WPL 2024; ಗುಜರಾತ್‌ಗೆ ಸತತ 4ನೇ ಸೋಲು
Team Udayavani, Mar 3, 2024, 11:26 PM IST
ಬೆಂಗಳೂರು: ವನಿತಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ಸತತ 4ನೇ ಸೋಲನುಭವಿಸಿದೆ. ರವಿವಾರದ ಮುಖಾಮುಖಿಯಲ್ಲಿ ಅದು ಡೆಲ್ಲಿ ಕ್ಯಾಪಿಟಲ್ಸ್‌ಗೆ 25 ರನ್ನುಗಳಿಂದ ಶರಣಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ 8 ವಿಕೆಟಿಗೆ 163 ರನ್ ಗಳಿಸಿದರೆ, ಗುಜರಾತ್ 8 ವಿಕೆಟಿಗೆ 138 ರನ್ ಮಾತ್ರ ಮಾಡಲು ಶಕ್ತವಾಯಿತು. ಇದು 4 ಪಂದ್ಯಗಳಲ್ಲಿ ಡೆಲ್ಲಿಗೆ ಒಲಿದ 3ನೇ ಜಯ. ಈ ಸೋಲಿನಿಂದ ಗುಜರಾತ್ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
ಲ್ಯಾನಿಂಗ್ ಅರ್ಧ ಶತಕ: ಡೆಲ್ಲಿಯ ದೊಡ್ಡ ಮೊತ್ತಕ್ಕೆ ಕಾರಣವಾದದ್ದು ನಾಯಕಿ ಹಾಗೂ ಓಪನರ್ ಮೆಗ್ ಲ್ಯಾನಿಂಗ್ ಬಾರಿಸಿದ ಅರ್ಧ ಶತಕ. 13ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಲ್ಯಾನಿಂಗ್ 41 ಎಸೆತಗಳಿಂದ 55 ರನ್ ಹೊಡೆದರು (6 ಬೌಂಡರಿ, 1 ಸಿಕ್ಸರ್). ಅಲೈಸ್ ಕ್ಯಾಪ್ಸಿ 27, ಅನ್ನಾಬೆಲ್ ಸದರ್‌ಲ್ಯಾಂಡ್ 20 ರನ್ ಮಾಡಿದರು. ಶಫಾಲಿ ವರ್ಮ (13), ಜೆಮಿಮಾ ರೋಡ್ರಿಗಸ್ (7) ಮಾತ್ರ ಮಿಂಚಲಿಲ್ಲ.ಗುಜರಾತ್‌ನ ಮಧ್ಯಮ ವೇಗಿ ಮೇಘನಾ ಸಿಂಗ್ 37ಕ್ಕೆ 4 ವಿಕೆಟ್ ಉರುಳಿಸಿದರು. ಆ್ಯಶ್ಲಿ ಗಾರ್ಡನರ್ 2 ವಿಕೆಟ್ ಕೆಡವಿದರು.
ಮೊದಲೆರಡು ಓವರ್‌ಗಳನ್ನು ಮೇಡನ್ ಮಾಡುವ ಮೂಲಕ ಡೆಲ್ಲಿ ತನ್ನ ಬೌಲಿಂಗ್ ಪರಾಕ್ರಮವನ್ನು ತೆರೆದಿರಿಸಿತು. ಗುಜರಾತ್ ಪರ ಆ್ಯಶ್ಲಿ ಗಾರ್ಡನರ್ ಸರ್ವಾಧಿಕ 40 ರನ್ ಮಾಡಿದರು. ಡೆಲ್ಲಿಯ ಬೌಲಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ರಾಧಾ ಯಾದವ್ ಮತ್ತು ಜೆಸ್ ಜೊನಾಸೆನ್. ಇಬ್ಬರೂ 3 ವಿಕೆಟ್ ಕೆಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.