WPL; ಆರ್ಸಿಬಿಗೆ ಮತ್ತೊಂದು ಸೋಲಿನ ಶಾಕ್: ಅಗ್ರಸ್ಥಾನಕ್ಕೇರಿದ ಮುಂಬೈ
Team Udayavani, Mar 2, 2024, 10:58 PM IST
ಬೆಂಗಳೂರು: ಸರ್ವಾಂಗೀಣ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶನಿವಾರದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಆರ್ಸಿಬಿಯನ್ನು 7 ವಿಕೆಟ್ಗಳಿಂದ ಮಣಿಸಿ ಅಗ್ರಸ್ಥಾನಕ್ಕೇರಿತು.
ಆರ್ಸಿಬಿ 6 ವಿಕೆಟಿಗೆ 131 ರನ್ ಗಳಿಸಿದರೆ, ಮುಂಬೈ 15.1 ಓವರ್ಗಳಲ್ಲಿ 3 ವಿಕೆಟಿಗೆ 133 ರನ್ ಬಾರಿಸಿತು. ಇದು ಮುಂಬೈಗೆ 4 ಪಂದ್ಯಗಳಲ್ಲಿ ಒಲಿದ 3ನೇ ಜಯ. ಆರ್ಸಿಬಿ 4 ಪಂದ್ಯಗಳಲ್ಲಿ ಸತತ 2ನೇ ಸೋಲನುಭವಿಸಿತು.
ಆತಿಥೇಯರನ್ನು ನಿಯಂತ್ರಿಸಲು ಮುಂಬೈ 7 ಮಂದಿಯನ್ನು ದಾಳಿಗಿಳಿಸಿ ಯಶಸ್ಸು ಸಾಧಿಸಿತು. 6ನೇ ವಿಕೆಟಿಗೆ ಜತೆಗೂಡಿದ ಎಲ್ಲಿಸ್ ಪೆರ್ರಿ (ಔಟಾಗದೆ 44) ಮತ್ತು ಜಾರ್ಜಿಯಾ ವೇರ್ಹ್ಯಾಮ್ (27) 40 ಎಸೆತಗಳಿಂದ 52 ರನ್ ಒಟ್ಟುಗೂಡಿಸಿದ್ದರಿಂದ ಸ್ಕೋರ್ 130ರ ಗಡಿ ದಾಟಿತು.
ಆರ್ಸಿಬಿ ಪವರ್ ಪ್ಲೇ ಒಳಗಾಗಿ 3 ವಿಕೆಟ್ ಕಳೆದುಕೊಂಡಿತು. ನಾಯಕಿ ಸ್ಮತಿ ಮಂಧನಾ (9), ಸೋಫಿ ಡಿವೈನ್ (9), ಎಸ್. ಮೇಘನಾ (11) ಪೆವಿಲಿಯನ್ ಸೇರಿಕೊಂಡರು. ರಿಚಾ ಘೋಷ್ ಗಳಿಕೆ 7 ರನ್ ಮಾತ್ರ.
ಮುಂಬೈಗೆ ಯಾಸ್ತಿಕಾ ಭಾಟಿಯಾ (31)-ಹ್ಯಾಲಿ ಮ್ಯಾಥ್ಯೂಸ್ (26) ಜೋಡಿಯಿಂದ ಅಮೋಘ ಆರಂಭ ಲಭಿಸಿತು. 3.5 ಓವರ್ಗಳಿಂದ 45 ರನ್ ಒಟ್ಟುಗೂಡಿತು. ನಾಯಕಿ ನ್ಯಾಟ್ ಸ್ಕಿವರ್ ಬ್ರಂಟ್ 27, ಅಮೇಲಿಯಾ ಕೆರ್ ಔಟಾಗದೆ 40 ರನ್ ಮಾಡಿ ಬಹಳ ಬೇಗನೇ ಗೆಲುವು ಸಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 57: ದುರ್ಯೋಧನನಲ್ಲಿ ಮಾನಸಿಕ ಸ್ಥೈರ್ಯ ಕುಸಿತ
Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!
By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್.ಡಿ.ಕುಮಾರಸ್ವಾಮಿ
Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್ಆರ್!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.