Missile Attack: ಸರಕು ಹಡಗಿನ ಮೇಲೆ ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ, ಮೂವರು ಮೃತ್ಯು
Team Udayavani, Mar 7, 2024, 8:34 AM IST
ದುಬೈ: ಗಲ್ಫ್ ಆಫ್ ಏಡನ್‌ನಲ್ಲಿ ವಾಣಿಜ್ಯ ಹಡಗಿನ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ಬುಧವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹಡಗಿನಲ್ಲಿದ್ದ ಮೂವರು ಸಿಬ್ಬಂದಿಗಳು ಸಾವನ್ನಪ್ಪಿದ್ದು ಮತ್ತು ಬದುಕುಳಿದವರು ಹಡಗನ್ನು ತ್ಯಜಿಸುವಂತೆ ಒತ್ತಾಯಿಸಿದ್ದಾರೆ ಎಂದು ಯುಎಸ್ ಮಿಲಿಟರಿ ತಿಳಿಸಿದೆ.
ಹೌತಿ ಬಂಡುಕೋರರ ಕ್ಷಿಪಣಿ ದಾಳಿಯಲ್ಲಿ ವ್ಯಾಪಾರಿ ಹಡಗಿನ ಇಬ್ಬರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಆರಂಭಿಸಿದ ನಂತರ ಹೌತಿ ಬಂಡುಕೋರರು ನಡೆಸಿದ ಮೊದಲ ದಾಳಿ ಇದಾಗಿದ್ದು, ಇದರಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಾರ್ಬಡೋಸ್ ಧ್ವಜದ ಟ್ರೂ ಕಾನ್ಫಿಡೆನ್ಸ್ ಹಡಗಿನ ಮೇಲೆ ದಾಳಿ ನಡೆದಿದೆ. ಈ ದಾಳಿಯ ನಂತರ, ಏಷ್ಯಾ ಮತ್ತು ಮಧ್ಯಪ್ರಾಚ್ಯವನ್ನು ಯುರೋಪ್‌ಗೆ ಸಂಪರ್ಕಿಸುವ ಪ್ರಮುಖ ಸಮುದ್ರ ಮಾರ್ಗದಲ್ಲಿ ಸಂಘರ್ಷ ಹೆಚ್ಚಾಗಿದೆ. ಇದರಿಂದಾಗಿ ಹಡಗುಗಳ ಜಾಗತಿಕ ಸಂಚಾರ ಅಸ್ತವ್ಯಸ್ತಗೊಂಡಿದೆ.
ಇರಾನ್ ಬೆಂಬಲಿತ ಹೌತಿಗಳು ನವೆಂಬರ್‌ನಲ್ಲಿ ಹಡಗುಗಳ ಮೇಲೆ ದಾಳಿಗಳನ್ನು ಪ್ರಾರಂಭಿಸಿತ್ತು ಮತ್ತು ಯುಎಸ್ ಜನವರಿಯಲ್ಲಿ ವೈಮಾನಿಕ ದಾಳಿಯ ಅಭಿಯಾನವನ್ನು ಪ್ರಾರಂಭಿಸಿತು. ಹೌತಿ ಬಂಡುಕೋರರ ನೆಲೆಗಳನ್ನು ಅಮೆರಿಕ ಹಲವು ಬಾರಿ ಧ್ವಂಸ ಮಾಡಿದೆ, ಆದರೆ ಇಲ್ಲಿಯವರೆಗೆ ಹೌತಿಗಳ ದಾಳಿಯನ್ನು ತಡೆಯಲು ಸಾಧ್ಯವಾಗಿಲ್ಲ. ಇದೇ ವೇಳೆ ಇರಾನ್ ದೊಡ್ಡ ಘೋಷಣೆ ಮಾಡಿದ್ದು, ಅಮೆರಿಕಕ್ಕೆ ಅಚ್ಚರಿ ಮೂಡಿಸಿದೆ. ಅಮೆರಿಕದ ಇಂಧನ ಕಂಪನಿ ಚೆವ್ರಾನ್ ಕಾರ್ಪ್‌ಗೆ ಕಳುಹಿಸಲಾಗುತ್ತಿರುವ 50 ಮಿಲಿಯನ್ ಡಾಲರ್ ಮೌಲ್ಯದ ಕುವೈತ್ ಕಚ್ಚಾ ತೈಲವನ್ನು ವಶಪಡಿಸಿಕೊಳ್ಳುವುದಾಗಿ ಇರಾನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಯೆಮೆನ್‌ನಲ್ಲಿ ಹೌತಿ ಬಂಡುಕೋರರಿಂದ ಕೆಂಪು ಸಮುದ್ರದಲ್ಲಿ ಪ್ರಯಾಣಿಸುವ ಹಡಗುಗಳು ನಿರಂತರವಾಗಿ ಗುರಿಯಾಗುತ್ತಿವೆ. ಇಸ್ರೇಲ್, ಅಮೆರಿಕ ಅಥವಾ ಅವರ ಸ್ನೇಹಿ ರಾಷ್ಟ್ರಗಳಿಗೆ ಸೇರಿದ ವ್ಯಾಪಾರಿ ಹಡಗುಗಳ ಮೇಲೆ ಅವರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: Rameshwaram Cafe Case; ಶಂಕಿತ ಉಗ್ರನ ಮಾಹಿತಿ ಪಡೆಯಲು ಎನ್ಐಎ ತಂಡ ಬಳ್ಳಾರಿಗೆ
At least 2 innocent sailors have died. This was the sad but inevitable consequence of the Houthis recklessly firing missiles at international shipping.
They must stop.
Our deepest condolences are with the families of those that have died and those that were wounded. https://t.co/m1chfLddHR
— BritishEmbassySanaa (@UKinYemen) March 6, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.