Cricket: ತನುಷ್ ಕೋಟ್ಯಾನ್-ತುಷಾರ್ ದೇಶಪಾಂಡೆ : 10ನೇ, 11ನೇ ಕ್ರಮಾಂಕದ ಶತಕವೀರರು
Team Udayavani, Feb 28, 2024, 7:30 AM IST
ಮುಂಬಯಿ: “ರಣಜಿ ಕಿಂಗ್’ ಖ್ಯಾತಿಯ ಮುಂಬಯಿ ತಂಡ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಗುಜರಾತ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದು ಪ್ರಥಮ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಉಪಾಂತ್ಯ ಪ್ರವೇಶಿಸಿತು. ಈ ಹಾದಿಯಲ್ಲಿ ಮುಂಬಯಿಯ ಆಲ್‌ರೌಂಡರ್‌ಗಳಾದ ತನುಷ್ ಕೋಟ್ಯಾನ್ ಮತ್ತು ತುಷಾರ್ ದೇಶಪಾಂಡೆ ಶತಕ ಬಾರಿಸಿ ಇತಿಹಾಸದ ಪುಟವನ್ನು ಅಲಂಕರಿಸಿದರು. ಇವರು ಸೆಂಚುರಿ ಬಾರಿಸಿದ್ದು 10ನೇ ಹಾಗೂ 11ನೇ ಕ್ರಮಾಂಕದಲ್ಲಿ ಎಂಬುದು ವಿಶೇಷ.
ರಣಜಿ ಇತಿಹಾಸದಲ್ಲಿ ತಂಡವೊಂದರ 10ನೇ ಹಾಗೂ 11ನೇ ಕ್ರಮಾಂಕದ ಆಟಗಾರರು ಒಟ್ಟೊಟ್ಟಿಗೆ ಶತಕ ಬಾರಿಸಿದ ಮೊದಲ ನಿದರ್ಶನ ಇದಾಗಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದ ಕೇವಲ 2ನೇ ದೃಷ್ಟಾಂತ. ಮೊದಲ ನಿದರ್ಶನಕ್ಕೂ ಭಾರತ ಸಾಕ್ಷಿಯಾಗಿರುವುದು ವಿಶೇಷ. 1946ರ ಇಂಗ್ಲೆಂಡ್ ಪ್ರವಾಸದ ವೇಳೆ ಸರ್ರೆ ಕೌಂಟಿ ವಿರುದ್ಧ ಓವಲ್‌ನಲ್ಲಿ ಆಡಲಾದ ಪಂದ್ಯದಲ್ಲಿ ಚಂದು ಸರ್ವಟೆ ಮತ್ತು ಶುತೆ ಬ್ಯಾನರ್ಜಿ ಶತಕ ಬಾರಿಸಿದ್ದರು.
232 ರನ್ ಜತೆಯಾಟ
ಬರೋಡ ವಿರುದ್ಧ ತನುಷ್ ಕೋಟ್ಯಾನ್ ಅಜೇಯ 120 ರನ್ ಬಾರಿಸಿದರೆ (10 ಬೌಂಡರಿ, 4 ಸಿಕ್ಸರ್), ತುಷಾರ್ ದೇಶಪಾಂಡೆ 123 ರನ್ ಹೊಡೆದರು (10 ಬೌಂಡರಿ, 8 ಸಿಕ್ಸರ್). ಇಬ್ಬರೂ 129 ಎಸೆತ ಎದುರಿಸಿದ್ದು, 10 ಬೌಂಡರಿ ಹೊಡೆದದ್ದನ್ನು ಕ್ರಿಕೆಟಿನ ಸ್ವಾರಸ್ಯ ಎನ್ನಲಡ್ಡಿಯಿಲ್ಲ.
ಈ ಜೋಡಿಯಿಂದ ಅಂತಿಮ ವಿಕೆಟಿಗೆ 232 ರನ್ ಒಟ್ಟುಗೂಡಿತು. ಕೇವಲ 2 ರನ್ನಿನಿಂದ ರಣಜಿಯಲ್ಲಿ ಕೊನೆಯ ವಿಕೆಟಿಗೆ ನೂತನ ದಾಖಲೆ ತಪ್ಪಿಹೋಯಿತು. 1991-92ರ ಸೀಸನ್‌ನಲ್ಲಿ ದಿಲ್ಲಿಯ ಅಜಯ್ ಶರ್ಮ ಮತ್ತು ಮಣಿಂದರ್ ಸಿಂಗ್ ಮುಂಬಯಿ ವಿರುದ್ಧ 233 ರನ್ ಪೇರಿಸಿದ್ದು ದಾಖಲೆ ಆಗಿದೆ.
606 ರನ್ನುಗಳ ಗೆಲುವಿನ ಗುರಿ ಪಡೆದ ಬರೋಡ, ಪಂದ್ಯದ ಮುಕ್ತಾಯದ ವೇಳೆ 3 ವಿಕೆಟಿಗೆ 121 ರನ್ ಮಾಡಿತ್ತು.
ಸಂಕ್ಷಿಪ್ತ ಸ್ಕೋರ್: ಮುಂಬಯಿ-384 ಮತ್ತು 569. ಬರೋಡ-348 ಮತ್ತು 3 ವಿಕೆಟಿಗೆ 121.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.