್ದರೆ ಅನುದಾನಕ್ಕೆ ಕತ್ತರಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GST

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

1-treee

Google ಜತೆ ಬೆಂಗಳೂರಿನ ಕ್ಲೀನ್‌ಮ್ಯಾಕ್ಸ್‌ ಸಹಯೋಗ: ಪವನ ವಿದ್ಯುತ್‌ ಉತ್ಪಾದನೆ

train-track

Railway; 5 ವರ್ಷದಲ್ಲಿ 200 ರೈಲು ಅಪಘಾ*ತಗಳು, 351 ಮಂದಿ ಸಾ*ವು: ವರದಿ

Supreme Court: ಜೈಲುಗಳಲ್ಲಿ ಜಾತಿ ತಾರತಮ್ಯ ನಿಲ್ಲಿಸಿ

Supreme Court: ಜೈಲುಗಳಲ್ಲಿ ಜಾತಿ ತಾರತಮ್ಯ ನಿಲ್ಲಿಸಿ

supreem

ವೈವಾಹಿಕ ಅತ್ಯಾಚಾ*ರ ಅಪರಾಧ: ಕೇಂದ್ರ ಸರಕಾರದಿಂದ ವಿರೋಧ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Subrahmanya: ಕುಮಾರ ಪರ್ವತ ಚಾರಣ: ಅ.6ರ ಬಳಿಕ ಅವಕಾಶ ನಿರೀಕ್ಷೆ

Navaratri Special:  ನಮ್ಮೊಳಗಿನ ರಾವಣನ ಸುಡುವುದೆಂತು…?

Navaratri Special: ನಮ್ಮೊಳಗಿನ ರಾವಣನ ಸುಡುವುದೆಂತು…?

GST

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

ಚಾರಣಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭ: ಮುಂಗಡ ನೋಂದಣಿ ಮಾಡಲು ಅವಕಾಶ

Horoscope

Daily Horoscope: ಕರ್ಮದ ಫ‌ಲವನ್ನು ಸಂತೋಷದಿಂದ ಸ್ವೀಕರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.