ಭೂತಳದಲ್ಲಿ ಒರತೆಯ ಕೊರತೆ: ಬರಿದಾಗುತ್ತಿದೆ ಅಂತರ್ಜಲ

ಅಂತರ್ಜಲ ಸ್ಥಿರ ಮಟ್ಟ 21 ಮೀಟರ್‌ಗೆ ಇಳಿಕೆ

Team Udayavani, Feb 28, 2024, 6:45 AM IST

ಭೂತಳದಲ್ಲಿ ಒರತೆಯ ಕೊರತೆ: ಬರಿದಾಗುತ್ತಿದೆ ಅಂತರ್ಜಲ

ಮಂಗಳೂರು: ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ಅತಿಯಾಗಿ ಬೋರ್‌ವೆಲ್‌ ಕೊರೆತದ ಪರಿಣಾಮ ಜಿಲ್ಲೆಯಲ್ಲೂ ಕೆರೆ ಬಾವಿಗಳು ಬತ್ತಿವೆ. ಅಂತರ್ಜಲ ಪ್ರಮಾಣ ಗಣನೀಯ ಕುಸಿತವಾಗಿದೆ. ಪ್ರಸಕ್ತ ಸಾಲಿನಲ್ಲಿ ವಾಡಿಕೆಯ ಮಳೆಯಾಗದ ಕಾರಣದಿಂದ ಮೂಡುಬಿದಿರೆ ಹಾಗೂ ಮಂಗಳೂರು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.

ದ.ಕ.ದಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲದ ಪ್ರಮಾಣ ಇಳಿ ಮುಖವಾಗುತ್ತಿದೆ. ಜಿಲ್ಲೆಯಾದ್ಯಂತ ಕೃಷಿ, ಗೃಹೋಪಯೋಗ, ಕೈಗಾರಿಕಾ ಉಪಯೋಗಕ್ಕಾಗಿ ಬೋರ್‌ವೆಲ್‌ ಕೊರೆ ಯಲಾಗುತ್ತದೆ. ನೀರಿನ ಸಮಸ್ಯೆ ಕಂಡುಬಂದ ವೇಳೆ ಭೂಗರ್ಭದ ನೀರಿನತ್ತ ಚಿತ್ತ ಹರಿಸಲಾಗುತ್ತಿದೆ. ಪರಿಣಾಮ ಭೂಮಿಯೊಳಗಿನ ನೀರಿನ ಸ್ಥಿರ ಮಟ್ಟದಲ್ಲೂ ಇಳಿಕೆಯಾಗುತ್ತಿದೆ. 2021ರಲ್ಲಿ 11.99 ಮೀ. ಆಳದಲ್ಲಿದ್ದ ಸ್ಥಿರಮಟ್ಟ 2023ರಲ್ಲಿ ಬರೋಬ್ಬರಿ 21 ಮೀ. ಆಳಕ್ಕೆ ತಲುಪಿದೆ. ಈ ಸಾಲಿನಲ್ಲಿ ಜನವರಿ ಅಂತ್ಯದ ವರೆಗೆ 15.23 ಮೀ.ನಲ್ಲಿದ್ದು ಮೇಯಲ್ಲಿ ಮತ್ತಷ್ಟು ಆಳಕ್ಕೆ ಇಳಿಯುವ ಆತಂಕ ಇದೆ.

ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ದ.ಕ. ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರ ಕೊರತೆಯಾಗಿದೆ. ವಾಡಿಕೆಯ ಮಳೆಯೇ ಸುರಿಯದ ಹಿನ್ನೆಲೆ ನೀರಿನ ತತ್ವಾರ ಎದುರಾಗುವ ಆತಂಕ ಹೆಚ್ಚಿದೆ. ಈ ನಡುವೆ ಬೇಸಗೆ ಸುಡು ಬಿಸಿಲಿನ ಕಾರಣದಿಂದಾಗಿ ಅಣೆಕಟ್ಟುಗಳಲ್ಲಿ ನೀರು ಬೇಗನೇ ಆವಿಯಾಗುವುದು ಮತ್ತೂಂದು ಸಮಸ್ಯೆ.

ಕೈಗಾರಿಕೆಗಳಲ್ಲಿ ಮಳೆ ನೀರು ಕೊಯ್ಲು
ಅಂತರ್ಜಲ ಇಲಾಖೆಯಿಂದ ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಕೈಗಾರಿಕೆಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಸರಿಸುಮಾರು 6 ತಿಂಗಳಿಗೆ ಬೇಕಾದ ಮಳೆ ನೀರನ್ನು ಭೂಮಿಯೊಳಗೆ ಟ್ಯಾಂಕ್‌ ನಿರ್ಮಿಸಿ ಸಂಗ್ರಹಿಸುವ ಮೂಲಕ ಅಂತರ್ಜಲವನ್ನು ಅವಲಂಬಿಸುವುದು ತಪ್ಪುತ್ತದೆ. ಮಂಗಳೂರು ವಿಮಾನ ನಿಲ್ದಾಣ, ಎಚ್‌ಪಿಸಿಎಲ್‌, ಪುತ್ತೂರಿನ ರೈತ ಬಂಧು ಸೇರಿದಂತೆ ಹತ್ತಕ್ಕೂ ಅಧಿಕ ಸಂಸ್ಥೆಗಳು ಮಳೆನೀರು ಕೊಯ್ಲು ಮೂಲಕ ನೀರು ಸಂಗ್ರಹ ಕಾರ್ಯ ನಡೆಸುತ್ತಿವೆ.

ಈಚಿನ ವರ್ಷಗಳಲ್ಲಿ ಸಾವಿರ ಅಡಿಯ ತನಕ ಅಗೆದರೂ ನೀರಿಲ್ಲ ಎಂಬಂತಾಗಿದೆ. ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಸರಾಸರಿ 800 ಅಡಿ, ಉಳ್ಳಾಲ, ಬಂಟ್ವಾಳ, ಮೂಡುಬಿದಿರೆ, ಮಂಗಳೂರಿನಲ್ಲಿ ಸರಾಸರಿ 500 ಅಡಿ, ಕಡಬ, ಸುಳ್ಯದಲ್ಲಿ 600 ಅಡಿ ಸರಾಸರಿಯಲ್ಲಿ ನೀರಿನ ಒರತೆ ಸಿಗುತ್ತಿದೆ. ಈ ತಾಲೂಕುಗಳಲ್ಲಿ 800 ಅಡಿ ಮೀರಿದ ಬಳಿಕವೂ ನೀರಿನ ಪಸೆ ಸಿಗದ ಉದಾಹರಣೆಗಳೂ ಇವೆ.

ಹಿತ ಮಿತ ಬಳಕೆ ಅಗತ್ಯ
ಹರಿಯುವ ನೀರನ್ನು ನಿಲ್ಲಿಸಬೇಕು. ನಿಂತ ನೀರನ್ನು ಇಂಗಿಸಬೇಕು. ಅಂತರ್ಜಲ ಅತಿಯಾಗಿ ಬಳಕೆಯ ಮೇಲೆ ನಿಯಂತ್ರಣವಿರಬೇಕು. ಬೋರ್‌ವೆಲ್‌ಗ‌ಳನ್ನು ಮರುಪೂರಣಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ವಿವೇಚನಾ ರಹಿತವಾಗಿ ಅಂತರ್ಜಲ ಬಳಸಲಾಗುತ್ತಿದ್ದು ಇದಕ್ಕೆ ಮಿತಿ ಇರಬೇಕು. ರೈತರು ಮಳೆಯಾಧಾರಿತ ಬೆಳೆಗಳನ್ನು ಬೆಳೆಸುತ್ತ ಹೆಚ್ಚು ಆಸಕ್ತಿ ವಹಿಸಬೇಕು. ನೀರನ್ನು ನಿಯಮಿತ ಹಾಗೂ ನ್ಯಾಯಯುತವಾಗಿ ಬಳಸಬೇಕು.

ಕೊಳವೆ ಬಾವಿ ಕೊರೆಯುವುದಕ್ಕೆ ತಡೆಯೊಡ್ಡುವುದಾಗಲಿ, ಇಂತಿಷ್ಟೇ ಅಡಿ ಕೊರೆಯಬೇಕೆನ್ನುವ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಜನರಾಗಿಯೇ ಮುಂದೆ ಎದುರಾಗಬಹುದಾದ ನೀರಿನ ಕ್ಷಾಮದ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಮುಂದಿನ ತಲೆಮಾರು ಜಲ ಕ್ಷಾಮದಿಂದ ದೂರ ಉಳಿಯಬೇಕೆಂದರೆ, ಇಂದು ಎಚ್ಚರವಹಿಸಬೇಕು. ಅನಗತ್ಯ ಪೋಲು ಮಾಡದೆ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಬಳಸುವುದು ಜಲ ಸಂರಕ್ಷಣೆಯ ಭಾಗವಾಗುತ್ತದೆ.
-ಶೇಖ್‌ ದಾವೂದ್‌, ಹಿರಿಯ ಭೂವಿಜ್ಞಾನಿ

-ಸಂತೋಷ್‌ ಮೊಂತೇರೊ

ಟಾಪ್ ನ್ಯೂಸ್

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.