Horoscope: ಕೈಗೊಂಡ ನಿರ್ಧಾರದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Team Udayavani, Mar 5, 2024, 7:14 AM IST
ಮೇಷ: ಬಹುಮಟ್ಟಿಗೆ ಸಂತೋಷದ ದಿನ. ವ್ಯವಹಾರ ಸುಧಾರಣೆಯ ಬಗ್ಗೆ ಚಿಂತನೆ. ಆಪ್ತ ವಲಯಗಳಲ್ಲಿ ಸಕ್ರಿಯ ಪಾಲುದಾರಿಕೆ. ಹಿರಿಯ ನಾಗರಿಕರಿಂದ ನೆಮ್ಮದಿಯ ನಿಟ್ಟುಸಿರು. ದೇವತಾಕ್ಷೇತ್ರಕ್ಕೆ ಸಂದರ್ಶನ ಸಂಭವ.
ವೃಷಭ: ವ್ಯವಹಾರ ಕ್ಷೇತ್ರ ವಿಸ್ತರಣೆ ಸಂಭವ. ವಧೂ- ವರಾನ್ವೇಷಿಗಳಿಗೆ ಶುಭವಾರ್ತೆ. ಹಿರಿಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ. ವ್ಯಾಪಾರಿಗಳು, ಎಂಜಿನಿಯರ್, ಲೆಕ್ಕ ಪರಿಶೋಧಕರು, ನ್ಯಾಯವಾದಿಗಳಿಗೆ ಕೆಲಸ ಮುಗಿಸುವ ತರಾತುರಿ.
ಮಿಥುನ: ಕೈಗೊಂಡ ನಿರ್ಧಾರದ ಬಗೆಗೆ ಆತಂಕ ಬೇಡ. ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ. ಸ್ವತಂತ್ರ ವ್ಯವಹಾರದ ಯೋಚನೆ ಬಿಟ್ಟು ಬಿಡಿ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ.
ಕರ್ಕಾಟಕ: ಮಿಶ್ರಫಲಗಳ ದಿನ. ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರಿ. ಮನೆಯಲ್ಲಿ ಉಳಿದ ಎಲ್ಲರ ಆರೋಗ್ಯ ಉತ್ತಮ. ಮಕ್ಕಳ ಭವಿಷ್ಯ ಚಿಂತನೆ.ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ.
ಸಿಂಹ: ಎಲ್ಲ ರಂಗಗಳಲ್ಲೂ ಶುಭಫಲಗಳನ್ನು ಕಾಣುವ ದಿನ. ಹಳೆಯ ಸಾಲ ಅನಿರೀಕ್ಷಿತವಾಗಿ ವಾಪಸಾದ ಆನಂದ. ಅಧಿಕಾರಿಗಳ ಸಕಾಲಿಕ ಕ್ರಮ ದಿಂದ ಕಾರ್ಯಗಳು ಶೀಘ್ರವಾಗಿ ಮುಕ್ತಾಯ. ವ್ಯವಹಾ ರಾರ್ಥ ವಾಗಿ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ.
ಕನ್ಯಾ: ಸೇವಾಕಾರ್ಯಗಳಿಂದ ಜನಪ್ರಿಯತೆ ವೃದ್ಧಿ. ಸದುದ್ದೇಶಕ್ಕಾಗಿ ಬೇರೆಬೇರೆ ಸ್ಥಳಗಳಿಗೆ ಭೇಟಿ ಸಂಭವ. ಭವಿಷ್ಯದ ಭದ್ರತೆಗಾಗಿ ದೀರ್ಘಾವಧಿ ಹೂಡಿಕೆ. ಸಂಸಾರ ಸುಖ ತೃಪ್ತಿಕರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.
ತುಲಾ: ದೇವತಾ ಕಾರ್ಯದಲ್ಲಿ ಸಕ್ರಿಯ ಪಾಲುಗೊಳ್ಳುವಿಕೆ. ಪರಿಸರ ಸ್ವತ್ಛತೆ ಚಟುವಟಿಕೆಗಳಲ್ಲಿ ಆಸಕ್ತಿ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಸಂತೋಷದ ಸಂದರ್ಭ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ.
ವೃಶ್ಚಿಕ: ನೊಂದವರಿಗೆ ಸಾಂತ್ವನ ಹೇಳಿ ಸಮಾಧಾನ ಹೊಂದುವಿರಿ. ವಸ್ತ್ರಾಭರಣ ಖರೀದಿ ಸಂಭವ. ಕಟ್ಟಡ ನಿರ್ಮಾಣ ಗುತ್ತಿಗೆ ದಾರರಿಗೆ ಮಧ್ಯಮ ಲಾಭ. ಹವಾ ಮಾನ ವೈಪರೀತ್ಯದಿಂದ ಹಿರಿಯರ ಆರೋಗ್ಯದಲ್ಲಿ ಕೊಂಚ ಏರುಪೇರು.
ಧನು: ಸರಕಾರಿ ಉದ್ಯೋಗಸ್ಥರಿಗೆ ಶುಭ ಸಮಾಚಾರ ನಿರೀಕ್ಷೆ. ಉಳಿತಾಯ ಯೋಜ ನೆಗಳ ಏಜೆಂಟರಿಗೆ ಆದಾಯ ವೃದ್ಧಿ ಯೋಗ. ಅಲ್ಪಾವಧಿ ಹೂಡಿಕೆಗಳು ಹಿತಕರವಲ್ಲ. ದೂರದಲ್ಲಿರುವ ಗೆಳೆಯನ ಸಲಹೆ ಪಾಲಿಸಿ ನಷ್ಟದಿಂದ ಪಾರು.
ಮಕರ: ಆದಾಯ ವೃದ್ಧಿಗೆ ದೀರ್ಘ ಕಾಲದಿಂದ ಮಾಡುತ್ತಿರುವ ಪ್ರಯತ್ನವು ಫಲಿಸುವ ಕಾಲ ಸನ್ನಿಹಿತ. ಕಾರ್ಯರಂಗದಲ್ಲಿ ಸಹನೆಯು ದಕ್ಷತೆಯಷ್ಟೇ ಪ್ರಧಾನವಾಗಲಿದೆ. ಮಕ್ಕಳ ಭವಿಷ್ಯ ಚಿಂತನೆ.ಸಂಗೀತ ಶ್ರವಣ, ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ. ಶಸ್ತ್ರವೈದ್ಯರಿಗೆ ಕೀರ್ತಿ.
ಕುಂಭ: ಸೇವಾಕಾರ್ಯಗಳಿಂದ ಜನಪ್ರಿಯತೆ ವೃದ್ಧಿ ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನ ಏರಿಕೆಯ ಸಾಧ್ಯತೆ. ಬಂಧು ಬಳಗದವರಿಂದ ವಿಶೇಷ ಪ್ರೇಮ ಪ್ರಕಟ. ಸ್ಥಿರಾಸ್ತಿಯೊಂದರ ಖರೀದಿ ಪ್ರಯತ್ನದಲ್ಲಿ ಮುನ್ನಡೆ.
ಮೀನ: ಸತ್ಕಾರ್ಯಗಳಲ್ಲಿ ಪಾಲುಗೊಳ್ಳುವ ಅವಕಾಶ. ಸದವಕಾಶ ತಪ್ಪಿಹೋದುದಕ್ಕೆ ಪಶ್ಚಾತ್ತಾಪ. ಹಿಡಿದ ಕಾರ್ಯ ಕೈಗೂಡುವ ಭರವಸೆಯಿಂದ ಮುಂದಡಿಯಿಡಿ. ಮನೆಯಲ್ಲಿ ಒಳ್ಳೆಯ ಸಹಕಾರ, ಸೌಜನ್ಯದ ವಾತಾವರಣ. ಎಲ್ಲರ ಆರೋಗ್ಯ ಉತ್ತಮ. ಪರಿಣತರೊಬ್ಬರ ಹಠಾತ್ ಭೇಟಿಯಿಂದ ಲಾಭ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.