UV Fusion: ಸವಿದವನೇ ಬಲ್ಲ ಆಲೆಮನೆಯ ಬೆಲ್ಲ


Team Udayavani, Mar 8, 2024, 7:45 AM IST

15-uv-fusion

ಒಂದೆಡೆ ಚುಮು ಚುಮು ಚಳಿ, ಇನ್ನೊಂದು ಕಡೆ ಕಬ್ಬಿನ ಗಾಣ, ಒಂದೆಡೆ ಕೊಪ್ಪರಿಗೆಯಲ್ಲಿ ಕುದಿಯುತ್ತಿರುವ ನೊರೆ ಬೆಲ್ಲದ ಘಮ, ಇದನ್ನು ನೋಡಿದ ಕೆಲವರಿಗೆ ಏನಪ್ಪಾ? ಏನು ಇದೆಲ್ಲ ಎಂದು ಒಮ್ಮೆಲೇ ಅನಿಸುತ್ತದೆ. ಇದು ಮಲೆನಾಡಿನ ವಿಶೇಷ ಆಲೆಮನೆ.

ಹೌದು, ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಶಿರಸಿ, ಸಿದ್ದಾಪುರ ಭಾಗದಲ್ಲಿಗ ಆಲೆಮನೆ ಹಬ್ಬದ ಸುಗ್ಗಿ. ಪ್ರತಿ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೂ ಈ ಭಾಗದಲ್ಲಿ ಕಬ್ಬು ಬೆಳೆದ ರೈತರು ಕಟಾವು ಮಾಡಿ ಹಾಲು ಹಿಂಡಿ ಜೋನಿ ಬೆಲ್ಲ ಮಾಡುವ ಸಮಯ. ಪೂರ್ತಿ ಆಲೆಮನೆ ಬೆಲ್ಲದ ವಿಶಿಷ್ಟ ಪರಿಮಳದಿಂದ ಕೂಡಿರುತ್ತದೆ.

ಸಂಜೆ ವೇಳೆ ಪ್ರತಿಯೊಬ್ಬರ ಮನೆಯಲ್ಲಿಯೂ ಹಬ್ಬದ ವಾತಾವರಣ ಇರುತ್ತದೆ. ಸ್ನೇಹಿತರು, ನೆಂಟರು, ಬಂಧು – ಬಳಗದವರನ್ನು ಮನೆಗೆ ವಿಶೇಷವಾಗಿ ಆಹ್ವಾನಿಸುತ್ತಾರೆ. ಮಕ್ಕಳು ಮತ್ತು ವೃದ್ಧರು ವಯೋಬೇಧವಿಲ್ಲದೆ ಎಲ್ಲರೂ ಸಂಭ್ರಮಿಸುತ್ತಾರೆ.ಎಷ್ಟೇ ಜನ ಬಂದರೂ ಬೆಲ್ಲ, ಕಬ್ಬಿನ ಹಾಲು ನೀಡುವುದು ಕಬ್ಬು ಬೆಳೆದ ರೈತರ ಸಂಪ್ರದಾಯ.

ಸುಮಾರು 8-10 ವರ್ಷಗಳ ಹಿಂದಿನವರೆಗೂ ಕಬ್ಬು ಅರೆದು ಹಾಲು ಹಿಂಡಲು ಕಬ್ಬಿಣದ ಗಾಣ, ಅದನ್ನು ಚಲಿಸಲು ಕೋಣ ಅಥವಾ ಬಲಿಷ್ಠ ಎತ್ತುಗಳ ಗಾಣ ಸುತ್ತುವಿಕೆ ನಡೆಯುತ್ತಿತ್ತು. ಕಾಲ ಬದಲಾದಂತೆ ಡಿಸೇಲ್‌ ಚಾಲಿತ ಕ್ರಶರರ್‌ ಸಹಾಯದಿಂದ ಕಬ್ಬಿನಹಾಲು ಹಿಂಡಲಾಗುತ್ತಿದೆ. ಕಬ್ಬಿನ ಸಿಪ್ಪೆಯನ್ನು ಉರುವಲಾಗಿ ಬಳಸಲಾಗುತ್ತಿದೆ.

ದಿನವಿಡೀ ಕ್ರಶರ್‌ಗಳಲ್ಲಿ ಕಬ್ಬಿನ ಹಾಲು ಹಿಂಡುವುದು, ದೊಡ್ಡ ದೊಡ್ಡ ಕೊಪ್ಪರಿಗೆಯಲ್ಲಿ ಕಬ್ಬಿನಹಾಲು ಕುದಿಸಿ ಜೋನಿ ಬೆಲ್ಲ ತಯಾರಿಸುವುದು, ಬೆಲ್ಲ ಹದಗೊಳ್ಳುವ ಹಂತದಲ್ಲಿ ಕೊಪ್ಪರಿಗೆಯನ್ನು ಉದ್ದನೆಯ ಬಿದಿರಿನ ಬೊಂಬಿನ ಸಹಾಯದಿಂದ ನಾಲ್ಕಾರು ಜನ ಒಟ್ಟಾಗಿ ಒಲೆಯಿಂದ ಇಳಿಸಿ ಪಾಕದ ಮರಿಗೆಗೆ ಸುರಿಯುವುದು, ಎರಡು-ಮೂರು ಗಂಟೆ ಬಳಿಕ ತಣ್ಣಗಾದ ಜೋನಿ ಬೆಲ್ಲವನ್ನು ಡಬ್ಬಗಳಲ್ಲಿ ತುಂಬುವುದು ಹೀಗೆ ಆಲೆಮನೆಯಲ್ಲಿ ವೈವಿಧ್ಯಮಯ ಕೆಲಸ ಕಂಡುಬರುತ್ತದೆ.

ಇಲ್ಲಿ ತರ ತರದ ಕಬ್ಬಿನ ಹಾಲು ಸಹ ಲಭ್ಯವಿರುತ್ತದೆ. ಸಾಂಪ್ರದಾಯಿಕ ಹಾಗೂ ಜೈವಿಕ ಗೊಬ್ಬರದಿಂದ ಕೃಷಿ ಮಾಡಿದ ಕಬ್ಬುಗಳು ಬಲು ರುಚಿಯಾಗಿರುತ್ತದೆ. ಹೀಗಾಗಿ ಕಬ್ಬಿನ ಹಾಲಿನ ಜತೆ ಶುಂಠಿ, ನಿಂಬೆ ಹಣ್ಣು,ನೆಲ್ಲಿಕಾಯಿ ಮಿಶಿತ ಕಬ್ಬಿನ ಹಾಲು, ಪುದೀನ, ಸೊಗದೆ ಬೇರು, ಮಜ್ಜಿಗೆ ಹುಲ್ಲು, ಒಂದೆಲಗ ಹೀಗೆ ಔಷಧೀಯ ಗುಣವಿರುವ ಕಬ್ಬಿನ ಹಾಲು ಸವಿಯಲು ಸಿಗುತ್ತದೆ. ಇದರ ಜತೆ ಮಲೆನಾಡಿನ ಪ್ರಸಿದ್ಧ ಅಪ್ಪೆ ಮಿಡಿ, ಜೀರಿಗೆ ಮಿಡಿ ಮಾವಿನ ಉಪ್ಪಿನ ಕಾಯಿ,ಮಂಡಕ್ಕಿ ಮಿರ್ಚಿ ರುಚಿ ಹೆಚ್ಚಿಸುತ್ತದೆ.

ಇನ್ನು ಕೆಲವು ಸಂಘ- ಸಂಸ್ಥೆಗಳೂ ಸಹ ಆಲೆಮನೆ ಹಬ್ಬವನ್ನು ಏರ್ಪಡಿಸುತ್ತವೆ ಅಲ್ಲಿ ಕಬ್ಬಿನ ಹಾಲಿನ ತರೆಹವಾರಿ ತಿಂಡಿಗಳಾದ ಮಣ್ಣಿ, ತೋಡೆದೇವು ಇನ್ನಷ್ಟು ಬಗೆಯ ಖಾದ್ಯಗಳು ಲಭ್ಯವಿರುತ್ತದೆ. ಆಲೆಮನೆ ತಿಂಡಿಪ್ರಿಯರ ಸ್ವರ್ಗವೆಂದರೆ ತಪ್ಪಾಗಲಾರದು. ಸಂಪೂರ್ಣ ಆಧುನಿಕರಣವಾಗಿರುವ ಕಾಲದಲ್ಲಿಯೂ ಸಹ ಇನ್ನೂ ಕೆಲವು ಕಡೆ ಕೆಲವರು ಸಂಪ್ರದಾಯ ಮರೆಯದೆ ಆಲೆಮನೆ ಏರ್ಪಡಿಸುತ್ತಾರೆ. ಜೀವನದಲ್ಲಿ ಒಮ್ಮೆಯದರೂ ಆಲೆಮನೆಯ ಬಿಸಿ ಬಿಸಿ ನೊರೆ ಬೆಲ್ಲದ ಘಮ, ರುಚಿಯನ್ನು ಸವಿಯಲೇ ಬೇಕು..ಏನಂತೀರಿ?

-ಪೂಜಾ ಆರ್‌. ಹೆಗಡೆ

ಮೇಲಿನಮಣ್ಣಿಗೆ

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.