Rajinikanth: ಬಾಲಿವುಡ್ ನ ಖ್ಯಾತ ನಿರ್ಮಾಪಕನ ಜೊತೆ ರಜಿನಿಕಾಂತ್ ಸಿನಿಮಾ
Team Udayavani, Feb 27, 2024, 3:37 PM IST
ಮುಂಬಯಿ: ಕಾಲಿವುಡ್ ಸೂಪರ್ ಸ್ಟಾರ್ ತಲೈವಾ ರಜಿನಿಕಾಂತ್ ಇತ್ತೀಚೆಗೆ ʼಲಾಲ್ ಸಲಾಂʼ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ಮಾಡಿ ಮಿಂಚಿದ್ದರು. ಇದೀಗ ಮೊದಲ ಬಾರಿಗೆ ರಜಿನಿಕಾಂತ್ ಬಾಲಿವುಡ್ ನ ಖ್ಯಾತ ನಿರ್ಮಾಪಕನ ಜೊತೆ ಕೈಜೋಡಿಸಲಿದ್ದಾರೆ.
ಯಶಸ್ವಿ ನಿರ್ಮಾಪಕ, ನಿರ್ದೇಶಕರಾಗಿ ಬಾಲಿವುಡ್ ನಲ್ಲಿ ಮಿಂಚಿರುವ ಸಾಜಿದ್ ನಾಡಿಯಾಡ್ವಾಲಾ ʼಕಿಕ್ʼ, ʼಹೌಸ್‌ಫುಲ್, ʼಜುಡ್ವಾ 2ʼ ಹೀಗೆ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಗ್ರ್ಯಾಂಡ್ಸನ್ ಎಂಟರ್ಟೈನ್ಮೆಂಟ್ ಬ್ಯಾನರ್ ಮೂಲಕ ನಿರ್ಮಾಪಕರಾಗಿ ಯಶಸ್ಸಿ ಸಾಧಿಸಿರುವ ಅವರು, ಇದೇ ಮೊದಲ ಬಾರಿಗೆ ಸೌತ್ ಸೂಪರ್ ಸ್ಟಾರ್ ರಜಿನಿಕಾಂತ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ.
ಇತ್ತೀಚೆಗೆ ಅವರು ರಜಿನಿಕಾಂತ್ ಅವರನ್ನು ಭೇಟಿಯಾಗಿದ್ದು, ಲೆಜೆಂಡರಿ ರಜನಿಕಾಂತ್ ಸರ್ ಅವರೊಂದಿಗೆ ಕೈಜೋಡಿಸುತ್ತಿರುವುದು ನಿಜವಾದ ಗೌರವ. ಈ ಅವಿಸ್ಮರಣೀಯ ಪ್ರಯಾಣವನ್ನು ಒಟ್ಟಿಗೆ ಪ್ರಾರಂಭಿಸುತ್ತಿರುವುದು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ” ಎಂದು ಸಾಜಿದ್ ಬರೆದುಕೊಂಡಿದ್ದಾರೆ.
ಸಾಜಿದ್ – ರಜಿನಿಕಾಂತ್ ಜೊತೆಯಾಗಿ ಯಾವ ಸಿನಿಮಾವನ್ನು ಮಾಡಲಿದ್ದಾರೆ, ಅದರ ಕಥೆಯೇನ ಎನ್ನುವುದರ ಬಗ್ಗೆ ಇದುವರಗೆ ಯಾವ ಮಾಹಿತಿಯೂ ಹೊರಬಿದ್ದಿಲ್ಲ.
ಸದ್ಯ ರಜಿನಿಕಾಂತ್ ‘ವೆಟ್ಟೈಯನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ಟಿಜೆ ಜ್ಞಾನವೇಲ್ ಅವರು ನಿರ್ದೇಶನ ಮಾಡಲಿದ್ದಾರೆ.
ಸಾಜಿದ್ ʼಚಂದು ಚಾಂಪಿಯನ್ʼ ಮತ್ತು ʼಹೌಸ್‌ಫುಲ್ 5ʼ ಸಿನಿಮಾಗಳ ರಿಲೀಸ್ ನ ತಯಾರಿಯಲ್ಲಿದ್ದಾರೆ.
It’s a true honour to collaborate with the legendary @rajinikanth Sir! Anticipation mounts as we prepare to embark on this unforgettable journey together!
– #SajidNadiadwala @WardaNadiadwala pic.twitter.com/pRtoBtTINs— Nadiadwala Grandson (@NGEMovies) February 27, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರಗೆ ದಾಖಲು
Success: ಯಶಸ್ವಿ ಜೀವನಕ್ಕೆ ಸೂತ್ರಗಳು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.