Brahmavar ಶಾಖೆಯ ಎಂ.ಸಿ.ಸಿ ಬ್ಯಾಂಕ್ ಉದ್ಘಾಟನೆ


Team Udayavani, Mar 5, 2024, 12:29 PM IST

11-

ಬ್ರಹ್ಮಾವರ: ರಾಜ್ಯದ ಅಗ್ರಗಣ್ಯ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಂ.ಸಿ.ಸಿ ಬ್ಯಾಂಕಿನ 17ನೇ ಶಾಖೆಯು ಬ್ರಹ್ಮಾವರದ ಶೇಷಗೋಪಿ ಪ್ಯಾರಡೈಸ್‌ನ ನೆಲಮಹಡಿ, ಆಕಾಶವಾಣಿ ವೃತ್ತದ ಬಳಿ, ಮಿನಿ ವಿಧಾನಸೌಧದ ಹತ್ತಿರ, ವಾರಂಬಳ್ಳಿಯಲ್ಲಿ ಮಾ. 3 ರಂದು ಉದ್ಘಾಟನೆಗೊಂಡಿತು.

ಹೊಸ ಶಾಖೆಯ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಸದಸ್ಯ ಯಶ್ಪಾಲ್ ಸುವರ್ಣ ನೆರವೇರಿಸಿದರು. ಬ್ರಹ್ಮಾವರದ ಹೋಲಿ ಫ್ಯಾಮಲಿ ಚರ್ಚ್ ನ ಧರ್ಮಗುರು ವಂ. ಜಾನ್ ಫೆರ್ನಾಂಡಿಸ್‌ ಆಶೀರ್ವಚನ ನೆರವೇರಿಸಿದರು.

ಹೊಸ ಶಾಖೆಯ ಭದ್ರತಾ ಕೊಠಡಿಯನ್ನು ಬ್ರಹ್ಮಾವರ ಎಸ್.ಎಂ.ಒ.ಎಸ್. ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ಮತ್ತು ಒ.ಎಸ್.ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರೆ|ಫಾ| ಎಂ.ಸಿ. ಮಥಾಯಿ ಉದ್ಘಾಟಿಸಿದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ, ರೆ|ಫಾ| ಡೆನಿಸ್ ಡೆಸಾ ಇ-ಸ್ಟಾಂಪಿಂಗ್ ಸೌಲಭ್ಯ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ “ಸಹಕಾರ ರತ್ನ” ಅನಿಲ್ ಲೋಬೊ ವಹಿಸಿದ್ದರು.

ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಯಶ್ಪಾಲ್ ಸುವರ್ಣ, ಬ್ರಹ್ಮಾವರದಲ್ಲಿ ಶಾಖೆ ತೆರೆದು ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ ನೀಡಲು ಮುಂದಾಗಿರುವ ಎಂ.ಸಿ.ಸಿ ಬ್ಯಾಂಕಿಗೆ ಶುಭ ಹಾರೈಸಿದರು.

ಸಹಕಾರಿ ರಂಗವು ಆರ್.ಬಿ.ಐ ಮಾನದಂಡದೊಂದಿಗೆ ನಡೆಸುವುದು ಹೂವಿನ ಹಾಸಿಗೆಯಲ್ಲ; ಆದರೂ, ಸಾರ್ವಜನಿಕರ ಸಹಕಾರ ಮತ್ತು ಪರಸ್ಪರ ಬೆಂಬಲದೊಂದಿಗೆ ಸಹಕಾರ ರಂಗ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಕಾರ್ಯತತ್ಪರತೆ ಮತ್ತು ಅವರ ಸಾಮಾಜಿಕ ಕಾಳಜಿಯನ್ನು ಮೆಚ್ಚಿದ ಸುವರ್ಣರವರು, ಎಂ.ಸಿ.ಸಿ ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

ಅಧ್ಯಕ್ಷೀಯ ಸ್ಥಾನ ಪಡೆದಿದ್ದ ಅನಿಲ್ ಲೋಬೊ ಮಾತಾನಾಡುತ್ತಾ, ಎಂ.ಸಿ.ಸಿ ಬ್ಯಾಂಕಿಗೆ ಬ್ರಹ್ಮಾವರದ ಜನತೆ ನೀಡಿದ ಸ್ವಾಗತಕ್ಕೆ ಧನ್ಯವಾದ ನೀಡಿ, ಮಾತ್ರವಲ್ಲ, ಎಂ.ಸಿ.ಸಿ ಬ್ಯಾಂಕ್ ಕೇವಲ ಒಂದು ಬ್ಯಾಂಕ್ ಆಗಿರದೆ ತಮ್ಮ ಆಶೋತ್ತರಗಳಿಗೆ ಸ್ಪಂದಿಸುವ ಬ್ಯಾಂಕ್ ಆಗಿರಲಿದೆ ಎಂದರು.

ಉತ್ತಮ ಪರಿಸರದಲ್ಲಿ ಒಳ್ಳೆಯ ಪಾರ್ಕಿಂಗ್ ಹೊಂದಿರುವ ಬ್ರಹ್ಮಾವರ ಶಾಖೆಯು ಗ್ರಾಹಕ ಕೇಂದ್ರಿತ ಉನ್ನತ ಸೇವೆ ನೀಡುವತ್ತ ಮುನ್ನಡೆಯಲಿದೆ. ಪರಿಸರದ ಯಾವುದೇ ಬ್ಯಾಂಕಿಗೆ ಕಮ್ಮಿಯಿಲ್ಲದ ಮತ್ತು ದಕ್ಷತೆಯಿಂದ ಕೂಡಿದ ಎಲ್ಲಾ ಸೇವೆಗಳು ಇಲ್ಲಿ ಲಭ್ಯವಿರುತ್ತದೆ. ಈಗಾಗಲೇ ಬ್ಯಾಂಕ್ 1000 ಕೋಟಿ ವ್ಯವಹಾರದ ಮೈಲಿಗಲ್ಲನ್ನು ದಾಟಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾರ್ವಜನಿಕರ ಬೆಂಬಲ ಅಗತ್ಯ ಎಂದರು.

112 ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್ ಸುಧೃಡವಾಗಿದ್ದು ರಿಸರ್ವ್ ಬ್ಯಾಂಕಿನ ಎಲ್ಲಾ ಮಾನದಂಡಗಳನ್ನು ಪಾಲಿಸಿ, ಆರ್ಥಿಕವಾಗಿ ಸುಧೃಡ ಮತ್ತು ಉತ್ತಮವಾಗಿ ನಿರ್ವಹಿಸುವ ಬ್ಯಾಂಕ್ ಎಂದು ವರ್ಗೀಕೃತವಾಗಿದೆ. ಬ್ಯಾಂಕ್ ಸದ್ಯದಲ್ಲಿಯೇ ಬೆಳ್ತಂಗಡಿ, ಕಾವೂರು ಹಾಗೂ ಶಿವಮೊಗ್ಗ ಪರಿಸರದಲ್ಲಿ ಹೊಸ ಶಾಖೆಗಳನ್ನು ತೆರೆಯಲಿದೆ ಹಾಗೂ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುವುದು ಎಂದರು.

ಇದೇ ಸಂಧರ್ಭದಲ್ಲಿ ಮಾತಾನಾಡಿದ ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ ನ ಧರ್ಮಗುರು ವಂದನೀಯ ಜಾನ್ ಫೆರ್ನಾಂಡಿಸ್‌, ಬ್ರಹ್ಮಾವರ ಪರಿಸರದಲ್ಲಿ ಶಾಖೆಯ ಪ್ರಗತಿಯಾಗಲಿ ಎಂದು ಆಶಿಸಿದರು ಮಾತ್ರವಲ್ಲ, ತಮ್ಮ ಪೂರ್ಣ ಸಹಕಾರ ಮತ್ತು ಬೆಂಬಲದ ಭರವಸೆ ನೀಡಿದರು.

ಉಡುಪಿಯ ಕೆಥೊಲಿಕ್ ಶಿಕ್ಷಣ ಸಂಸ್ಥೆಯ (ಸೆಸು) ಕಾರ್ಯದರ್ಶಿ ರೆ|ಫಾ| ವಿನ್ಸೆಂಟ್ ಕ್ರಾಸ್ತಾ ಬ್ಯಾಂಕಿನ ವತಿಯಿಂದ ಅಬಲರಿಗೆ ಮತ್ತು ಅಶಕ್ತರಿಗೆ ದಾನವನ್ನು ಪ್ರಧಾನ ಮಾಡಿದರು.

ಮುಖ್ಯ ಅತಿಥಿ ಸ್ಥಾನದಿಂದ ಮಾತಾನಾಡಿದ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೆ|ಫಾ| ಡೆನಿಸ್ ಡೆಸಾ ಬ್ರಹ್ಮಾವರದಲ್ಲಿ ಬ್ಯಾಂಕಿನ 17ನೇ ಶಾಖೆಯ ಉದ್ಘಾಟನೆಯನ್ನು ಕೊಂಡಾಡಿದರು. ಮುಂದಿನ ದಿನಗಳಲ್ಲಿ ಬ್ಯಾಂಕ್ ಉತ್ತಮವಾದ ಸೇವೆ ನೀಡಿ ಇನ್ನಷ್ಟು ಬೆಳವಣಿಗೆ ಕಾಣಲಿ ಎಂದು ಆಶಿಸಿದರು.

ಬ್ರಹ್ಮಾವರ ಎಸ್.ಎಂ.ಒ.ಎಸ್. ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ಮತ್ತು ಒ.ಎಸ್.ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರೆ|ಫಾ| ಎಂ.ಸಿ. ಮಥಾಯಿ ಎಂ.ಸಿ.ಸಿ ಬ್ಯಾಂಕಿಗೆ ಒಳಿತನ್ನು ಆಶಿಸಿದರು. ಎಂ.ಸಿ.ಸಿ ಬ್ಯಾಂಕಿನ ಸಾರ್ವಜನಿಕ ಕಾಳಜಿಯನ್ನು ಕೊಂಡಾಡಿದ ಅವರು ಬ್ರಹ್ಮಾವರದ ಪರಿಸರದ ನಿವಾಸಿಗಳು ಎಂ.ಸಿ.ಸಿ ಬ್ಯಾಂಕಿಗೆ ಎಲ್ಲಾ ಸಹಕಾರವನ್ನು ನೀಡಬೇಕೆಂದು ಕೋರಿದರು.

ಇದೇ ಸಂಧರ್ಭದಲ್ಲಿ ಬ್ರಹ್ಮಾವರದ ಪರಿಸರದ ಸಾಧಕರನ್ನು ಹೂಗುಚ್ಛ ಮತ್ತು ಸ್ಮರಣಿಕೆ ನೀಡಿ ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.

ವಾರಂಬಳ್ಳಿ ಗ್ರಾಮ ಪಂಚಾಯತಿನ ಅಧ್ಯಕ್ಷ ನಿತ್ಯಾನಂದ ಬಿ.ಆರ್ ಮತ್ತು ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ನ ನಿಕಟಪೂರ್ವ ಅಧ್ಯಕ್ಷ ಜನಾಬ್ ಕೆ.ಪಿ. ಇಬ್ರಾಹಿಂ ಗೌರವ ಅತಿಥಿಗಳಾಗಿ ಭಾಗವಹಿಸಿ ಸಂಧರ್ಬೋಚಿತವಾಗಿ ಮಾತಾನಾಡಿದರು.

ಕೊಂಕಣಿ ಬರಹಗಾರರ ಸಂಘದವರು ಪ್ರಧಾನ ಮಾಡಿರುವ ಸಾಹಿತ್ಯ ಪ್ರಶಸ್ತಿ ಪಡೆದಿರುವ ಬ್ಯಾಂಕಿನ ನಿರ್ದೇಶಕ ಡಾ.ಜೆರಾಲ್ಡ್ ಪಿಂಟೊ (ಜೆರಿ, ನಿಡ್ಡೋಡಿ) ಇದೇ ಸಂಧರ್ಭದಲ್ಲಿ ಬ್ಯಾಂಕಿನ ವತಿಯಿಂದ ಅಧ್ಯಕ್ಷ ಅನಿಲ್ ಲೋಬೊ ಫಲಪುಷ್ಪಾ ನೀಡಿ ಸನ್ಮಾನಿಸಿದರು.

ಹೊಸ ಶಾಖಾ ಕಟ್ಟಡದ ಮಾಲೀಕ ಶ್ರೀ ಚಂದಯ್ಯ ಶೆಟ್ಟಿ ಮತ್ತು ಕಟ್ಟಡದ ವಿನ್ಯಾಸ ನೆರವೇರಿಸಿದ ಸಿವಿಲ್ ಇಂಜಿನಿಯರ್, ಕಾರ್ತಿಕ್ ಕಿರಣ್ ಇವರನ್ನು ಸನ್ಮಾನಿಸಲಾಯಿತು.

ಬ್ರಹ್ಮಾವರ ಶಾಖೆಯ ಸಿಬ್ಬಂದಿಗಳನ್ನು ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್‌ ಪರಿಚಯಿಸಿದರು. ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ನೀಡಲು ಮತ್ತು ಬ್ರಹ್ಮಾವರ ಪರಿಸರದ ನಿವಾಸಿಗಳಿಗೆ ಬ್ಯಾಂಕಿನ ಸೇವೆಗಳ ಬಗ್ಗೆ ಮಾಹಿತಿ ನೀಡಲು ಸಹಕರಿಸಿದ ಸರ್ವರನ್ನು ಇದೇ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಉಪಸ್ಥಿತರಿದ್ದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕ ಆಂಡ್ರಯ್‌ ಡಿ’ಸೋಜಾ, ಡೇವಿಡ್ ಡಿ’ಸೋಜಾ, ಹೆರಾಲ್ಡ್ ಮೊಂತೇರೊ, ಅನಿಲ್ ಪತ್ರಾವೊ,  ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ವೃತ್ತಿಪರ ನಿರ್ದೇಶಕ ಸಿ.ಜಿ.ಪಿಂಟೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರುಜ್, ಆಲ್ವಿನ್ ಮೊಂತೋರೊ, ಶರ್ಮಿಳಾ ಮಿನೇಜಸ್ ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ದೇಶಕ ಎಲ್‌ರೊಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ನಿರ್ದೇಶಕ ಡಾ| ಜೆರಾಲ್ಡ್ ಪಿಂಟೊ ವಂದಿಸಿ, ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesha Chaturthi: ಆರೂರು: 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ… ವಿವಿಧ ಕಾರ್ಯಕ್ರಮ

ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ

ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ

Udupi ಗೀತಾರ್ಥ ಚಿಂತನೆ-29 ಭಗವದವತಾರದ ಉದ್ದೇಶವೇನು?

Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.