Kanakpur: ಬ್ಯಾಂಕಿನಲ್ಲಿ ಡ್ರಾ ಮಾಡಿದ 2 ಲಕ್ಷ ರೂ. ಹಾಡಹಗಲೇ ಎಗರಿಸಿ ನಾಲ್ವರು ಪರಾರಿ
Team Udayavani, Mar 4, 2024, 10:34 AM IST
ಕನಕಪುರ: ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಬಂದು ದ್ವಿಚಕ್ರವಾಹನದ ಡಿಕ್ಕಿಯಲ್ಲಿ ಇರಿಸಿದ್ದ 2 ಲಕ್ಷ ಹಣವನ್ನು ಹಾಡ ಹಗಲೇ ನಾಲ್ವರು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ಅಳ್ಳಿಮಾರನಹಳ್ಳಿ ಗ್ರಾಮದ ವೆಂಕಟೇಶ್ ಹಣ ಕಳೆದುಕೊಂಡವರು. ಇವರು ತಮ್ಮ ಮಗಳ ಮದುವೆಗಾಗಿ ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಬಂದಿದ ಹಣವನ್ನು ನಾಲ್ವರು ಖದೀಮರು ಎಗರಿಸಿದ್ದಾರೆ.
ಹಣ ಕಳೆದುಕೊಂಡ ವೆಂಕಟೇಶ್ ಶನಿವಾರ ಮಧ್ಯಾಹ್ನ ಬೂದಿಕೆರೆ ರಸ್ತೆಯಲ್ಲಿರುವ ಐಡಿಬಿಐ ಬ್ಯಾಂಕ್ ನಲ್ಲಿ 2 ಲಕ್ಷ ಹಣ ಡ್ರಾ ಮಾಡಿಕೊಂಡು ಆಕ್ಟಿವಾ ಹೋಂಡ ದ್ವಿಚಕ್ರವಾಹನದ ಡಿಕ್ಕಿಯಲ್ಲಿ ಇಟ್ಟುಕೊಂಡು ನಗರದ ಎಮ್‌ಎಚ್‌ಎಸ್ ರಸ್ತೆಯಲ್ಲಿರುವ ಬಿಡಿಸಿಸಿ ಬ್ಯಾಂಕ್‌ಗೆ ಹೊರಟ್ಟಿದ್ದರು. ಇದೆಲ್ಲ ಅಲ್ಲೆ ಇದ್ದು ಹೊಂಚುಹಾಕುತ್ತಿದ ನಾಲ್ವರು ಖದೀಮರು ಎರಡು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಿಡಿಸಿಸಿ ಬ್ಯಾಂಕ್ ವರೆಗೂ ಬಂದಿದ್ದಾರೆ. ವೆಂಕಟೇಶ್ ಅವರು ಬ್ಯಾಂಕ್ ಕೆಳಗಡೆ ವಾಹನ ನಿಲ್ಲಿಸಿ ಮೊದಲ ಮಹಡಿಯಲ್ಲಿರುವ ಬ್ಯಾಂಕ್‌ಗೆ ಹೋಗಿದ್ದರು. ತಮ್ಮ ಕೆಲಸ ಮುಗಿಸಿ 5 ನಿಮಿಸದಲ್ಲಿ ವಾಪಸ್ ಬಂದು ನೋಡುವುದರೊಳಗೆ ಡಿಕ್ಕಿಯಲ್ಲಿದ್ದ ಹಣವನ್ನು ಎಗರಿಸಿ ಸ್ಥಳದಿಂದ ನಾಲ್ವರು ಖದೀಮರು ಕಾಲ್ಕಿತ್ತಿದ್ದಾರೆ. ಈ ಎಲ್ಲ ದೃಶ್ಯಗಳು ಬಿಡಿಸಿಸಿ ಬ್ಯಾಂಕ್ ಸಿಸಿಟೀವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ವೆಂಕಟೇಶ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಮಹಜರು ನಡೆಸಿ ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.