KFD; ಸಿದ್ದಾಪುರದ ಕಾಯಿಲೆ ಶಂಕಿತ ಮತ್ತಿಬ್ಬರು ಬಲಿ: ಮೃತರ ಸಂಖ್ಯೆ 4 ಕ್ಕೇರಿಕೆ
Team Udayavani, Mar 4, 2024, 9:15 PM IST
ಸಿದ್ದಾಪುರ(ಉತ್ತರಕನ್ನಡ): ಮಂಗನಕಾಯಿಲೆ (ಕೆಎಫ್ ಡಿ)ಗೆ ಇಬ್ಬರು ಕಾಯಿಲೆ ಶಂಕಿತ ಪುರುಷರು ಮಾ.4ರಂದು ಮಣಿಪಾಲದ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ.
ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಹೆಗ್ಗೆಕೊಪ್ಪದ 80 ವರ್ಷದ ವೃದ್ಧ ಹಾಗೂ ಕಲ್ಲೂರಿನ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದಾಗಿ ತಿಳಿದು ಬಂದಿದ್ದು, ಈ ವರ್ಷ ಮಂಗನ ಕಾಯಿಲೆ ಯಿಂದ ಮೃತಪಟ್ಟವರ ಸಂಖ್ಯೆ 4 ಕ್ಕೆ ಏರಿದೆ.
ಶಿರಸಿ ತಾಲೂಕಿನ ಹತ್ತರಗಿಯ ನವಿಲಗಾರ ಗ್ರಾಮದ 68 ವರ್ಷದ ವ್ಯಕ್ತಿಯೊಬ್ಬರು ಫೆ. 27 ರಂದು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೊರ್ಲಕ್ಯೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 60ವರ್ಷದ ಮಹಿಳೆಯೊಬ್ಬರು ಕೆಎಫ್ ಡಿಗೆ ಬಲಿಯಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.