Sports Corner: ಫಿಲಿಪ್‌ ಹ್ಯೂಸ್‌ 63 ನಾಟ್‌ ಔಟ್‌


Team Udayavani, Mar 3, 2024, 7:15 AM IST

10-uv-fusion

ಪ್ರಸುತ್ತ ಕ್ರಿಕೆಟ್‌ ಕೇವಲ ಕ್ರೀಡೆಯಾಗಿರದೆ ದೊಡ್ಡ ವ್ಯಾಪಾರವಾಗಿದೆ. ಕ್ರಿಕೆಟ್‌ ಆಟಗಾರರನ್ನು ದೇವರ ರೀತಿಯಲ್ಲಿ ಗೌರವಿಸುವ ಅಭಿಮಾನಿಗಳ ಗುಂಪಿದ್ದು, ಕೆಲವು ರಾಷ್ಟ್ರಗಳಲ್ಲಿ ಕ್ರಿಕೆಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಇದೇ ಹಾದಿಯಲ್ಲಿ ಆಸ್ಟ್ರೇಲಿಯಾ ದೇಶವು ಎಲ್ಲ ಕ್ರೀಡೆಯಲ್ಲೂ ಸಹ ತನ್ನ ಛಾಪು ಮೂಡಿಸಿದ್ದು, ವಿಶೇಷವಾಗಿ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಸಾಧನೆ ಅಮೋಘವಾಗಿದೆ.

ಆಸ್ಟ್ರೇಲಿಯ ಹಲವಾರು ಪ್ರಸಿದ್ಧ ಕ್ರಿಕೆಟ್‌ ಆಟಗಾರರನ್ನು ಕ್ರಿಕೆಟ್‌ ಜಗತ್ತಿಗೆ ನೀಡಿದೆ. ಉದಾಹರಣೆಗೆ ಡಾನ್‌ ಬ್ರಾಡ್ಮನ್‌, ಡೇವಿಡ್‌ ಬೂನ್‌, ಜೆಫ್‌ ಥಾಮ್ಸನ್‌, ಅಲೆನ್‌ ಬಾರ್ಡರ್‌, ಸ್ಟೀವ್‌ ವಾ, ಮಾರ್ಕ್‌ ವಾ, ಶೇನ್‌ ವಾರ್ನ್, ಗ್ಲೇನ್‌ ಮೆಗ್ರಾತ್‌, ರಿಕಿ ಪಾಂಟಿಂಗ್‌, ಆಡಂ ಗಿಲ್‌ಕ್ರಿಸ್ಟ್‌, ಬ್ರೆಟ್‌ ಲೀ, ಮೈಕಲ್‌ ಬೇವನ್‌, ಡೇವಿಡ್‌ ವಾರ್ನರ್‌ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇಂತಹ ಮಹಾನ್‌ ಆಟಗಾರರಲ್ಲಿ ಒಬ್ಬರಾಗಿ ಬೆಳೆಯಬಹುದಾಗಿದ್ದ ಉದಯೋನ್ಮುಖ ಆಟಗಾರ ದಿವಂಗತ ಪಿಲಿಪ್‌ ಹ್ಯೂಸ್‌ ಕೂಡ ಒಬ್ಬರು. ಆದರೆ ಬೆಳೆಯುವ ಹಂತದಲ್ಲಿಯೇ ತಲೆಗೆ ಚೆಂಡು ತಾಗಿ ದುರಂತ ಮರಣ ಹೊಂದಿದ  ಹ್ಯೂಸ್‌ ಕ್ರಿಕೆಟ್‌ ಇತಿಹಾಸದಲ್ಲಿ ಸದಾ ಜೀವಂತವಾಗಿದ್ದಾರೆ. ಅದಕ್ಕೆ ಕಾರಣ ಅವರ ಕೊನೆಯ ಇನಿಂಗ್ಸ್‌ನಲ್ಲಿ 63 ರನ್‌ ಮಾಡಿದಾಗ ದುರಂತ ಸಂಭವಿಸಿದ್ದು. ಇದರಿಂದ ಫಿಲಿಪ್‌ ಹ್ಯೂಸ್‌ ಸದಾ ಕ್ರಿಕೆಟ್‌ ಪ್ರೇಮಿಗಳ ಹೃದಯದಲ್ಲಿ ನಾಟ್‌ ಔಟ್‌ ಆಗಿರುತ್ತಾರೆ.

ಫಿಲಿಪ್‌ ಜೋಯಲ್‌ ಹ್ಯೂಸ್‌ 1988ರ ನವೆಂಬರ್‌ 30ರಂದು ಆಸ್ಟ್ರೇಲಿಯಾದ  ನ್ಯೂ ಸೌತ್‌ ವೇಲ್ಸ್ ರಾಜ್ಯದ ಮ್ಯಾಕ್‌ಸ್ವಿಲ್ಲೆಯ ರೈತ ಗ್ರೆಗ್‌ ಹ್ಯೂಸ್‌ ಮತ್ತು ಇಟಾಲಿಯನ್‌ ತಾಯಿ ವರ್ಜೀನಿಯಾ ಅವರ ಪ್ರತ್ರನಾಗಿ ಜನಿಸಿದರು. ಈ ದಂಪತಿಗೆ  ಜೇಸನ್‌ ಹ್ಯೂಸ್‌ ಮತ್ತು ಮೇಗನ್‌ ಹ್ಯೂಸ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ಫಿಲಿಪ್‌ರ ತಂದೆ ಬಾಳೆ ಕೃಷಿಕರಾಗಿದ್ದರು, ಚಿಕ್ಕ ಮಗುವಾಗಿದ್ದಾಗ ಫಿಲಿಪ್‌ ತನ್ನ ತಂದೆ ಕೆಲಸ ಮಾಡುತ್ತಿದ್ದ ಜಮೀನಿನಲ್ಲಿ ಆಡಲು ಇಷ್ಟಪಡುತ್ತಿದ್ದರು.

ಫಿಲಿಪ್‌ ಹ್ಯೂಸ್‌ ಮ್ಯಾಕ್ಸ್‌ವಿಲ್ಲೆ 12ನೇ ವಯಸ್ಸಿನಯೇ ಎ-ಗ್ರೇಡ್‌ ಕ್ರಿಕೆಟ್‌ ಆಡಲು ಪ್ರಾರಂಭಿಸಿದರು. ಫಿಲಿಪ್‌ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಅಜೇಯ 141 ಬಾರಿಸಿದ್ದರು. ಅನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡಿ 26 ಟೆಸ್ಟ್ ಪಂದ್ಯಗಳಲ್ಲಿ  32.66ರ ಸರಾಸರಿಯಲ್ಲಿ 1,535 ರನ್‌, 25 ಏಕದಿನ ಪಂದ್ಯಗಳಲ್ಲಿ 35.91ರ ಸರಾಸರಿಯಲ್ಲಿ 826 ರನ್‌ ಗಳಿಸಿದ ಫಿಲಿಪ್‌ ಹ್ಯೂಸ್‌ ಸಣ್ಣ ವಯಸ್ಸಿನಲ್ಲಿಯೇ ವಿಧಿಯ ಆಟದಿಂದಾಗಿ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಫಿಲಿಪ್‌ ಹ್ಯೂಸ್‌ ಅವರ ದೇಶೀಯ ಮತ್ತು ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಉತ್ತಮ ಪ್ರದರ್ಶನಗಳಿಗಾಗಿ ಅನೇಕ ಪುರಸ್ಕಾರಗಳನ್ನು ಪಡೆದಿದ್ದರು.  ಅವರು 2007ರಲ್ಲಿ ನ್ಯೂ ಸೌತ್‌ ವೇಲ್ಸ್ ರೈಸಿಂಗ್‌ ಸ್ಟಾರ್‌ಪ್ರಶಸ್ತಿ, 2009ರಲ್ಲಿ ಬ್ರಾಡ್ಮನ್‌ ವರ್ಷದ ಯುವ ಕ್ರಿಕೆಟಿಗ, 2008-09ರಲ್ಲಿ ವರ್ಷದ ಶೆಫೀಲ್ಡ್ ಶೀಲ್ಡ್ ಕ್ರಿಕೆಟರ್‌ ಮತ್ತು 2012-13ರಲ್ಲಿ ವರ್ಷದ ದೇಶೀಯ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಫಿಲಿಪ್‌ ಹ್ಯೂಸ್‌ 2014ರ ನವೆಂಬರ್‌ 25ರಂದು ಸಿಡ್ನಿಯಲ್ಲಿ ನಡೆದ ಶೆಫೀಲ್ಡ್ ಶೀಲ್ಡ್ ಪಂದ್ಯದ ಸಂದರ್ಭದಲ್ಲಿ ಸೀನ್‌ ಅಬಾಟ್‌ ಎಸೆದ ಬೌನ್ಸರ್‌ನಿಂದ ಹ್ಯೂಸ್‌ ಕುತ್ತಿಗೆಗೆ ತಾಗಿದ ಚೆಂಡಿನಿಂದಾಗಿ ಸಬ್‌ಅರಾಕ್ನಾಯಿಡ್‌ ರಕ್ತಸ್ರಾವಕ್ಕೆ ಕಾರಣವಾಯಿತು. ತತ್‌ಕ್ಷಣ ಅವರನ್ನು ಸಿಡ್ನಿಯ ಸೈಂಟ್‌ ವಿನ್ಸೆಂಟ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು. ಆದರೆ  ನವೆಂಬರ್‌ 27ರಂದು ಇಹಲೋಕ ತ್ಯಜಿಸಿದರು. ಫಿಲಿಪ್‌ ಹ್ಯೂಸ್‌ ಸಣ್ಣ ವಯಸ್ಸಿನಲ್ಲಿಯೆ ಜಗತ್ತು ತೊರೆದರು, ಕ್ರಿಕೆಟ್‌ ಜಗತ್ತಿನಲ್ಲಿ ಸದಾ ಅಮರಾಗಿದ್ದಾರೆ.

ರಾಸುಮ ಭಟ್‌

ಕುವೆಂಪು ವಿವಿ

ಟಾಪ್ ನ್ಯೂಸ್

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

UV Fusion: ಹಟ್ಟಿ ಹಬ್ಬ ಗ್ರಾಮೀಣ ಸೊಗಡಿನ ಸಂಸ್ಕೃತಿಯ ಕೊಂಡಿ

12-uv-fusion

Mobile Phones: ಸಂಬಂಧ ಕಳಚುತ್ತಿರುವ ಮೊಬೈಲ್‌ ಬಾಂಧವ್ಯ

11-uv-fusion

Teacher: ಟೀ ಫಾರ್‌ ಟೀಚರ್‌

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.