ಕೊರಗ-ಜೇನು ಕುರುಬರ ಗುಡಿ ಕೈಗಾರಿಕೆ ಉತ್ತೇಜನಕ್ಕೆ ವಿಶೇಷ ಯೋಜನೆ

ಕರಾವಳಿಯ 24 ಕಡೆ ವಿವಿಧೋದ್ದೇಶ ಕೇಂದ್ರ

Team Udayavani, Feb 29, 2024, 7:30 AM IST

ಕೊರಗ-ಜೇನು ಕುರುಬರ ಗುಡಿ ಕೈಗಾರಿಕೆ ಉತ್ತೇಜನಕ್ಕೆ ವಿಶೇಷ ಯೋಜನೆ

ಕುಂದಾಪುರ: ವಿಶೇಷ ದುರ್ಬಲ ಬುಡಕಟ್ಟು (ಪಿವಿಜಿಟಿ) ಗುಂಪುಗಳ ಪೈಕಿ ರಾಜ್ಯದ ಕೊರಗ ಹಾಗೂ ಜೇನು ಕುರುಬ ಸಮುದಾಯದವರ ಸಾಮಾಜಿಕ – ಆರ್ಥಿಕ ಕಲ್ಯಾ ಣದ ಜತೆಗೆ ಗುಡಿ ಕೈಗಾರಿಕೆ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರಕಾರದ “ಪಿಎಂ-ಜನ್‌ಮನ್‌’ ಯೋಜನೆಯಡಿ 5 ಜಿಲ್ಲೆಗಳಲ್ಲಿ ವಿವಿಧೋದ್ದೇಶ ಕೇಂದ್ರ (ಎಂಪಿಸಿ) ನಿರ್ಮಾಣವಾಗಲಿದೆ.

ಉಡುಪಿಯ 14, ದಕ್ಷಿಣ ಕನ್ನಡ ಜಿಲ್ಲೆಯ 10 ಕಡೆಗಳಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರಂಭದಲ್ಲಿ ಉಡುಪಿಗೆ 2, ಕೊಡಗಿಗೆ ಗರಿಷ್ಠ 6, ಚಾಮರಾಜನಗರ ಮತ್ತು ಮೈಸೂರಿಗೆ ತಲಾ 1 ಕಡೆ ಮಂಜೂರಾಗಿದೆ. ಉಳಿದೆಡೆಗೆ ಇನ್ನಷ್ಟೇ ಮಂಜೂರಾತಿ ಆಗಬೇಕಿದೆ.

ಏನಿದು ಯೋಜನೆ?
ನ. 15ರಂದು ಪ್ರಧಾನಿ ನರೇಂದ್ರ ಮೋದಿ ಈ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಜಿಟಿ) ಸಾಮಾಜಿಕ – ಆರ್ಥಿಕ ಕಲ್ಯಾಣಕ್ಕಾಗಿ “ಪಿಎಂ- ಜನ್‌ಮನ್‌’ ಯೋಜನೆಗೆ ಚಾಲನೆ ನೀಡಿದ್ದರು. 24 ಸಾವಿರ ಕೋ.ರೂ.ಗಳ ಬಜೆಟ್‌ ಮೀಸಲಿರಿಸಲಾಗಿದೆ. 3 ವರ್ಷದ ಯೋಜನೆ ಇದಾಗಿದ್ದು, ಕೇಂದ್ರದ 9 ಸಚಿವಾಲಗಳು 11 ವಲಯಗಳ ಮೇಲೆ ಗಮನ ಕೇಂದ್ರೀಕರಿಸಿ, ಆದಿವಾಸಿಗಳ ಪ್ರಗತಿಗೆ ಶ್ರಮಿಸಲಿದೆ. ಕರ್ನಾಟಕ ಸಹಿತ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳಲ್ಲಿರುವ 75 ಪಿವಿಜಿಟಿ ಸಮುದಾಯಗಳ ಗುಣಮಟ್ಟ ಸುಧಾರಣೆ ಯೋಜನೆಯ ಗುರಿ.

ಏನೆಲ್ಲ ಅಭಿವೃದ್ಧಿ?
ಪಿವಿಜಿಟಿಗಳಿಗೆ ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು, ಮೂಲ ಸೌಕರ್ಯ, ನೈರ್ಮಲ್ಯ, ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ, ವಿದ್ಯುತ್‌, ರಸ್ತೆ, ದೂರ ಸಂಪರ್ಕದ ಜತೆಗೆ ತಾಲೂಕುವಾರು ಕೆಲವೊಂದು ನಿರ್ದಿಷ್ಟ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ವಿವಿಧೋದ್ದೇಶ ಕೇಂದ್ರಗಳು (ಎಂಪಿಸಿ) ನಿರ್ಮಾಣವಾಗಲಿವೆ.

ಏನಿದು ಎಂಪಿಸಿ?
60 ಲಕ್ಷ ರೂ. ವೆಚ್ಚದಲ್ಲಿ ವಿವಿಧೋದ್ದೇಶ (ಎಂಪಿಸಿ) ಕೇಂದ್ರಗಳನ್ನು ನಿರ್ಮಿಸಿ, ತರಬೇತಿ ನೀಡಲಾಗುತ್ತದೆ. ಉಡುಪಿಯಲ್ಲಿ ಆರಂಭಿಕ ಹಂತವಾಗಿ ಕೆರಾಡಿ ಹಾಗೂ ಹಾಲಾಡಿಯಲ್ಲಿ ನಿವೇಶನ ಗುರುತಿಸಲಾಗಿದೆ. ಪ್ರತೀ ಕೇಂದ್ರಕ್ಕೆ 60 ಲಕ್ಷ ರೂ. ಸಿಗಲಿದ್ದು, ಅಂಗನವಾಡಿ, ಮಿನಿ ಆರೋಗ್ಯ ಕೇಂದ್ರ, ಕೊರಗ- ಜೇನು ಕುರುಬರ ಕುಲ ಕಸುಬುಗಳನ್ನು ತಯಾರಿಸಲು ಅನುಕೂಲಕರ ವ್ಯವಸ್ಥೆ, ತರಬೇತಿ ಎಲ್ಲವೂ ಒಂದೇ ಸೂರಿನಡಿ ಇರಲಿದೆ.

13 ಸಾವಿರ ಕೊರಗರು
ಉಡುಪಿ ಜಿಲ್ಲೆಯಲ್ಲಿ 9 ಸಾವಿರ ಜನಸಂಖ್ಯೆಯಿದ್ದು, 385 ಕುಟುಂಬಗಳಿಗೆ ಮನೆ ಅಗತ್ಯವಿದೆ. ದ.ಕ.ದಲ್ಲಿ 4,374 ಮನೆಗಳಿದ್ದು, 1,111 ಕುಟುಂಬಗಳಿವೆ. 386 ಮನೆಗಳ ಅಗತ್ಯವಿದೆ. ಈ ಪೈಕಿ 72 ಮಂಜೂರಾಗಿದೆ. ಬಹುತೇಕ ಎಲ್ಲರೂ ಕುಲ ಕಸುಬನ್ನೇ ನೆಚ್ಚಿಕೊಂಡಿದ್ದಾರೆ.

ಬುಡಕಟ್ಟು ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಮೂಲ ಸೌಕರ್ಯಗಳ ಸುಧಾರಣೆಗೆ ಈ ಪಿಎಂ- ಜನ್‌ಮನ್‌ ಯೋಜನೆ ಅನುಷ್ಠಾನ ಗೊಳಿಸಲಾಗಿದೆ. ಹಂತ-ಹಂತವಾಗಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಎಂಪಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮನೆ ಇಲ್ಲದವರನ್ನು ಗುರುತಿಸುವ ಕಾರ್ಯವೂ ಆಗುತ್ತಿದೆ.
– ದೂದ್‌ಪೀರ್‌ ಉಡುಪಿ / ಶಿವಕುಮಾರ್‌, ದ.ಕ., ಜಿಲ್ಲಾ ಸಮನ್ವಯಾಧಿಕಾರಿಗಳು, ಐಟಿಡಿಪಿ ಇಲಾಖೆ

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.