Blink movie review; ಸಮಯದ ಹಿಂದೆ ಸವಾರಿ…
Team Udayavani, Mar 9, 2024, 4:04 PM IST
ಒಂದು ಸಾಮಾನ್ಯ ಹುಡುಗ. ಆತನಿಗೆ ಆತನದ್ದೇ ಒಂದು ಕನಸಿದು. ಆ ಲೋಕದಲ್ಲಿ ಆತ ಸುಖೀ.. ಹೀಗಿರುವಾಗಲೇ ಟೈಮ್ ಟ್ರಾವೆಲಿಂಗ್ ಎಂಬ ವಿಚಿತ್ರ ಜಗತ್ತು ತೆರೆದುಕೊಳ್ಳುತ್ತದೆ. ಅಲ್ಲಿಂದ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಆತನಿಗೂ, ಪ್ರೇಕ್ಷಕನಿಗೂ ಸಿನಿಮಾ ಹೊಸ ಅನುಭವ ಕೊಡುತ್ತದೆ.
ಈ ವಾರ ತೆರೆಗೆ ಬಂದಿರುವ “ಬ್ಲಿಂಕ್’ ಸಿನಿಮಾ ಹೊಸಬರ ಪ್ರಯತ್ನವಾಗಿ ಗಮನ ಸೆಳೆಯುತ್ತದೆ. ಇದು ರಂಗಭೂಮಿ ಹುಡುಗರ ಕನಸು. ಸಿನಿಮಾದ ಆರಂಭದಿಂದಲೂ ರಂಗಭೂಮಿಯ ಎಳೆಯೊಂದು ಸಾಗಿ ಬಂದು ಕೊನೆಗೆ ಸ್ಪಷ್ಟ ಚಿತ್ರಣ ನೀಡುತ್ತದೆ.
ಮುಖ್ಯವಾಗಿ ಒಬ್ಬ ಸಾಧಾರಣ ಹುಡುಗನ ಜೀವನದಲ್ಲಿನ ಎದುರಾಗುವ ಘಟನೆಗಳು, ಆಯಾಮಗಳು ಸಿನಿಮಾದ ಜೀವಾಳ. ಇಡೀ ಕಥೆಯನ್ನು ತುಂಬಾ ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವುದು ನಿರ್ದೇಶಕರ ಜಾಣ್ಮೆ.
ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ, ಮಂದಾರ ಬಟ್ಟಲಹಳ್ಳಿ, ಚೈತ್ರಾ ಜೆ. ಆಚಾರ್, ವಜ್ರಧೀರ್ ಜೈನ್, ಗೋಪಾಲಕೃಷ್ಣ ದೇಶಪಾಂಡೆ, ಕಿರಣ್ ನಾಯ್ಕ, ಮುರುಳಿ ಶೃಂಗೇರಿ, ಸುರೇಶ್ ಅನಗಹಳ್ಳಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸನ್ನ ಕುಮಾರ್ ಅವರ ಹಿನ್ನೆಲೆ ಸಂಗೀತ ಕಥೆಗೆ ಓಘ ಹೆಚ್ಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.