Pro Kabaddi 10: ಪ್ರಶಸ್ತಿಗಾಗಿ ಪುನೇರಿ-ಹರಿಯಾಣ ಹೋರಾಟ
ಯಾವ ತಂಡ ಗೆದ್ದರೂ ಮೊದಲ ಬಾರಿ ಚಾಂಪಿಯನ್
Team Udayavani, Mar 1, 2024, 6:50 AM IST
ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 10ನೇ ಆವೃತ್ತಿ ಅಂತಿಮ ಘಟ್ಟಕ್ಕೆ ತಲುಪಿದೆ. ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ ಶುಕ್ರವಾರ ಪುನೇರಿ ಪಲ್ಟಾನ್ ಮತ್ತು ಹರಿಯಾಣ ಸ್ಟೀಲರ್ಸ್ ನಡುವಿನ ಅಂತಿಮ ಹಣಾಹಣಿಗೆ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿಯನ್ನೆತ್ತಲಿದೆ.
ಬುಧವಾರ ನಡೆದಿದ್ದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ಸ್ ಪಾಟ್ನಾ ಪೈರೇಟ್ಸ್ ವಿರುದ್ಧ 21 37 ಅಂತರದ ಬೃಹತ್ ಗೆಲುವು ದಾಖಲಿಸಿದ್ದ ಪುನೇರಿ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿತ್ತು. ಇನ್ನೊಂದು ಜಿದ್ದಾಜಿದ್ದಿ ಸೆಮಿಫೈನಲ್ ಪಂದ್ಯದಲ್ಲಿ, ಎರಡು ಬಾರಿಯ ಚಾಂಪಿಯನ್ಸ್ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ 31 27 ಅಂತರದಿಂದ ಜಯ ಗಳಿಸಿದ್ದ ಹರಿಯಾಣ ಸ್ಟೀಲರ್ಸ್ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೇರಿತ್ತು.
ಕನ್ನಡಿಗ ಕೋಚ್ ಬಿ.ಸಿ. ರಮೇಶ್ ಮಾರ್ಗ ದರ್ಶನದಲ್ಲಿ ಪ್ರತಿಭಾನ್ವಿತ ಅಸ್ಲಾಮ್ ಅಸ್ಲಾಮ್ ಇನಾಮಾªರ್ ನಾಯಕತ್ವದಲ್ಲಿ ಪುನೇರಿ ತಂಡ ಈ ಆವೃತ್ತಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ್ದು, ಲೀಗ್ ಹಂತದಲ್ಲಿ ಆಡಿದ 22 ಪಂದ್ಯಗಳಲ್ಲಿ 17 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿತ್ತು. . ಇನ್ನೊಂದೆಡೆ ಮಾಜಿ ಕಬಡ್ಡಿ ಆಟಗಾರ, ಮನ್‌ಪ್ರೀತ್ ಸಿಂಗ್ ಗರಡಿಯಲ್ಲಿ ಪಳಗಿ ರುವ ಹರಿಯಾಣ 22ರಲ್ಲಿ 13 ಪಂದ್ಯಗಳನ್ನು ಗೆದ್ದು ಲೀಗ್ ಹಂತದ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿತ್ತು. ಎರಡೂ ತಂಡಗಳೂ ನಾಕೌಟ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ಫೈನಲ್ ಹೋರಾಟಕ್ಕೆ ಸಜ್ಜಾಗಿದೆ.
ಗೆಲ್ಲುವ ಭರವಸೆಯಿದೆ
ನಮ್ಮ ತಂಡ ಚೆನ್ನಾಗಿದೆ. ತಂಡಕ್ಕೆ ಬಲವಾಗಿ ನಿಲ್ಲುವ ರೈಡರ್‌ಗಳಿದ್ದಾರೆ. ಹೀಗಾಗಿ ಗೆಲ್ಲಲು ನಾವು ಶೇ.100 ಪ್ರಯತ್ನ ಮಾಡುತ್ತೇವೆ. ತಂಡದಲ್ಲಿ ಎಲ್ಲರೂ ಫಿಟ್ ಆಗಿದ್ದಾರೆ. ಹೀಗಾಗಿ ಪಂದ್ಯ ಗೆಲ್ಲುತ್ತೇವೆ ಎನ್ನುವ ಸಂಪೂರ್ಣ ಭರವಸೆ ನಮಗಿದೆ.
ಜೈದೀಪ್ ದಹಿಯ ಹರಿಯಾಣ ನಾಯಕ
ಒತ್ತಡದ ಮಾತೇ ಇಲ್ಲ
ಟೂರ್ನಿಯಲ್ಲಿ ನಮ್ಮ ತಂಡದ ಪ್ರತೀ ಆಟಗಾರರೂ ತಮ್ಮ ಪಾತ್ರ ನಿಭಾಯಿಸಿದ್ದಾರೆ. ಹೀಗಾಗಿ ಫೈನಲ್ ಪಂದ್ಯದ ಬಗ್ಗೆ ನಮಗೆ ಯಾವ ಒತ್ತಡವೂ ಇಲ್ಲ. ಇದು ಹೊಸ ಪಂದ್ಯ. ಆತ್ಮವಿಶ್ವಾಸದಿಂದ ನಿಮ್ಮ ಆಟ ಆಡಿ ಎಂದು ತಂಡದ ಆಟಗಾರರಿಗೆ ಹೇಳಿದ್ದೇನೆ.
ಅಸ್ಲಾಮ್ ಇನಾಮ್ದಾರ್- ಪುನೇರಿ ನಾಯಕ
3 ಕೋ.ರೂ.
ಪಿಕೆಎಲ್ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ತಂಡ 3 ಕೋಟಿ ರೂ. ನಗದು ಪುರಸ್ಕಾರ ಬಾಚಿಕೊಳ್ಳಲಿದೆ. ರನ್ನರ್ ಅಪ್ ತಂಡಕ್ಕೆ 1.8 ಕೋಟಿ ರೂ. ಬಹುಮಾನ ಲಭಿಸಲಿದೆ.
ಪಂದ್ಯ ಆರಂಭ: ರಾತ್ರಿ 8
ನೇರಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಮುಖಾಮುಖಿ
ಒಟ್ಟು ಪಂದ್ಯಗಳು 14
ಪುನೇರಿಗೆ ಜಯ 8
ಹರಿಯಾಣಕ್ಕೆ ಜಯ 5
ಪಂದ್ಯ ಟೈ 1
*ಸದಾಶಿವ ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.