Explainer:“Boycott India”…ಏನಿದು ಬಾಂಗ್ಲಾದೇಶದಲ್ಲಿನ ಆನ್‌ ಲೈನ್‌ ಅಭಿಯಾನ ಬೆಳವಣಿಗೆ?

2023ರ ಡಿಸೆಂಬರ್‌ ನಲ್ಲಿ ಭಾರತ ಈರುಳ್ಳಿ ರಫ್ತಿಗೆ ನಿಷೇಧ ಹೇರಿತ್ತು...

ನಾಗೇಂದ್ರ ತ್ರಾಸಿ, Mar 6, 2024, 5:26 PM IST

Explainer:“Boycutt India”…ಏನಿದು ಬಾಂಗ್ಲಾದೇಶದಲ್ಲಿನ ಆನ್‌ ಲೈನ್‌ ಅಭಿಯಾನ ಬೆಳವಣಿಗೆ?

ಪ್ರವಾಸೋದ್ಯಮ ವಿಚಾರದಲ್ಲಿ ಭಾರತ ಮತ್ತು ಮಾಲ್ಡೀವ್ಸ್‌ ಸಂಬಂಧ ಹಳಸಿದ ಬೆನ್ನಲ್ಲೇ ಇದೀಗ ಶೇಕ್‌ ಹಸೀನಾ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ “Boycott India” ಅಭಿಯಾನ ಆರಂಭವಾಗಿದೆ. ಬಾಂಗ್ಲಾದೇಶದಲ್ಲಿ ಯಾಕೆ ಈ ಅಭಿಯಾನ ಆರಂಭಗೊಂಡಿದೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:Rameshwaram Cafe: ಬಾಂಬರ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ: ಎನ್‌ಐಎ ಘೋಷಣೆ

ಮುಂಬರುವ ರಮ್ಜಾನ್‌ ಹಾಗೂ ಈದ್‌ ಹಬ್ಬದ ಹಿನ್ನೆಲೆಯಲ್ಲಿ ಭಾರತ ಇತ್ತೀಚೆಗಷ್ಟೇ ಬಾಂಗ್ಲಾದೇಶ ಮತ್ತು ಯುಎಇಗೆ ಈರುಳ್ಳಿ ರಫ್ತು ಮಾಡಲು ನಿರ್ಬಂಧ ತೆರವುಗೊಳಿಸಿ ವಿನಾಯ್ತಿ ನೀಡಿತ್ತು. ಏತನ್ಮಧ್ಯೆ ಬಾಂಗ್ಲಾದೇಶದಲ್ಲಿ ಬಾಯ್ಕಾಟ್‌ ಭಾರತ ಅಭಿಯಾನ ನಡೆಯುತ್ತಿದೆ.

ಏನಿದು Anti India campaign?

ಭಾರತ ಸರ್ಕಾರ ಢಾಕಾದ ಶೇಕ್‌ ಹಸೀನಾ ನೇತೃತ್ವದ ಸರ್ಕಾರದ ಪರವಾಗಿದ್ದು, ಈ ಹಿನ್ನೆಲೆಯಲ್ಲಿ ಶೇಕ್‌ ಹಸೀನಾ ಮತ್ತು ಅವಾಮಿ ಲೀಗ್‌ ಮುಖಂಡರು ಅಧಿಕಾರ ಹಿಡಿದ ನಂತರ ವಿಪಕ್ಷಗಳು ಈ ಬಾಯ್ಕಾಟ್‌ ಇಂಡಿಯಾ ಅಭಿಯಾನ ಆರಂಭಿಸಿರುವುದಾಗಿ ವರದಿ ವಿವರಿಸಿದೆ.

ಸೋಮವಾರ ಭಾರತ ಬಾಂಗ್ಲಾದೇಶಕ್ಕೆ 50,000 ಟನ್‌ ಗಳಷ್ಟು ಈರುಳ್ಳಿ ರಫ್ತು ಮಾಡಲು ಅನುಮತಿ ನೀಡಿದ ನಂತರ ಬಾಂಗ್ಲಾದ ಕೆಲವು ಸಾಮಾಜಿಕ ಜಾಲತಾಣದ ಮೂಲಕ ಬಾಯ್ಕಾಟ್‌ ಇಂಡಿಯಾ ಅಭಿಯಾನ ನಡೆಸುವ ಮೂಲಕ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ದ್ವೇಷವನ್ನು ಹರಡುತ್ತಿರುವುದಾಗಿ ವರದಿ ತಿಳಿಸಿದೆ.

ರಮ್ಜಾನ್‌ ಉಪವಾಸದ ಸಂದರ್ಭದಲ್ಲಿ ಈರುಳ್ಳಿ ಪ್ರಮುಖ ಖಾದ್ಯವನ್ನಾಗಿ ಬಳಸಲಾಗುತ್ತದೆ. ಭಾರತ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದ ನಂತರ ಇದೀಗ ಸ್ನೇಹಿ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಯುಎಇಗೆ ಈರುಳ್ಳಿ ರಫ್ತು ಮಾಡಲು ಅನುವು ಮಾಡಿಕೊಟ್ಟಿದೆ. 2023ರ ಡಿಸೆಂಬರ್‌ ನಲ್ಲಿ ಭಾರತ ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ನಂತರ ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕಂಡಿತ್ತು.

ಅಜ್‌ ಜಜೀರಾ ವರದಿ ಪ್ರಕಾರ, ಢಾಕಾದ ಪಂಥಾಪತ್‌ ಪ್ರದೇಶದಲ್ಲಿ ಸಾಮಾನ್ಯವಾಗಿ ಭಾರತೀಯ ಉತ್ಪನ್ನಗಳನ್ನು ಖರೀದಿಸುವ ಅಂಗಡಿಗಳು ಇದೀಗ ಭಾರತೀಯ ಉತ್ಪನ್ನಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿರುವುದಾಗಿ ತಿಳಿಸಿದೆ.

ಢಾಕಾ ಮತ್ತು ಚಿತ್ತಗಾಂಗ್‌ ನಲ್ಲಿರುವ ಹಲವಾರು ಅಂಗಡಿಗಳ ಸಿಬಂದಿಗಳ ಮಾಹಿತಿ ಪ್ರಕಾರ, ಭಾರತೀಯ ಉತ್ಪನ್ನಗಳಾದ ಅಡುಗೆ ಎಣ್ಣೆ, ಸಂಸ್ಕರಿಸಿದ ಆಹಾರ, ಸೌಂದರ್ಯವರ್ಧಕ ಮತ್ತು ಇತರ ಉತ್ಪನ್ನಗಳ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಬಾಂಗ್ಲಾದೇಶದಲ್ಲಿನ ಆನ್‌ ಲೈನ್‌ ಅಭಿಯಾನವು ಬಾಂಗ್ಲಾದೇಶಿಗರ ಮತ್ತು ಗಡಿಪಾರುಗೊಂಡವರ ನೇತೃತ್ವದಲ್ಲಿ ಕೆಲವು ಪ್ರದೇಶಗಳಲ್ಲಿ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಾಯ್ಕಾಟ್‌ ಇಂಡಿಯಾ ಅಭಿಯಾನದ ಪ್ರಮುಖ ರೂವಾರಿಗಳಲ್ಲಿ ಪ್ಯಾರಿಸ್‌ ಮೂಲದ ಪಿನಾಕಿ ಭಟ್ಟಾಚಾರ್ಯ ಕೂಡಾ ಒಬ್ಬರು ಎಂದು ವರದಿ ತಿಳಿಸಿದೆ.

ಬಾಂಗ್ಲಾದೇಶದಿಂದ ಗಡಿಪಾರುಗೊಂಡ ಬ್ಲಾಗರ್‌, ಜಾಲತಾಣ ಕಾರ್ಯಕರ್ತೆ, ಮಾನವಹಕ್ಕುಗಳ ಹೋರಾಟಗಾರ್ತಿ ಎಂದು ಕರೆದುಕೊಳ್ಳುವ ವೈದ್ಯೆ ಪಿನಾಕಿ ಜನವರಿ ಅಂತ್ಯದಲ್ಲಿ ಇಂಡಿಯಾ ಔಟ್‌ ಅಭಿಯಾನಕ್ಕೆ ಕರೆ ನೀಡಿದ್ದಳು. ಇದರ ಪರಿಣಾಮ ಶೇಕ್‌ ಹಸೀನಾ ಅಧಿಕಾರ ವಹಿಸಿಕೊಂಡ ನಂತರ ಬಾಯ್ಕಾಟ್‌ ಇಂಡಿಯನ್‌ ಪ್ರಾಡಕ್ಟ್ಸ್‌, ಇಂಡಿಯಾ ಔಟ್‌ ಹ್ಯಾಶ್‌ ಟ್ಯಾಗ್‌ ಬಾಂಗ್ಲಾದೇಶದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದ್ದವು. ಇದಕ್ಕೆ ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್‌ ಪಕ್ಷ ಮತ್ತು ಇಸ್ಲಾಮಿಸ್ಟ್‌ ಪಕ್ಷ ಸಾಥ್‌ ನೀಡಿದ್ದು, ಬಾಂಗ್ಲಾದೇಶ್‌ ಜಮಾತ್‌ ಇ ಇಸ್ಲಾಮಿ ಬಾಯ್ಕಾಟ್‌ ಕರೆಯಿಂದ ದೂರ ಉಳಿದಿದೆ.

2022-23ರಲ್ಲಿ ಬಾಂಗ್ಲಾದೇಶಕ್ಕೆ ರಫ್ತಾದ ಭಾರತದ ಒಟ್ಟು ರಫ್ತಿನ ಶೇ.2.6ರಷ್ಟಿದ್ದ ಕಾರಣ ಉತ್ಪನ್ನಗಳ ಬಹಿಷ್ಕಾರ ಆರ್ಥಿಕವಾಗಿ ಹೆಚ್ಚು ಪರಿಣಾಮ ಬೀರಿಲ್ಲ ಎಂದು ವರದಿ ಹೇಳಿದೆ. ಬಾಂಗ್ಲಾದೇಶ ಸ್ವತಂತ್ರಗೊಳ್ಳಲು ಮಾತ್ರ ಭಾರತ ನೆರವು ನೀಡಿಲ್ಲ, ಜೊತೆಗೆ ಬಾಂಗ್ಲಾ ಅಧ್ಯಕ್ಷ ಶೇಕ್‌ ಮುಜಿಬುರ್‌ ರಹಮಾನ್‌ ಅವರ ಹತ್ಯೆಯ ನಂತರ ಶೇಕ್‌ ಹಸೀನಾ ಮತ್ತು ಸಹೋದರಿಗೆ ಭಾರತ ಆಶ್ರಯ ನೀಡಿತ್ತು.

ಮತ್ತೊಂದೆಡೆ ಬಾಂಗ್ಲಾದೇಶ ಸರ್ಕಾರವನ್ನು ಒಲೈಸಲು ಚೀನಾ ತೀವ್ರವಾಗಿ ಪ್ರಯತ್ನಿಸುತ್ತಿದೆ. ಇವೆಲ್ಲದರ ನಡುವೆ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಅಭಿಯಾನ ಹೆಚ್ಚು ಪ್ರಭಾವ ಬೀರಿಲ್ಲ ಎಂದು ಚಿತ್ತಗಾಂಗ್‌ ವಿವಿಯ ಮುಂತಸ್ಸಿರ್‌ ಮಾಮೂನ್‌ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಕೆಲವು ಬಾಂಗ್ಲಾದೇಶಿಗಳು “ಮೆಕ್ಸಿಕನ್‌ ಸಿಂಡ್ರೊಮ್‌ ನಿಂದ ಬಳಲುತ್ತಿದ್ದಾರೆ. ಇದು ಕಾಲಕಾಲಕ್ಕೆ ಭಾರತವನ್ನು ಬಹಿಷ್ಕರಿಸಿ, ಇಂಡಿಯಾ ಔಟ್‌ ಅಭಿಯಾನಗಳಿಗೆ ಕಾರಣವಾಗಬಹುದು. ಆದರೆ ಎರಡೂ ದೇಶಗಳ ನಡುವೆ ಐತಿಹಾಸಿಕ ಸಂಬಂಧವಿದೆ ಎಂಬುದನ್ನು ಗಮನಿಸಬೇಕಾಗಿದೆ.

ಟಾಪ್ ನ್ಯೂಸ್

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್

1-qeqwe

Russia ದಿಂದ ಉಕ್ರೇನ್‌ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.