Ticket for money ಸಂಸ್ಕೃತಿ ಕಾಂಗ್ರೆಸ್ ನಲ್ಲಿ ಇಲ್ಲ : ಸಚಿವ ಲಾಡ್
ಕಾಂಗ್ರೆಸ್ ಮೊದಲೇ ಬಡವರ ಪಕ್ಷ.. ನಮ್ಮಲ್ಲಿ ಇರುವವರೆಲ್ಲ ಬಡವರು...
Team Udayavani, Mar 6, 2024, 10:04 PM IST
ಧಾರವಾಡ : ಕಾಂಗ್ರೆಸ್ ಪಕ್ಷದಲ್ಲಿ ಹಣ ಕೊಟ್ಟರೆ ಟಿಕೆಟ್ ಕೊಡುವ ಬಗ್ಗೆ ಕೆಪಿಸಿಸಿ ಸದಸ್ಯ ಡಾ.ರವೀಂದ್ರ ಮಾಡಿರುವ ಆರೋಪವು ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಯಾಗುವವರ ಕಡೆ ಹಣ ಪಡೆಯುತ್ತೇವೆ ಎಂಬ ಆರೋಪ ಮಾಡಿದ್ದಾರೆ. ಆದರೆ ಆ ತರಹ ಏನೂ ಇಲ್ಲ. ಆ ಸಂಸ್ಕೃತಿ ನಮ್ಮ ಪಕ್ಷದಲ್ಲಿಯೂ ಇಲ್ಲ. ನಮ್ಮ ಪಕ್ಷ ಮೊದಲೇ ಬಡವರ ಪಕ್ಷವಾಗಿದ್ದು, ಬಿಜೆಪಿಯವರದ್ದು ಕುಬೇರರ ಪಕ್ಷ. ಅವರ ಹತ್ತಿರ ಹಣವಿದ್ದು, ನಮ್ಮ ಹತ್ತಿರ ಹಣ ಎಲ್ಲಿದೆ. ನೂರು ಕೋಟಿ ಕೊಟ್ಟು ಟಿಕೆಟ್ ಪಡೆಯುವವರು ನಮ್ಮ ಪಕ್ಷದಲ್ಲಿ ಇಲ್ಲ. ನಮ್ಮಲ್ಲಿ ಇರುವವರೆಲ್ಲ ಬಡವರು ಎಂದರು.
ಮಹದಾಯಿ ವಿವಾದ ಬಗೆ ಹರಿಸದಿದ್ದರೆ ಅಮ್ಮಿನಬಾವಿಯ ಜಾಕ್‌ವೆಲ್ ಬಂದ್ ಮಾಡುವ ಬಗ್ಗೆ ಮಹಾದಾಯಿ ಹೋರಾಟಗಾರರು ಎಚ್ಚರಿಕೆ ನೀಡಿದ್ದು, ರೈತರ ಹೋರಾಟ, ಅವರ ಅಭಿಪ್ರಾಯಕ್ಕೆ ನಮ್ಮ ಗೌರವವಿದೆ. ಈಗಾಗಲೇ ಈ ವಿಷಯದಲ್ಲಿ ಸಿಎಂ ಸಹ ಸ್ಪಷ್ಟನೆ ಕೊಟ್ಟಿದ್ದಾರೆ. ಕೇಂದ್ರದ ಪರಿಸರ ಸಚಿವಾಲಯದ ಆನುಮತಿ ಇಲ್ಲದೇ ನಾವು ಕೆಲಸ ಮಾಡಲು ಆಗದು ಎಂದರು.
ಇದು ಆಗಬೇಕಾಗಿರುವುದು ಕೇಂದ್ರ ಸರಕಾರದಿಂದ. ಈ ವಾಸ್ತವಾಂಶ ಹೇಳಿದರೆ ರಾಜಕೀಯ ಅನ್ನುತ್ತಾರೆ. ಈ ಅನುಮತಿ ಸಿಗುವ ಮುನ್ನವೇ ಬಿಜೆಪಿ ವಿಜಯೋತ್ಸವ ಮಾಡಿದ್ದಲ್ಲದೇ ಬಿಜೆಪಿ ಸರಕಾರವಿದ್ದಾಗ ಮಹದಾಯಿ ಸಂಭ್ರಮಾಚರಣೆ ಮಾಡಿದ್ದಾರೆ. ಅನುಮತಿ ಸಿಗದೇ ಸಂಭ್ರಮಾಚರಣೆ ಮಾಡುವ ಅಗತ್ಯವೇನಿತ್ತು. ನಾವಂತೂ ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಸಿಕ್ಕ ಕೂಡಲೇ ಖಂಡಿತವಾಗಿಯೂ ಕೆಲಸ ಆರಂಭಿಸುತ್ತೇವೆ ಎಂದು ಸಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.