ಶ್ರೀ ಕಾಶೀ ಮಠ ಸಂಸ್ಥಾನ ವಾರಾಣಸಿ: ವಾಲ್ಕೇಶ್ವರ ಶಾಖಾ ಮಠ ಲೋಕಾರ್ಪಣೆ
Team Udayavani, Mar 1, 2024, 6:20 AM IST
ಮಣಿಪಾಲ/ ವಾಲ್ಕೇಶ್ವರ: ಪ್ರತಿಷ್ಠಿತ ಶ್ರೀ ಸಂಸ್ಥಾನ ವಾರಾಣಸಿಯ ಶ್ರೀ ಕಾಶೀ ಮಠದ ಜೀರ್ಣೋದ್ಧಾರಗೊಂಡ ವಾಲ್ಕೇಶ್ವರ ಬಾಣಗಂಗಾ ಶಾಖೆಯ ನೂತನ ಶಿಲಾಮಯ ಕಟ್ಟಡವನ್ನು ಶ್ರೀ ಕಾಶಿ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ಗುರುವಾರ ಲೋಕಾರ್ಪಣೆಗೊಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಫೆ. 28ರಂದು ರಾಕ್ಷೋಘ್ನ ಹೋಮ, ನವಗ್ರಹ ವಾಸ್ತು ಹವನ ಹಾಗೂ ಫೆ. 29ರಂದು ಧನ್ವಂತರಿ, ಮೃತ್ಯುಂಜಯ ಹವನ ಮತ್ತಿತರ ವಿಧಿ-ವಿಧಾನಗಳು ನೆರವೇರಿದವು. ಫೆ. 29ರ ಸಂಜೆ ಜಿಎಸ್‌ಬಿ ಸಮಾಜದ ಪ್ರಸಿದ್ಧ ಕಲಾವಿದರಿಂದ ಭಜನ್ ಸಂಧ್ಯಾ, ಸ್ವಾಮೀಜಿಗಳ ಉಪಸ್ಥಿತಿ ಯಲ್ಲಿ ಧಾರ್ಮಿಕ ಸಭೆ ನಡೆಯಿತು. ಕಾಶೀ ಮಠಾಧೀಶರನ್ನು ಜಿಎಸ್‌ಬಿ ಸಮಾಜ ಬಾಂಧವರು ಮತ್ತು ಭಕ್ತರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಭಕ್ತರಿಂದ ಸಂಕೀರ್ತನೆ, ಶ್ರೀಗಳ ಪಾದಪೂಜೆ ನೆರವೇರಿತು. ಶ್ರೀಗಳು ಫಲಪುಷ್ಪ, ಮಂತ್ರಾಕ್ಷತೆಯನ್ನಿತ್ತು ಹರಸಿದರು.
ವಾಲ್ಕೇಶ್ವರ ಶ್ರೀ ಕಾಶೀ ಮಠದ ಅಧ್ಯಕ್ಷ ಜಿ.ಜಿ. ಪ್ರಭು, ಕಾರ್ಯಾಧ್ಯಕ್ಷ ದಯಾನಂದ ಪೈ, ಉಪ ಕಾರ್ಯಾಧ್ಯಕ್ಷರಾದ ಜಿ.ಡಿ. ರಾವ್ ಮತ್ತು ಉಮೇಶ್ ಭಟ್, ಪ್ರಮುಖರಾದ ರಘವೀರ್ ಭಂಡಾರಿ ಮತ್ತು ರವೀಂದ್ರ ಡಿ. ಪೈ, ಡಾ| ಭುಜಂಗ ಪೈ, ಮೋಹನದಾಸ್ ಪಿ. ಮಲ್ಯ, ಜಗನ್ನಾಥ್ ಶೆಣೈ ಮೈಸೂರು, ದೀಪಕ್ ಅರವಿಂದ ರಾವ್, ರಘುನಂದನ್ ಕಾಮತ್, ಕೆ.ಎಸ್. ಪ್ರಭು, ಗಣೇಶ್ ಪ್ರಭು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದೀಪಕ್ ಭಾಸ್ಕರ್ ಶೆಣೈ, ಉಪಾಧ್ಯಕ್ಷ ಪ್ರಕಾಶ್ ಜಿ. ಕಾಮತ್, ಕಾರ್ಯದರ್ಶಿ ಆರ್.ಜಿ. ಭಟ್, ಜತೆ ಕಾರ್ಯದರ್ಶಿ ಉಮಾನಾಥ್ ನಾಯಕ್, ಕೋಶಾಧಿಕಾರಿ ಉಮೇಶ್ ಸುರೇಂದ್ರ ಕಾಮತ್, ಜತೆ ಕೋಶಾಧಿಕಾರಿ ಯು. ಪ್ರಭಾಕರ ಭಟ್, ಸದಸ್ಯರಾದ ಅಶೋಕ್ ಕಿಣಿ, ನಿತಿನ್ ಜಗದೀಶ್ ಪ್ರಭು, ಅಮಿತ್ ದಿನೇಶ್ ಪೈ, ಹೇಮ್‌ಪ್ರಕಾಶ್, ರಮೇಶ್ ವಾಮನ್ ಭಂಡರ್ಕಾರ್, ಕಾರ್ಯಕಾರಿ ಸಮಿತಿಯ ಸದಸ್ಯರು, ಮುಂಬಯಿ ಗ್ರಾಮ್ ಕಮಿಟಿಯ ಸದಸ್ಯರು ಪಾಲ್ಗೊಂಡಿದ್ದರು.
ಮುಂಬಯಿ ಮತ್ತು ವಿವಿಧ ಉಪನಗರಗಳಾದ ಜಿಎಸ್‌ಬಿ ಸಭಾ ದಹಿಸರ್-ಬೊರಿವಲಿ, ಜಿಎಸ್‌ಬಿ ಮಂಡಳ ಥಾಣೆ, ಜಿಎಸ್‌ಬಿ ಸೇವಾ ಮಂಡಲ ಮುಂಬಯಿ ಸಹಿತ ಜಿಎಸ್‌ಬಿ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ಭಕ್ತರು, ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ಪಾಲ್ಗೊಂಡು ಶುಭಹಾರೈಸಿದರು.
ಶ್ರೀ ಕ್ಷೇತ್ರದಲ್ಲಿ ಮಾ. 1ರಿಂದ ಮಾ. 9ರ ವರೆಗೆ ಸೀಯಾಳಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ನವ ಚಂಡಿಕಾ ಯಾಗ, ಮುದ್ರಾಧಾರಣೆ, ಪವಮಾನ ಅಭಿಷೇಕ, ಸುಂದರಕಾಂಡ ಕಲಶಾಭಿಷೇಕ, ಮಹಾವಿಷ್ಣು ಕಲಶಾಭಿಷೇಕ, ಸುಂದರ ಕಾಂಡ ಹವನ ಪಾರಾಯಣ, ವೇದವ್ಯಾಸ ಸಹಸ್ರನಾಮ ಹವನ ಸೇರಿದಂತೆ ವಿವಿಧ ಪೂಜೆ ಹವನಗಳು, ಅಭಿಷೇಕಗಳು, ರಾಮಾಯಣ ಪಾರಾಯಣ ಹಾಗೂ ವಿವಿಧ ಸೇವೆಗಳನ್ನು ಆಯೋಜಿಸಲಾಗಿದೆ.
ರಾಮ ಲಕ್ಷ್ಮಣರು ನೆಲೆಸಿದ್ದ ಸ್ಥಳ
ಶ್ರೀರಾಮ ಮತ್ತು ಲಕ್ಷ್ಮಣ ಸೀತೆಯನ್ನು ಹುಡುಕಲು ಹೊರಟಿದ್ದಾಗ ಈ ಸ್ಥಳದಲ್ಲಿ ನೆಲೆ ನಿಂತಿದ್ದರು ಎಂಬ ಪ್ರತೀತಿಯಿದೆ. ಶ್ರೀರಾಮನ ಬಾಯಾರಿಕೆಯನ್ನು ನೀಗಿಸಲು ಲಕ್ಷ್ಮಣನು ಬಾಣವನ್ನು ನೆಲಕ್ಕೆ ಪ್ರಯೋಗಿಸಿದಾಗ ನೆಲದಿಂದ ನೀರು ಚಿಮ್ಮಿತು. ಈ ಕಾರಣದಿಂದಲೇ ಈ ಸ್ಥಳವು ಬಾಣಗಂಗಾ ಎಂದು ಪ್ರಸಿದ್ಧಿ ಪಡೆದಿದೆ.
ವಾಲ್ಕೇಶ್ವರ ಸ್ಥಳನಾಮ ವಿಶೇಷ
ಶ್ರೀರಾಮನು ಬಾಣಗಂಗಾದಲ್ಲಿ ತಂಗಿದ್ದಾಗ ಮರಳು, ನೀರನ್ನು ಬಳಸಿ ಶಿವಲಿಂಗವನ್ನು ನಿರ್ಮಿಸಿ ಪೂಜೆಯನ್ನು ಸಲ್ಲಿಸಿರುವುದರಿಂದ ಮೂಲತಃ ಇದನ್ನು ವಾಲು ಚ ಈಶ್ವರ ಎಂದು ಕರೆಯಲಾಯಿತು (ವಾಲು ಎಂದರೆ ಮರಳು). ಮುಂದೇ ಇದೇ ವಾಲ್ಕೇಶ್ವರ ಆಯಿತು. ಬಾಣಗಂಗಾ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.