ಲೆಬನಾನ್ ಕ್ಷಿಪಣಿ ದಾಳಿ: 2 ತಿಂಗಳ ಹಿಂದೆಯಷ್ಟೇ ಇಸ್ರೇಲ್ ಗೆ ತೆರಳಿದ್ದ ಕೇರಳಿಗನ ಮೃತ್ಯು
Team Udayavani, Mar 6, 2024, 8:42 AM IST
ಜೆರುಸಲೇಂ: ಇಸ್ರೇಲನ್ನು ಗುರಿಯಾಗಿಸಿಕೊಂಡು ಲೆಬನಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿ ಅಸುನೀಗಿದ್ದಾರೆ. ಉತ್ತರ ಇಸ್ರೇಲ್‌ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಮತ್ತಿಬ್ಬರು ಕೇರಳಿಗರೂ ಗಾಯಗೊಂಡಿದ್ದಾರೆ.
ಮತೃರನ್ನು ಕೇರಳದ ಕೊಲ್ಲಂನ ಪ್ಯಾಟ್‌ನಿಬಿನ್ ಮ್ಯಾಕ್ಸ್‌ವೆಲ್ (30) ಎಂದು ಗುರುತಿಸಲಾಗಿದೆ. 2 ತಿಂಗಳು ಮೊದಲು ಕೋಳಿ ಫಾರಂವೊಂದರಲ್ಲಿ ಕೆಲಸ ಮಾಡುವುದಕ್ಕಾಗಿ ಇವರು ಇಸ್ರೇಲ್‌ಗೆ ಪ್ರಯಾಣಿಸಿದ್ದರು. ಅವರಿಗೆ ಈಗಾಗಲೇ 5 ವರ್ಷದ 1 ಮಗುವಿದ್ದು, 2ನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಇದೇ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ, ಜೋಸೆಫ್ ಜಾರ್ಜ್ (31) ಮತ್ತು ಪಾಲ್ ಮೆಲ್ವಿನ್ (28) ಎಂಬ ಮತ್ತಿಬ್ಬರು ಗಾಯಗೊಂಡಿದ್ದಾರೆ.
ತಪ್ಪಿದ ಗುರಿಗೆ ಬಲಿ: ಸೋಮವಾರ ಇಸ್ರೇಲ್ ಟ್ಯಾಂಕರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಕ್ಷಿಪಣಿ ದಾಳಿ ಗುರಿ ತಪ್ಪಿ ಕೃಷಿ ಭೂಮಿಯೊಂದರ ಮೇಲೆ ಬಿದ್ದಿದೆ. ಹೀಗಾಗಿ ಈ ಅನಾಹುತ ಉಂಟಾಗಿದೆ.
ಭಾರತದ ಎಚ್ಚರಿಕೆ: ಕ್ಷಿಪಣಿ ದಾಳಿಗೆ ಭಾರತೀಯನೊಬ್ಬ ಬಲಿಯಾದ ಬೆನ್ನಲ್ಲೆ ಎಚ್ಚರಿಕೆಯ ಮಾರ್ಗಸೂಚಿ ಬಿಡುಗಡೆ ಮಾಡಿರುವ ಭಾರತ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಇಸ್ರೇಲ್‌ನ ಗಡಿ ಪ್ರದೇಶಗಳನ್ನು ತೊರೆದು ದೇಶದೊಳಗಿನ ಸುರಕ್ಷಿತ ಸ್ಥಳಕ್ಕೆ ಸಾಧ್ಯವಾದಷ್ಟು ಬೇಗ ತೆರಳಬೇಕು ಎಂದು ಸೂಚಿಸಿದೆ.
13 ಭಾರತೀಯರಿದ್ದ ನೌಕೆಯ ಮೇಲೆ ಹೌತಿ ದಾಳಿ, ನೌಕಾಪಡೆಯಿಂದ ರಕ್ಷಣೆ
ಹೊಸದಿಲ್ಲಿ: ಕೆಂಪು ಸಮುದ್ರದ ಗಲ್ಫ್ ಏಡನ್ ಬಳಿ ಲೈಬೀರಿಯಾ ಹಗಡಿನ ಮೇಲೆ ಹೌತಿ ಉಗ್ರರು ನಡೆಸಿದ ಡ್ರೋನ್ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ. ಈ ವೇಳೆ ಹಡಗಿನಲ್ಲಿದ್ದ 13 ಭಾರತೀಯರು ಸೇರಿದಂತೆ 23 ಮಂದಿಯನ್ನು ರಕ್ಷಿಸಿದೆ. ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಉಪಟಳ ಹೆಚ್ಚಾದ ಬೆನ್ನಲ್ಲೇ ಭಾರತ ತನ್ನ ನೌಕಾಪಡೆಯನ್ನು ರಕ್ಷಣೆಗಾಗಿ ನೇಮಕ ಮಾಡಿದೆ. ಕಳೆದ ವಾರವೂ ಸಹ ಒಂದು ಹಡಗನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿತ್ತು.
ಇದನ್ನೂ ಓದಿ: Underwater Metro: ದೇಶದ ಮೊದಲ ನೀರಿನಾಳದ ಮೆಟ್ರೋ ಮಾರ್ಗಕ್ಕೆ ಇಂದು ಪ್ರಧಾನಿ ಚಾಲನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.