![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 28, 2024, 9:36 PM IST
ಹೊಸದಿಲ್ಲಿ : ಬಿಹಾರದ ಭಾಗಲ್ಪುರ ದಿಂದ ಬೆಂಗಳೂರಿಗೆ ಬರುತ್ತಿದ್ದ ಅಂಗ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಯಾಣಿಕರು ಬೋಗಿಯಿಂದ ಕೆಳಗೆ ಧುಮುಕಿದ ವೇಳೆ ಇನ್ನೊಂದು ರೈಲು ಹರಿದು ಹಲವು ಮಂದಿ ಮೃತಪಟ್ಟಿದ್ದಾರೆ. ಝರ್ಖಂಡ್‌ನ ಜಮ್ತಾರಾ ಜಿಲ್ಲೆಯ ಕಲಝಾರಿಯಾ ಎಂಬಲ್ಲಿ ಬುಧವಾರ ಸಂಜೆ ಈ ಅವಘಡ ಸಂಭವಿಸಿದೆ.
ಭಾಗಲ್ಪುರದಿಂದ ಮಧ್ಯಾಹ್ನ ಹೊರಟಿದ್ದ ರೈಲು ಸಂಜೆ ಝರ್ಖಂಡ್‌ನ ಜಮ್ತಾರಾ ಬಳಿ ಬರುತ್ತಿದ್ದಂತೆ ರೈಲಿನಲ್ಲಿ ಬೆಂಕಿ ಹರಡಿದೆ ಎಂದು ಪ್ರಯಾಣಿಕರು ಆತಂಕಗೊಂಡು ಬೋಗಿಯಿಂದ ಕೆಳಗೆ ಧುಮುಕಿದರು.
ಆಗ ಅದೇ ಮಾರ್ಗವಾಗಿ ಬಂದ ಇನ್ನೊಂದು ರೈಲು ಹಳಿ ಮೇಲೆ ನಿಂತಿದ್ದವರ ಮೇಲೆ ಹರಿದಿದೆ. ಇದರಿಂದ 12 ಜನರು ಮೃತಪಟ್ಟಿದ್ದು ಹಲವಾರು ಮಂದಿ ಗಾಯ ಗೊಂಡಿ ದ್ದಾರೆ ಎಂದು ತಿಳಿದು ಬಂದಿದೆ. ಆದರೆ ರೈಲ್ವೇ ಇಲಾಖೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಜತೆಗೆ ರೈಲಿನಲ್ಲಿ ಬೆಂಕಿ ಬಿದ್ದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಕೂಡ ಲಭ್ಯವಾಗಿಲ್ಲ. ರಕ್ಷಣ ಮತ್ತು ಪರಿಹಾರ ಕಾರ್ಯಗಳು ಬಿರುಸಿನ ಸಾಗಿವೆ. ಸಹಾಯವಾಣಿ ಸಂಖ್ಯೆ- 7679523874
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.