Viral: ಅವಳೇ ಬೇಕೆಂದ ಮಗ: 13ನೇ ವಯಸ್ಸಿನಲ್ಲೇ ಬಾಲಕಿ ಜೊತೆ ನಿಶ್ಚಿತಾರ್ಥ ಮಾಡಿಕೊಟ್ಟ ಪೋಷಕರು
Team Udayavani, Feb 28, 2024, 12:27 PM IST
ನವದೆಹಲಿ: ನಮ್ಮಲ್ಲಿ ಮದುವೆ ಆಗಬೇಕಾದರೆ ಹುಡುಗರಿಗೆ 21 ವರ್ಷ, ಯುವತಿಯರಿಗೆ 18 ತುಂಬಿರಬೇಕು. ಹುಡುಗರ ವಯಸ್ಸು 21 ಮೀರಿದರೂ, ಒಂದೊಳ್ಳೆ ಕೆಲಸ ಸಿಕ್ಕ ಬಳಿಕವಷ್ಟೇ 25 ರ ಮೇಲೆಯೇ ಹುಡುಗರು ಮದುವೆ ಆಗುತ್ತಾರೆ. ಆದರೆ ಇಲ್ಲೊಬ್ಬ ಬಾಲಕನಾಗಿದ್ದಾಗಲೇ ಮದುವೆ ಆಗಲು ಸಿದ್ದವಾಗಿದ್ದಾನೆ.!
13 ವರ್ಷದ ಬಾಲಕ, 12 ವರ್ಷದ ಬಾಲಕಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿರುವುದರ ಜೊತೆ ಆಕ್ರೋಶಕ್ಕೆ ಕಾರಣವಾಗಿದೆ. ಇದು ನಡೆದಿರುವುದು ಪಾಕಿಸ್ತಾನದಲ್ಲಿ. ಪಾಕ್ ಕಾನೂನು ಪ್ರಕಾರ ಪುರುಷರಿಗೆ ಕಾನೂನುಬದ್ಧ ವಿವಾಹ ವಯಸ್ಸು 18 ಆಗಿದ್ದು, ಆದರೆ ಯುವತಿಯರಿಗೆ 16 ಆಗಿದೆ. ಸಿಂಧ್ ಪ್ರಾಂತ್ಯವು ಇಬ್ಬರ ವಯಸ್ಸು 18 ಆಗಿರಬೇಕೆನ್ನುವ ಶಾಸನವನ್ನು 2013 ರಲ್ಲಿ ಅಂಗೀಕರಿಸಿದೆ. ಆದರೆ ಇದು ಎಲ್ಲೆಡೆ ಕಾರ್ಯರೂಪಕ್ಕೆ ಬಂದಿಲ್ಲ.
ಆದರೆ ಈ ವಯಸ್ಸಿಗೂ ಮುನ್ನವೇ ನಿಶ್ಚಿತಾರ್ಥ ಮಾಡಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅಷ್ಟಕ್ಕೂ ಇದು ಎರಡೂ ಮನೆಯವರು ಎದುರು ನಿಂತುಕೊಂಡೇ ಮಾಡಿಕೊಟ್ಟಿರುವ ನಿಶ್ಚಿತಾರ್ಥವಾಗಿದೆ. ಇದಕ್ಕೆ ಮುಖ್ಯ ಕಾರಣ ಬಾಲಕನ ಹಟ.!
ಹೌದು ಬಾಲಕ, ತನ್ನ ಪೋಷಕರ ಬಳಿ, ತಾನು ನೋಡಿದ ಹುಡುಗಿಯ ಜೊತೆ ತನಗೆ ವಿವಾಹ ಮಾಡಿಕೊಟ್ಟರೆ ಮಾತ್ರ ತಾನು ಓದುವುದಾಗಿ ಹೇಳಿದ್ದಾನೆ. ಏನೇ ಮಾಡಿದರೂ ಹಟ ಬಿಡದ ಬಾಲಕನ ಮಾತಿಗೆ ಪೋಷಕರು ಮಣಿದಿದ್ದಾರೆ.
ಬಾಲಕಿಯ ತಾಯಿಗೆ 16ನೇ ವಯಸ್ಸಿನಲ್ಲಿ ಮದುವೆಯಾಗಿದೆ. ಇದಕ್ಕಾಗಿ ಮಗಳ ಮದುವೆಗೆ ಅವರು ಒಪ್ಪಿಕೊಂಡಿದ್ದಾರೆ. ಇನ್ನು ಬಾಲಕನ ತಾಯಿಗೆ 25 ರ ವಯಸ್ಸಿನಲ್ಲಿ ವಿವಾಹವಾಗಿದ್ದು, ಇಷ್ಟು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುವ ಮಗನ ಬಯಕೆಯನ್ನು ಅವರು ಬೆಂಬಲಿಸಿದ್ದಾರೆ.
ನಿಶ್ಚಿತಾರ್ಥ ಸಮಾರಂಭದ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ನೆಟ್ಟಿಗರ ಗಮನ ಸೆಳೆದಿದೆ. “ಇದು ಅತಿಯಾಯಿತು” ಎಂದು ಒಬ್ಬರು ಬರೆದುಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.