ಹಿಂದೂಗಳು ಜಾಗೃತರಾಗಲಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ಭಾರತ ಇಸ್ಲಾಂಮಿಕ ರಾಷ್ಟ ಮಾಡಲು ತಯಾರಿ ನಡೆಸಿದ್ದಾರೆ...
Team Udayavani, Mar 4, 2024, 2:15 PM IST
ಉದಯವಾಣಿ ಸಮಾಚಾರ
ಮುಧೋಳ: ದೇಶ ವಿಭಜನೆ ನಡೆದಾಗ ಡಾ| ಅಂಬೇಡ್ಕರ್ ಅವರು ಭಾರತದ ಎಲ್ಲ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಹಾಗೂ
ಪಾಕಿಸ್ತಾನದ ಹಿಂದೂಗಳನ್ನು ಭಾರತಕ್ಕೆ ಕರೆತರುವಂತೆ ಹೇಳಿದ್ದನ್ನು ಯಾರೂ ಕಿವಿಗೊಡಲಿಲ್ಲ. ಅಂದು ಅಂಬೇಡ್ಕರ್ ಮಾತು ಕಾಂಗ್ರೆಸ್ ಕೇಳಿದ್ದರೆ ಇಂದು ಪಾಕಿಸ್ತಾನ ಜಿಂದಾಬಾದ್, ಬಾಂಬ್ ಸ್ಫೋಟ ಆಗುತ್ತಿರಲಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.
ಬರಗಿ ಗ್ರಾಮದಲ್ಲಿ ನಮೋ ಯುವ ಸೇನಾ ಆಯೋಜಿಸಿದ ಶಿವ-ರಾಯ ಉತ್ಸವದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಹೋರಾಟಮಾಡಿದ ಮೇಧಾವಿ ಡಾ| ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಅಂತ್ಯಕ್ರಿಯೆಗೆ ಕಾಂಗ್ರೆಸ್ ಜಾಗ ನೀಡಲಿಲ್ಲ. ಹಿಂದೂಗಳು ಜಾಗೃತರಾಗಬೇಕು. ಜಾತಿಗಳನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸು.
ವಿಜಯಪುರ ಕ್ಷೇತ್ರದಲ್ಲಿ 1.20 ಲಕ್ಷ ಮುಸ್ಲಿಂ ಮತಗಳಿವೆ. ದೇಶದಲ್ಲಿ ಯಾವ ವಿಧಾನಸಭಾ ಕ್ಷೇತ್ರದಲ್ಲೂ ಇಷ್ಟು ಮುಸ್ಲಿಂ ಮತಗಳು ಇಲ್ಲ. ಜಾಗೃತ ಹಿಂದುಗಳು ನನ್ನ ಗೆಲ್ಲಿಸಿದ್ದಾರೆ. ನನ್ನ ಸೋಲಿಸಲು ಶಿವಮೊಗ್ಗ, ಮುಧೋಳ ಹಾಗೂ ಬೆಳಗಾವಿಯಿಂದ ಹಣ ಬಂತು ನನ್ನ ಫಲಿತಾಂಶ ಬದಲಿಸಲಾಗಲಿಲ್ಲ. ದೇಶದ ಸಮರ್ಥ ನಾಯಕ ಮೋದಿಯಿಂದ ದೇಶ ಪ್ರಪಂಚದಲ್ಲಿ ಮುನ್ನಡೆ ಸಾ ಧಿಸಿದೆ. ಮತ್ತೂಮ್ಮೆ ಅವರನ್ನು ಆಯ್ಕೆ ಮಾಡಬೇಕು. ನಾನು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಭಾಷಣ ಮಾಡುವುದಾಗಿ ಹೇಳಿದರು.
ಶ್ರೀರಾಮ ಸೇನೆಯ ಸಮಸ್ಥಾಪಕ ಪ್ರಮೋದ ಮುತಾಲಿಕ ಮಾತನಾಡಿ ಪಾಕಿಸ್ತಾನ ಜಿಂದಾಬಾದ್ ಎಂದು ವಿಧಾನಸೌಧದಲ್ಲಿ ಹೇಳುತ್ತಾರೆ ಎಂದರೆ ಬೇಜವಾಬ್ದಾರಿ ಕಾಂಗ್ರೆಸ್ ಸರ್ಕಾರ ಎಂದರ್ಥ. ಪಾಕಿಸ್ತಾನ ಜಿಂದಾಬಾದ್ ಅದು ಸಂಕೇತಿಕವಾಗಿ ಹೇಳುತ್ತಾರೆ. ಅವರಿಗೂ ಗೊತ್ತಿದೆ ಪಾಕಿಸ್ತಾನ ಭೀಕಾರಿ ದೇಶವಾಗಿದೆ ಎಂದು ಭಾರತವನ್ನು ಇಸ್ಲಾಂಮಿಕ್ ರಾಷ್ಟ್ರ ಮಾಡುವ ಸಂಚು ನಡೆದಿದೆ. 2047ರೊಳಗೆ ಭಾರತ ಇಸ್ಲಾಂಮಿಕ ರಾಷ್ಟ ಮಾಡಲು ತಯಾರಿ ನಡೆಸಿದ್ದಾರೆ. ಆದರೆ 2047ರ ಹೊತ್ತಿಗೆ ಪ್ರಪಂಚ ಹಿಂದೂಮಯವಾಗಿರುತ್ತದೆ.
2014 ರ ನಂತರ ಭಾರತ 2014 ಮೊದಲಿನ ಭಾರತವನ್ನು ಅವಲೋಕನ ಮಾಡಿ ರಾಷ್ಟ್ರ ಪ್ರಗತಿ ಸಾಧಿಸಿದೆ. ರಾಮ ಮಂದಿರ, ಕಾಶ್ಮೀರದ 370 ಕಾಯ್ದೆ ರದ್ದತಿಯಾಗಿದೆ. ಇನ್ನು ಮುಂದೆ ದೇಶದಲ್ಲಿ ಮಂದಿರ ಕೆಡವಿ ಮಸಿದಿ ಮಾಡದ ಎಲ್ಲವುಗಳನ್ನು ಕಾನೂನು ಮುಖಾಂತರ ಮಂದಿರ ಮಾಡಲಾಗುವುದು. ದೇಶದಲ್ಲಿ ಏಕ ನಾಗರಿಕ ಸಂಹಿತೆ ಜನಸಂಖ್ಯೆ ನಿಯಂತ್ರಣ ಕಾಯ್ದೆ ಬರಲಿದೆ ಎಂದರು.
ಬಾಗಲಕೋಟೆ ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿ ನಂದು ಗಾಯಕವಾಡ ಮಾತನಾಡಿದರು. ಬರಗಿ ರಾಚೋಟೇಶ್ವರ
ಮಠದ ಮಲ್ಲಯ್ಯ ಶ್ರೀ ಸಾನಿಧ್ಯ ಹಾಗೂ ಗುರುಪಾದಯ್ಯ ಶಿರೂರ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ದಾಸರಡ್ಡಿ, ಲಕ್ಷ್ಮಣ ಚಿನ್ನಣ್ಣವರ, ಪರಮಾನಂದ ನಿಂಗನೂರ, ಶ್ರೀಶೈಲ ಕಲಮಡಿ, ಹಣಮಂತ ಪೂಜಾರಿ, ಸಿದ್ದಪ್ಪ ತೋಟದ, ಈರಪ್ಪ ಇಂಗಳಗಿ, ರವಿ ಉದಪುಡಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.