Bahubali ಜೀವನ ಸಿದ್ಧಾಂತ ಸೀಮಾತೀತ: ವೀರಪ್ಪ ಮೊಯ್ಲಿ
ವೇಣೂರು ಭಗವಾನ್ ಬಾಹುಬಲಿ ಸ್ವಾಮಿಗೆ ಆರನೇ ದಿನದ ಮಜ್ಜನ, ಧಾರ್ಮಿಕ ಸಭೆ
Team Udayavani, Feb 28, 2024, 12:39 AM IST
ಬೆಳ್ತಂಗಡಿ: ದೇಶ ಮತ್ತು ಭಾಷೆಯ ಸೀಮೆಯನ್ನು ಮೀರಿ, ಬಾಹುಬಲಿಯ ಜೀವನ ಸಿದ್ಧಾಂತ ನಿಂತಿದೆ. ಜೈನರ ಪ್ರಭಾವದಿಂದ ನಾನು ಶುದ್ಧ ಸಸ್ಯಾಹಾರಿಯಾಗಿದ್ದು ನಿರಂತರ ಧಾರ್ಮಿಕ ಗ್ರಂಥಗಳ ಅಧ್ಯಯನ ಮತ್ತು ಸಂಶೋಧನೆಯನ್ನು ತಪಸ್ಸಿನಂತೆ ಮಾಡುತ್ತಿದ್ದೇನೆ. ಯುವಜನತೆ ಇಂದುಧಾರ್ಮಿಕ ಗ್ರಂಥಗಳ ಅಧ್ಯಯನ ಮಾಡುವುದರೊಂದಿಗೆ ಬದುಕಿನ ಸಾರ್ಥಕ ವೃತ್ತಾಂತವನ್ನು ಅರಿತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದರು.
ವೇಣೂರಿನ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಾ ಕಾಭೀಷೇಕದ ಆರನೇ ದಿನವಾದ ಮಂಗಳ
ವಾರ ಯುಗಳ ಮುನಿಗಳಾದ ಪೂಜ್ಯ ಅಮೋಘಕೀರ್ತಿ ಮುನಿ ಮಹಾರಾಜರು ಮತ್ತು ಪೂಜ್ಯ ಅಮರಕೀರ್ತಿ ಮುನಿ ಮಹಾರಾಜರು ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾನವ ಗುಣಗಳನ್ನು ತ್ಯಜಿಸಿ ಆದರ್ಶ ಮಾನವರಾಗಿ ಉತ್ತಮ ಜೀವನ ನಡೆಸಬಹುದು. ಪ್ರಾಚೀನ ಇತಿಹಾಸ, ನಾಗರಿಕತೆ ಮತ್ತು ಸಂಸ್ಕೃತಿ ಅಧ್ಯಯನದಿಂದ ನಾವು ದುರ್ಗುಣಗಳನ್ನು ತ್ಯಜಿಸಿ ಉತ್ತಮ ಸಂಸ್ಕಾರದಿಂದ ಮಾನವೀಯತೆಯೊಂದಿಗೆ ಸಾರ್ಥಕ ಜೀವನ ನಡೆಸಬಹುದು. ಜೈನಕಾಶಿ ಮೂಡುಬಿದಿರೆ ನನ್ನ ಹುಟ್ಟೂರಾಗಿದ್ದು ಜೈನ ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರಾಗಿದ್ದ ದಿ| ಟಿ. ರಘುಚಂದ್ರ ಶೆಟ್ಟಿ ಮತ್ತು ದಿ| ಕೆ. ಕಾಂತ ರೈ ಅವರ ಪ್ರೇರಣೆ, ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ನಾನು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತಾಯಿತು. ಜೈನ ಸಮಾಜದ ನಿರಂತರ ಸಂಪರ್ಕ, ಅವರ ಜೀವನ ಶೈಲಿ, ಪ್ರೀತಿ-ವಿಶ್ವಾಸ ಮತ್ತು ನಾಯಕತ್ವ ಗುಣ ತನ್ನ ಉಜ್ವಲ ಭವಿಷ್ಯ ರೂಪಿಸುವಲ್ಲಿ ವಿಶೇಷ ಪ್ರಭಾವ ಬೀರಿದೆ ಎಂದರು.
ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಬೆಳ್ಳಿಬೀಡುಮತ್ತು ಜೈನ ಮಠದ ನಡುವಿನ ಅವಿನಾಭಾವ ಸಂಬಂಧವನ್ನು ಸ್ಮರಿಸಿ ದರು. ಸೇವಾಕರ್ತರಾದ ಹೇಮರಾಜ್ ಬೆಳ್ಳಿಬೀಡು ಅವರನ್ನು ಗೌರವಿಸ ಲಾಯಿತು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ, ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಪಿ. ಜಯರಾಜ ಕಂಬಳಿ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಮತ್ತು ಎಂಸಿಎಸ್ ಬ್ಯಾಂಕಿನ ಸಿಇಒ ಚಂದ್ರಶೇಖರ ಉಪಸ್ಥಿತರಿದ್ದರು.
ಕೆ. ಹೇಮರಾಜ್ ಬೆಳ್ಳಿಬೀಡು ಸ್ವಾಗತಿಸಿ, ಸ್ಮಿತೇಶ್ ಪತ್ರಾವಳಿ ವಂದಿಸಿದರು. ಮಹಾವೀರ ಜೈನ್ ಮೂಡುಕೋಡಿಗುತ್ತು ನಿರ್ವಹಿಸಿದರು.
ಇಂದಿನ ಮಜ್ಜನ ಕಾರ್ಯಕ್ರಮ
ಯುಗಳ ಮುನಿಶ್ರೀಗಳು, ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ವರೂರು ಜೈನಮಠದ ಶ್ರೀ ಧರ್ಮಸೇನ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಶ್ರೀ ಕ್ಷೇತ್ರ ಕೊಲ್ಲಾಪುರ ಜೈನ ಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಭಟ್ಟಾಚಾರ್ಯವರ್ಯ ಅವರ ಪಾವನ ಸಾನ್ನಿಧ್ಯದಲ್ಲಿ ರೋಹಿಣಿ ಬಾವಂತಬೆಟ್ಟು ಮತ್ತು ಮಕ್ಕಳು, ಸೊಸೆ, ಅಳಿಯಂದಿರು ಹಾಗೂ ಮೊಮ್ಮಕ್ಕಳ ಸೇವಾರ್ಥ ನಿತ್ಯವಿಧಿ ಸಹಿತ ಯಾಗಮಂಡಲ, ಆರಾಧನೆ, ರಾಜ್ಯಾಭಿಷೇಕ, ರಾಜ್ಯಭಾರ, ಸಂಜೆ 4.05ರ ಕರ್ಕಾಟಕ ಲಗ್ನದಲ್ಲಿ ವೈರಾಗ್ಯಪೂರ್ವಕ ದೀಕ್ಷಾ ವಿಧಿ, ಕೇಶಲೋಚನಾ ವಿಧಿ, ಪರಿಷ್ಕರಣ ಕಲ್ಯಾಣ, ಆಗ್ರೋದಕ ಮೆರವಣಿಗೆ ನಡೆದು ಸಂಜೆ 216 ಕಲಶಗಳಿಂದ ಮಹಾಮಸ್ತಕಾಭಿಷೇಕ ಜರಗಲಿದೆ.
ಇಂದಿನ ಧಾರ್ಮಿಕ ಸಭೆ ಕಾರ್ಯಕ್ರಮ
ಅಪರಾಹ್ನ 3ಕ್ಕೆ ಜರಗುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಹಿಸಲಿದ್ದಾರೆ. ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಚೆನ್ನೈಯ ಐಎಎಫ್ ಇದರ ಗ್ರೂಪ್ ಕ್ಯಾಪ್ಟನ್ ವೀರಚಕ್ರ ಅಭಿನಂದನ್ ವರ್ಧಮಾನ್, ಜೈಪುರದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಉಮೇಶ ಭಂಡಾರಿ, ಬೆಂಗಳೂರು ಗ್ರೀನ್ ಚೆಫ್ ಸ್ಥಾಪಕಾಧ್ಯಕ್ಷ ಸುಖಲಾಲ್ ಜೈನ್, ಬೆಂಗಳೂರಿನ ಮೈಕ್ರೋ ಲ್ಯಾಬ್ ಅಧ್ಯಕ್ಷ ದಿಲೀಪ್ ಸುರಾನ್, ಉಜಿರೆ ಎಸ್‌ಡಿಎಂ ಸೊಸೈಟಿಯ ಪ್ರಾಜೆಕ್ಟ್ ಡೈರೆಕ್ಟರ್ ಶ್ರೇಯಸ್ ಕುಮಾರ್, ಉದ್ಯಮಿ ಕಿರಣ್ ಜೈನ್ ಆಹ್ವಾನಿತ ಗಣ್ಯರಾಗಿರುವರು, ಸೇವಾಕರ್ತರಾದ ಸ್ವಸ್ತಿಕ್ ಜೈನ್ ಭಾಗವಹಿಸಲಿದ್ದಾರೆ.
ಪ್ರಾಧ್ಯಾಪಕಿ ಡಾ| ಪದ್ಮಿನಿ ನಾಗರಾಜ್ ಉಪನ್ಯಾಸ ನೀಡುವರು.ಸಂಜೆ ಸಂಗೀತ ಸುಧೆ, ಭರತನಾಟ್ಯ, ತುಳುನಾಡ ವೈಭವ ಇತ್ಯಾದಿ ಜರಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.