Water Problem ; ಬಿಜೆಪಿ ಐಟಿ ಸೆಲ್ ಗೆ ಸೂಕ್ತ ಬಹುಮಾನ ನೀಡುತ್ತೇವೆ ಎಂದ ಕಾಂಗ್ರೆಸ್
ನೀರಿಲ್ಲ, ನೀರಿಲ್ಲ...
Team Udayavani, Mar 8, 2024, 6:30 PM IST
ಬೆಂಗಳೂರು: ಮಾರ್ಚ್ ತಿಂಗಳ ಆರಂಭದಲ್ಲೇ ರಾಜ್ಯ ರಾಜಧಾನಿ ಸೇರಿ ವಿವಿಧೆಡೆ ನೀರಿನ ಸಮಸ್ಯೆ ತಾಂಡವವಾಡಲು ಆರಂಭಿಸಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಎಕ್ಸ್ ನಲ್ಲಿ ಸಮರಕ್ಕಿಳಿದಿವೆ.
ನೀರಿಲ್ಲ, ನೀರಿಲ್ಲ ರಾಜಧಾನಿ ಬೆಂಗಳೂರಿನ ಪ್ರತಿ ಏರಿಯಾದಲ್ಲೂ ಕುಡಿಯಲು ನೀರಿಲ್ಲ.ಸಿಎಂ ಸಿದ್ದರಾಮಯ್ಯ ಅವರ #ಸ್ಲೀಪಿಂಗ್_ಸರ್ಕಾರ ಬಿಸ್ಲೇರಿ ನೀರು ಕುಡಿದು ಮಲಗುತ್ತಿದೆ. ಕೈ ತೊಳೆದುಕೊಳ್ಳಲು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದೆ. ಆದರೆ, ಜನರಿಗೆ ಮಾತ್ರ ಕುಡಿಯಲು ಹನಿ ನೀರಿಗೂ ಹಾಹಾಕಾರ. 12 ದಿನಕ್ಕೊಮ್ಮೆ ನೀರು ಬರುತ್ತಿದೆ. ಟ್ಯಾಂಕರ್ ನೀರು ಬೇಕೆಂದರೆ ದುಬಾರಿ ಬೆಲೆ ನೀಡಬೇಕು. ಡಬಲ್ ಬೆಲೆ ಕೊಟ್ಟರೂ ನೀರು ಸಿಗುತ್ತಿಲ್ಲ.ಬ್ರ್ಯಾಂಡ್ ಬೆಂಗಳೂರನ್ನು ಟ್ರಬಲ್ ಬೆಂಗಳೂರು ಮಾಡಿದ್ದೇ ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಸಚಿವ
ಡಿ.ಕೆ.ಶಿವಕುಮಾರ್ ಅವರ ಸಾಧನೆ” ಎಂದು ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
”ರಾಜ್ಯ ಭೀಕರ ಬರ ಎದುರಿಸುತ್ತಿದೆ,ನೈಸರ್ಗಿಕ ಅಸಮತೋಲನದಿಂದಾಗಿ ನೀರಿಗೆ ಕೊರತೆ ಎದುರಾಗಿದೆ, ನಮ್ಮ ಸರ್ಕಾರ ನೀರಿನ ಕೊರತೆ ನೀಗಿಸಲು ಕ್ರಮ ಕೈಗೊಂಡಿದೆ, ಟ್ಯಾಂಕರ್ ಗಳ ಸುಲಿಗೆಗೆ ಕಡಿವಾಣ ಹಾಕಿದೆ.ಇದೆಲ್ಲದರ ನಡುವೆ,ಕನ್ನಡಿಗರ ತೆರಿಗೆ ಸುಲಿಗೆ ಮಾಡುವ ಕೇಂದ್ರ ಸರ್ಕಾರ ಬರ ಎದುರಿಸುತ್ತಿರುವ ರಾಜ್ಯಕ್ಕೆ ನೀಡಿದ ನೆರವು ಏನು? ಬಿಜೆಪಿಯ 25 ಎಂಪಿಗಳು ಬರ ನಿರ್ವಹಣೆಗೆ ಮಾಡಿದ ಕೆಲಸವೇನು? ಸಾಕ್ಷಿ ಸಮೇತ ಉತ್ತರಿಸಿದರೆ ಬಿಜೆಪಿ ಕರ್ನಾಟಕದ ಐಟಿ ಸೆಲ್ ಗೆ ಸೂಕ್ತ ಬಹುಮಾನ ನೀಡುತ್ತೇವೆ!” ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.