![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 9, 2024, 12:23 AM IST
ಹೊಸದಿಲ್ಲಿ: ಅಗ್ರಸ್ಥಾನಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಣ್ಣ ಮೊತ್ತ ದಾಖಲಿಸಿಯೂ ಯುಪಿ ವಾರಿಯರ್ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದೆ. ಅಂತರ ಕೇವಲ ಒಂದು ರನ್!
ಯುಪಿ 8 ವಿಕೆಟಿಗೆ 138 ರನ್ ಗಳಿಸಿದರೆ, ಡೆಲ್ಲಿ 19.5 ಓವರ್‌ಗಳಲ್ಲಿ 137ಕ್ಕೆ ಆಲೌಟ್ ಆಯಿತು. ಇದು 7 ಪಂದ್ಯಗಳಲ್ಲಿ ಯುಪಿ ಸಾಧಿಸಿದ 3ನೇ ಜಯ. ಡೆಲ್ಲಿ 6 ಪಂದ್ಯಗಳಲ್ಲಿ 2ನೇ ಸೋಲುಂಡಿತು.
ಡೆಲ್ಲಿ ಚೇಸಿಂಗ್ ವೇಳೆ ನಾಯಕಿ ಮೆಗ್ ಲ್ಯಾನಿಂಗ್ 60 ರನ್ ಬಾರಿಸಿದರು (46 ಎಸೆತ, 12 ಬೌಂಡರಿ). ಆದರೆ ಅನಂತರ ಯುಪಿ ಬೌಲಿಂಗ್ ಬಿಗಿಗೊಂಡಿತು. ದೀಪ್ತಿ ಶರ್ಮ 19ನೇ ಓವರ್‌ನಲ್ಲಿ 3 ವಿಕೆಟ್ ಹಾರಿಸಿ ಪಂದ್ಯಕ್ಕೆ ತಿರುವು ಕೊಟ್ಟರು. ಅಂತಿಮ ಓವರ್‌ನಲ್ಲಿ ಮತ್ತೆ 3 ವಿಕೆಟ್ ಬಿತ್ತು. ಕೊನೆಯ 2 ಓವರ್‌ಗಳಲ್ಲಿ 6 ವಿಕೆಟ್ ಉಡಾಯಿಸಿದ ಯುಪಿ ಅಮೋಘ ಬೌಲಿಂಗ್ ಪರಾಕ್ರಮ ಮೆರೆಯಿತು.
ದೀಪ್ತಿ ಶರ್ಮ ಅವರ ಅರ್ಧ ಶತಕದಿಂದಾಗಿ ಯುಪಿ ಗೌರವಯುತ ಮೊತ್ತ ದಾಖಲಿಸಿತು. ದೀಪ್ತಿ ಗಳಿಕೆ 48 ಎಸೆತಗಳಿಂದ 59 ರನ್ (6 ಬೌಂಡರಿ, 1 ಸಿಕ್ಸರ್). ನಾಯಕಿ ಅಲಿಸ್ಸಾ ಹೀಲಿ 29 ರನ್ ಮಾಡಿದರು. ಎರಡಂಕೆಯ ಸ್ಕೋರ್ ದಾಖಲಿಸಿದ ಮತ್ತೋರ್ವ ಆಟಗಾರ್ತಿ ಗ್ರೇಸ್ ಹ್ಯಾರಿಸ್ (14). ಡೆಲ್ಲಿ ಪರ ತಿತಾಸ್ ಸಾಧು ಮತ್ತು ರಾಧಾ ಯಾದವ್ ತಲಾ 2 ವಿಕೆಟ್ ಕೆಡವಿದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.