ಟ್ರೇಲರ್ ಮೂಲಕ ಸದ್ದು ಮಾಡಿದ್ದ ಅಜಯ್ ದೇವಗನ್ ʼಸೈತಾನ್ʼ: ಮೊದಲ ದಿನ ಗಳಿಸಿದ್ದೆಷ್ಟು?
Team Udayavani, Mar 9, 2024, 1:14 PM IST
ಮುಂಬಯಿ: ಈ ವಾರ ಬಾಲಿವುಡ್ ನಲ್ಲಿ ರಿಲೀಸ್ ಆಗಿರುವ ʼಸೈತಾನ್ʼ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿದೆ. ಆ ಮೂಲಕ ಅಜಯ್ ದೇವಗನ್ ಸಿನಿಮಾಕ್ಕೆ ಪಾಸಿಟಿವ್ ಓಪನಿಂಗ್ ಸಿಕ್ಕಿದೆ.
ಅಜಯ್ ದೇವಗನ್, ಆರ್ ಮಾಧವನ್ ಮತ್ತು ಜ್ಯೋತಿಕಾ ಅಭಿನಯದ ʼಸೈತಾನ್ʼ ಸಿನಿಮಾ ಟ್ರೇಲರ್ ನಿಂದ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿತ್ತು. ಸಿನಿಮಾದ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರಂತೆ ಸಿನಿಮಾ ಫಸ್ಟ್ ಡೇ ಡಿಸೆಂಟ್ ಓಪನಿಂಗ್ ಪಡೆದುಕೊಂಡಿದೆ.
ವಿಕಾಸ್ ಬಹ್ಲ್ ನಿರ್ದೇಶನದ ʼಸೈತಾನ್ʼ ಗುಜರಾತಿ ʼವಶ್ʼ ಸಿನಿಮಾದ ರಿಮೇಕ್ ಆಗಿದೆ. ಇದೊಂದು ವಾಮಾಚಾರ ಕಥೆವುಳ್ಳ ಸಿನಿಮಾವಾಗಿದೆ. ಈ ಕಾರಣದಿಂದ ಸಿನಿಮಾದಲ್ಲಿನ ರಕ್ತದ ದೃಶ್ಯವನ್ನು ಕಡಿಮೆ ಮಾಡಲು ಹಾಗೂ ಚಲನಚಿತ್ರವು ಬ್ಲ್ಯಾಕ್ ಮ್ಯಾಜಿಕ್ ಅನ್ನು ಬೆಂಬಲಿಸುವುದಿಲ್ಲ/ ಅನುಮೋದಿಸುವುದಿಲ್ಲ ಎನ್ನುವ ಬರಹವನ್ನು ಸ್ಕ್ರೀನ್ ಮೇಲೆ ಹಾಕಬೇಕೆಂದು ಸೆನ್ಸಾರ್ ಮಂಡಳಿ ಚಿತ್ರತಂಡಕ್ಕೆ ಸೂಚಿಸಿತ್ತು.
ಇದನ್ನೂ ಓದಿ: Film Producer; ಮಾದಕವಸ್ತು ಕಳ್ಳಸಾಗಣೆ ಪ್ರಕರಣ… ತಮಿಳು ಚಿತ್ರ ನಿರ್ಮಾಪಕ ಅರೆಸ್ಟ್
ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ 14.50 ಕೋಟಿ ರೂ.ಗಳಿಸಿದೆ. ಆ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡಿದೆ.
ಇನ್ನು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಿಯೋ ಸ್ಟುಡಿಯೋಸ್, ದೇವಗನ್ ಫಿಲ್ಮ್ಸ್ ಮತ್ತು ಪನೋರಮಾ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿರುವ ‘ಸೈತಾನ್’ ಸಿನಿಮಾವನ್ನು ಅಜಯ್ ದೇವಗನ್, ಜ್ಯೋತಿ ದೇಶಪಾಂಡೆ, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.