Assembly: ಸದನದಲ್ಲಿ ಜೈ ಶ್ರೀರಾಮ್ ವರ್ಸಸ್ ಜೈ ಸೀತಾರಾಮ್ ಘೋಷಣೆ
Team Udayavani, Feb 29, 2024, 8:41 PM IST
ವಿಧಾನಸಭೆ: ಆಯವ್ಯಯ ಅಂದಾಜುಗಳ ಮೇಲೆ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರಿಸುವ ವೇಳೆ ಗುರುವಾರ ಜೈ ಶ್ರೀರಾಮ್ ವರ್ಸಸ್ ಜೈ ಸೀತಾರಾಮ್ ಘೋಷಣೆ ಮೊಳಗಿದವು.
ಸದನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ “ಜೈ ಶ್ರೀರಾಮ್’ ಘೋಷಣೆ ಮೊಳಗಿಸುತ್ತಿದ್ದಂತೆ ಡಾ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಅರವಿಂದ ಬೆಲ್ಲದ್, ಶೈಲೇಂದ್ರ ಬೆಳಾªಳೆ, ದೊಡ್ಡನಗೌಡ ಪಾಟೀಲ್ ಮೊದಲಾದವರು, ಜೈ ಜೈ ಶ್ರೀರಾಮ್ ಎಂದು ಧ್ವನಿಗೂಡಿಸಿದರು. ಇದರಿಂದ ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ “ಜೈ ಸೀತಾರಾಮ್’ ಎಂದು ಘೋಷಣೆ ಹಾಕಿದರು. ಕಾಂಗ್ರೆಸ್ ಶಾಸಕರ ಪೈಕಿ ಕೆಲವರು “ಜೈ ಸಿದ್ದರಾಮಯ್ಯ, ಜೈ ಜೈ ಸಿದ್ದರಾಮಯ್ಯ’ ಎಂದು ತಿರುಗೇಟು ನೀಡಿದರು. ಈ ಬಿಜೆಪಿಯವರಿಗೆ ತಲೆಯಲ್ಲಿ ಮಿದುಳು ಇಲ್ಲ. ಖಾಲಿ ತಲೆ. ರಾಮಾಯಣವನ್ನೂ ಓದಿಲ್ಲ, ಮಹಾಭಾರತವನ್ನೂ ಓದಿಲ್ಲ. ಅಯೋಧ್ಯೆಯಲ್ಲಿ ಯಾರೋ ದೇವಸ್ಥಾನ ಕಟ್ಟಿದರು ಎಂದು ಇವರು ಹೋಗಿ ಪೂಜೆ ಮಾಡುತ್ತಾರೆ. ನಾವೇನು ರಾಮನ ಭಕ್ತರಲ್ಲವೇ, ನಾನು ಕೂಡ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ಇವರು ರಾಮ, ಲಕ್ಷ್ಮಣ, ಸೀತೆಯನ್ನೆಲ್ಲ ಬೇರೆ ಮಾಡಿದ್ದಾರೆ. ನಾವು ಗಾಂಧಿ ಹೇಳಿದ ರಾಮನನ್ನು ಪೂಜಿಸುತ್ತೇವೆ. ಇವರದು ಗೋಡ್ಸೆ ರಾಮ ಎಂದು ಟೀಕಿಸಿದರು.
ನೀವು ಗೋಡ್ಸೆ ಪೂಜಕರು:
ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ಬಿಜೆಪಿಯವರಿಗೆ ಜನರ ಆಶೀರ್ವಾದ ಪಡೆಯುವ ಯೋಗ್ಯತೆ ಇಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ನ ಹೆಡಗೆವಾರ್, ಗೋಲ್ವಾಲ್ಕರ್, ಸಾವರ್ಕರ್ ಭಾಗಿಯಾಗಿರಲಿಲ್ಲ. ಇವರೆಲ್ಲರೂ ಮನುವಾದದಲ್ಲಿ ನಂಬಿಕೆಯಿಟ್ಟವರು. ಸಾವರ್ಕರ್, ಗೋಲ್ವಾಲ್ಕರ್‌ಗೆ ಸಂವಿಧಾನದಲ್ಲಿ ನಂಬಿಕೆ ಇರಲಿಲ್ಲ. ಬಿಜೆಪಿಯ ಸಂಸದ ಅನಂತಕುಮಾರ್ ಹೆಗಡೆ ನಾವು ಬಂದಿರುವುದೇ ಸಂವಿಧಾನವನ್ನು ಬದಲಾಯಿಸುವುದಕ್ಕೆ ಎಂದರೂ ಕ್ರಮ ತೆಗೆದುಕೊಳ್ಳಲಿಲ್ಲ. ಇದು ಸಂವಿಧಾನದ ಬಗ್ಗೆ ಬಿಜೆಪಿ ಇಟ್ಟಿರುವ ಗೌರವ ಮಹಾತ್ಮ ಗಾಂಧಿಯನ್ನು ಗುಂಡಿಟ್ಟು ಕೊಂದ ಗೋಡ್ಸೆ ಪೂಜಕರಿವರು. ಇವರಿಂದ ನಾವು ದೇಶ ಭಕ್ತಿಯ ಪಾಠ ಹೇಳಿಸಿಕೊಳ್ಳಬೇಕಿರುವುದು ವಿಪರ್ಯಾಸ ಎಂದು ದೂರಿದರು. ಬಿಜೆಪಿಯ ಜನ ವಿರೋಧಿ ನೀತಿಯಿಂದ ಜನತೆ ಬೇಸತ್ತಿದ್ದಾರೆ. ಈ ಬಾರಿ ಚುನಾವಣೆ ಬರಲಿ ಎಂದು ಕಾಯುತ್ತಿದ್ದಾರೆ. ಕಾಂಗ್ರೆಸ್‌ಗೆ ಅಧಿಕಾರ ಕೊಡುತ್ತಾರೆ ಎಂಬ ನಂಬಿಕೆ ಇದೆ. ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಡೆದ ಅಡ್ಡಮತದಾನವನ್ನು ಮರೆಮಾಚುವುದಕ್ಕಾಗಿ ಈಗ ನಾಟಕ ಆಡುತ್ತಿದ್ದಾರೆ. ಸದನದ ಬಾವಿಗೆ ಬಂದು ಚಪ್ಪಾಳೆ ತಟ್ಟಿ ಭಜನೆ ಮಾಡುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಸ್ಪೀಕರ್ ಖಾದರ್‌ಗೆ ಆಗ್ರಹಿಸಿದರು.
ಮೋದಿ ಇಲ್ಲಿದ್ದಾರಾ ?:
ಒಂದೆಡೆ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರೆ ಸದನದ ಬಾವಿಯಲ್ಲಿ ಚಪ್ಪಾಳೆ ತಟ್ಟುತ್ತಾ ಸುತ್ತು ಹೊಡೆಯುತ್ತಿದ್ದ ಬಿಜೆಪಿ ಶಾಸಕರು ಇದ್ದಕ್ಕಿದ್ದಂತೆ ಮೋದಿ, ಮೋದಿ, ಮೋದಿ ಎಂದು ಏರಿದ ಧ್ವನಿಯಲ್ಲಿ ಘೋಷಣೆ ಮೊಳಗಿಸಲಾರಂಭಿಸಿದರು. ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, “ಮೋದಿ, ಮೋದಿ’ ಎಂದು ಅಣಕಿಸುತ್ತಾ, ಇಲ್ಲಿದ್ದಾರಾ ಮೋದಿ ? ನೀವು ನಿಶ್ಯಕ್ತರು, ಏನೂ ಆಗುವುದಿಲ್ಲ. ಎಲ್ಲದಕ್ಕೂ ಮೋದಿ ಹೆಸರು ತೆಗೆದುಕೊಳ್ಳುತ್ತೀರಿ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಮೋದಿ ಎದುರು ಪ್ರಶ್ನಿಸುವ ದಮ್ಮು-ತಾಕತ್ತು ಇಲ್ಲ ಎಂದು ವಾಗ್ಧಾಳಿ ನಡೆಸಿದರು. ಇದಕ್ಕೆ ಬಿಜೆಪಿ ಶಾಸಕರು “ಸತ್ ಹೋಯ್ತು, ಸತ್ ಹೋಯ್ತು, ಕಾಂಗ್ರೆಸ್ ಪಕ್ಷ ಸತ್ ಹೋಯ್ತು’ ಎಂದು ಸುತ್ತುಗಟ್ಟಲಾರಂಭಿಸಿದರು. ಆಗ ಸ್ಪೀಕರ್ ಖಾದರ್ ಇದೇನು ಸದನದ ಬಾವಿಯೋ, ನಿಮ್ಹಾನ್ಸ್ ಆಸ್ಪತ್ರೆಯೋ’ ಎಂದು ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.