Cricket: ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿ T20Iಯಲ್ಲಿ ವಿಶ್ವ ದಾಖಲೆ ಬರೆದ ನಮೀಬಿಯಾ ಆಟಗಾರ
Team Udayavani, Feb 27, 2024, 4:54 PM IST
ಕಠ್ಮಂಡು: ನೇಪಾಳ ವಿರುದ್ಧದ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ನಮೀಬಿಯಾ ತಂಡದ 22 ವರ್ಷದ ಯುವ ಆಟಗಾರನೊಬ್ಬ ಅತ್ಯಂತ ವೇಗದ ಶತಕವನ್ನು ಬಾರಿಸುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದಾನೆ.
ನಮೀಬಿಯಾದ ಜಾನ್ ನಿಕೋಲ್ ಲಾಫ್ಟಿ-ಈಟನ್ ನೇಪಾಳ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ವೇಗದ ಶತಕವನ್ನು ಬಾರಿಸಿ ಹೊಸ ದಾಖಲೆಯನ್ನು ಬರೆದಿದ್ದಾರೆ.
ನೇಪಾಳ- ನಮೀಬಿಯಾ ಹಾಗೂ ನೆದರ್ಲ್ಯಾಂಡ್ಸ್ ನಡುವಿನ ತ್ರಿಕೋನ ಟಿ-20 ಸರಣಿಯ ಮೊದಲ ಪಂದ್ಯ ಮಂಗಳವಾರ(ಫೆ.27 ರಂದು) ನೇಪಾಳ – ನಮೀಬಿಯಾ ನಡುವೆ ನಡೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನಮೀಬಿಯಾ 20 ಓವರ್ ಗಳಲ್ಲಿ 206/4 ಗಳಿಸಿತು. ಆರಂಭಿಕರಾದ ಮೈಕಲ್ ವ್ಯಾನ್ ಲಿಂಗೆನ್ 19 ಎಸೆತಗಳಲ್ಲಿ 20 ರನ್ ಮತ್ತು ಮಲನ್ ಕ್ರುಗರ್ 48 ಎಸೆತಗಳಲ್ಲಿ 59 ರನ್ ಗಳಿಸಿದರು. 62 ಕ್ಕೆ 3 ವಿಕೆಟ್ ಕಳೆದುಕೊಂಡ ಬಳಿಕ ಕ್ರಿಸ್ ಗೆ ಬಂದ ನಿಕೋಲ್ ಲಾಫ್ಟಿ-ಈಟನ್ 11 ಬೌಂಡರಿ, 8 ಸಿಕ್ಸರ್ ಬಾರಿಸಿ 33 ಎಸೆತಗಳಲ್ಲಿ ಶತಕವನ್ನು ಸಿಡಿಸಿದರು. 101 ರನ್ ಗಳಿಸಿ ಅಬಿನಾಶ್ ಬೋಹರಾ ಎಸೆತದಲ್ಲಿ ಗುಲ್ಸನ್ ಝಾ ಬಿ ಅವರಿಗೆ ಕ್ಯಾಚ್ ಕೊಟ್ಟು ಕೊನೆಯ ಓವರ್ ನಲ್ಲಿ ಔಟಾದರು.
ನೇಪಾಳ ವಿರುದ್ಧ ಶತಕ ಬಾರಿಸಿದ ನಂತರ ಲಾಫ್ಟಿ-ಈಟನ್ ಈಗ ವೇಗದ T20I ಶತಕದೊಂದಿಗೆ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ಹಿಂದೆ 2023 ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ 34 ಎಸೆತಗಳಲ್ಲಿ ನೇಪಾಳದ ಕುಶಾಲ್ ಮಲ್ಲ ಶತಕವನ್ನು ಬಾರಿಸಿ ದಾಖಲೆ ಬರೆದಿದ್ದರು.
ಈ ಶತಕವನ್ನು ಬಾರಿಸುವ ವೇಳೆ ನೇಪಾಳದ ಕುಶಾಲ್ ಮಲ್ಲ ಅವರು ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು.
ಈ ಹಿಂದೆ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ 2017 ರ ಅಕ್ಟೋಬರ್ ನಲ್ಲಿ ಪಾಚೆಫ್‌ಸ್ಟ್ರೂಮ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 36 ಎಸೆತಗಳಲ್ಲಿ 101 ರನ್ ಬಾರಿಸಿದ್ದರು. 2017ರ ಡಿಸೆಂಬರ್‌ನಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 43 ಎಸೆತಗಳಲ್ಲಿ 118 ರನ್ ಗಳಿಸಿದ್ದರು. ಜೆಕ್ ಗಣರಾಜ್ಯದ ಸುದೇಶ್ ವಿಕ್ರಮಶೇಖರ ಅವರು ಆಗಸ್ಟ್ 2019 ರಲ್ಲಿ ಇಲ್ಫೋವ್ ಕೌಂಟಿಯಲ್ಲಿ ನಡೆದ ಕಾಂಟಿನೆಂಟಲ್ ಕಪ್‌ನಲ್ಲಿ ಟರ್ಕಿ ವಿರುದ್ಧ 36 ಎಸೆತಗಳಲ್ಲಿ 104 ರನ್ ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.