Forest Department; ಚಾರಣ ಅನುಮತಿಗೆ ಏಕ ವೆಬ್‌ಸೈಟ್ – ಸಿದ್ಧತೆ
ಚಾರಣಿಗರ ದಟ್ಟಣೆ ನಿಯಂತ್ರಣ, ಪರಿಸರ ರಕ್ಷಣೆ ಉದ್ದೇಶ
Team Udayavani, Feb 29, 2024, 7:15 AM IST
ಮಂಗಳೂರು: ಚಾರಣಾಸಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ ಪರಿಸರ ಹಾಳಾಗುತ್ತದೆ, ಜೀವವೈವಿಧ್ಯಕ್ಕೆ ಭಂಗಬರುತ್ತದೆ ಎಂಬ ಕಾರಣದಿಂದ ಸಂಖ್ಯೆಯನ್ನು ನಿಯಂತ್ರಿಸಲು ಎಲ್ಲ ಚಾರಣ ತಾಣಗಳಿಗೆ ಒಂದೇ ವೆಬ್‌ಸೈಟ್ ಮೂಲಕ ಅನುಮತಿ ಒದಗಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಪ್ರಸ್ತುತ ರಾಜ್ಯದ ಕೆಲವು ಪ್ರದೇಶಗಳಿಗೆ ಆಯಾ ಅರಣ್ಯ ಪ್ರದೇಶಕ್ಕೆ ಬೇಕಾದಂತೆ ಚಾರಣವನ್ನು ತಮ್ಮದೇ ಆದ ವೆಬ್‌ಸೈಟ್‌ಗಳ ಮೂಲಕ ನಿರ್ವಹಿಸಲಾಗುತ್ತಿದೆ.
ಕರ್ನಾಟಕ ಇಕೋ ಟೂರಿಸಂ ಬೋರ್ಡ್ ವೆಬ್‌ಸೈಟ್ ಮೂಲಕ ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಬೆಂಗಳೂರು, ಕಲಬುರಗಿಯ ಕೆಲವು ಪ್ರವಾಸಿ ತಾಣಗಳಿಗೆ ಮಾತ್ರ ಬುಕಿಂಗ್ ಮಾಡಲಾಗುತ್ತದೆ. ಅಂತೆಯೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮೂಕಾಂಬಿಕಾ ಅಭಯಾರಣ್ಯ ಹಾಗೂ ಸೋಮೇಶ್ವರ ಅಭಯಾರಣ್ಯಗಳನ್ನು ಸೇರಿಸಿ ಕೊಂಡು ಕುದುರೆಮುಖ ನ್ಯಾಶನಲ್ ಪಾರ್ಕ್‌ವೆಬ್‌ಸೈಟ್ ಮೂಲಕ ಬುಕಿಂಗ್ ಮಾಡಲಾಗುತ್ತಿದೆ.
ಉಳಿದಂತೆ ಜಿಲ್ಲೆಯ ಪ್ರಮುಖ ಚಾರಣ ತಾಣ ಕುಮಾರ ಪರ್ವತ, ಶಿರಾಡಿ, ಚಾರ್ಮಾಡಿ, ಬಿಸಿಲೆ ಘಾಟಿಯ ಲ್ಲಿರುವ ಹತ್ತು ಹಲವು ಗುಡ್ಡಗಳು, ಜಲಪಾತ ಗಳಿಗೆ ಪ್ರಸ್ತುತ ಯಾವುದೇ ಆನ್‌ಲೈನ್ ಅನುಮತಿ ವ್ಯವಸ್ಥೆ ಇಲ್ಲ.
ಕುಮಾರಪರ್ವತದಲ್ಲಿ ಇತ್ತೀಚೆಗೆ ಸೇರಿದ್ದ 2 ಸಾವಿರಕ್ಕೂ ಅಧಿಕ ಚಾರಣಿಗರಿಂದಾಗಿ ಇಲ್ಲಿನ ಸಮಸ್ಯೆ ಅರಣ್ಯ ಸಚಿವರ ಗಮನಕ್ಕೆ ಬಂದಿತ್ತು.
ಮುಂದಿನ ಸೀಸನ್‌ಗೆ
ಆನ್‌ಲೈನ್ ಬುಕಿಂಗ್
ಕುಮಾರ ಪರ್ವತ ಸಹಿತ ಎಲ್ಲ ಪ್ರಮುಖ ಚಾರಣ ತಾಣಗಳಿಗೂ ಒಂದೇ ಆನ್‌ಲೈನ್ ವೇದಿಕೆ ಮೂಲಕ ಬುಕಿಂಗ್ ಮಾಡಲು ಅನುವು ಮಾಡಿಕೊಡಲು ಈಗಾಗಲೇ ಸಚಿವ ಈಶ್ವರ ಖಂಡ್ರೆ ಆಸಕ್ತಿ ತೋರಿದ್ದಾರೆ. ಒಂದೇ ವೆಬ್‌ಸೈಟ್ ಮೂಲಕ ಆಯಾ ಪ್ರದೇಶದ ಅಭಯಾರಣ್ಯಗಳ ವ್ಯಾಪ್ತಿಯ ಟ್ರೆಕಿಂಗ್ ಬುಕಿಂಗ್‌ಗೆ ಲಿಂಕ್ ನೀಡುವ ಸಾಧ್ಯತೆಯೂ ಇದ್ದು, ಮುಂದಿನ ಸೀಸನ್‌ಗೆ ಜಾರಿಗೆ ಬರುವ ಸಾಧ್ಯತೆ ಇದೆ.
ಕುಮಾರ ಪರ್ವತ ಚಾರಣ ಸದ್ಯಕ್ಕೆ ನೀರಿನ ಕೊರತೆ ಕಾರಣದಿಂದ ಸ್ಥಗಿತಗೊಂಡಿದೆ. ಸದ್ಯ ಕುದುರೆಮುಖ ವೆಬ್‌ಸೈಟ್ ಮೂಲಕ ಒಟ್ಟು 16 ಸ್ಥಳಗಳಿಗೆ ಟ್ರೆಕಿಂಗ್ ಹಾಗೂ ಮೂಕಾಂಬಿಕಾ ಅಭಯಾರಣ್ಯ, ಕುದುರೆಮುಖ ನ್ಯಾಶನಲ್ ಪಾರ್ಕ್‌ಗೆ ಸಫಾರಿ ಬುಕಿಂಗ್ ಮಾಡಬಹುದು. ಕೊಡಚಾದ್ರಿ, ಅರಶಿನಗುಂಡಿ, ಕುರಿಂಜಾಲು, ಗಂಗಡಿಕಲ್ಲು, ವಾಲಿಕುಂಜ, ನೇತ್ರಾವತಿ ಶಿಖರ, ಬೆಳ್ಕಲ್ ತೀರ್ಥ ಫಾಲ್ಸ್, ಕೂಸಳ್ಳಿ ಫಾಲ್ಸ್, ಹನುಮಾನ್‌ಗುಂಡಿ ಫಾಲ್ಸ್‌ಗಳಿಗೆ ಆನ್‌ಲೈನ್ ಮೂಲಕ ಅನುಮತಿ ನೀಡಲಾಗುತ್ತಿದೆ. ಬಲ್ಲಾಳರಾಯನ ದುರ್ಗ, ಬಂಡಾಜೆ ಅಬ್ಬಿ, ಬೆಂಗಳೂರಿನ ಪ್ರಮುಖ ತಾಣಗಳಾದ ಸಿದ್ದರಬೆಟ್ಟ, ಸಾವನದುರ್ಗ, ಸ್ಕಂದಗಿರಿ ಇತ್ಯಾದಿಗಳಿಗೆ ಕರ್ನಾಟಕ ಇಕೋ ಟೂರಿಸಂ ವೆಬ್‌ಸೈಟ್ ಮೂಲಕ ಬುಕಿಂಗ್, ಶುಲ್ಕ ಪಾವತಿ ಮಾಡಬಹುದು.
ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ ಜಿಲ್ಲೆಗಳ ಅಸಂಖ್ಯ ಚಾರಣ ತಾಣಗಳಿಗೆ ಬುಕಿಂಗ್ ಸೌಲಭ್ಯ ಸದ್ಯಕ್ಕಿಲ್ಲ, ಅವುಗಳೆಲ್ಲವನ್ನೂ ಒಂದೇ ಕೊಡೆಯಡಿಗೆ ತರುವ ಯೋಜನೆ ಇದೆ.
– ಈಶ್ವರ ಖಂಡ್ರೆ, ಅರಣ್ಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.