![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Mar 9, 2024, 10:15 PM IST
ಧಾರವಾಡ : ಗಾನಯೋಗಿ ಪಂ.ಪಂಚಾಕ್ಷರ ಗವಾಯಿಗಳು, ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳವರ ಸ್ಮರಣೆ ಹಾಗೂ ಪಂ.ಸೋಮನಾಥ ಮರಡೂರರು 80 ವಸಂತ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಸಂಗೀತ ಗ್ರಾಮ ಸಂಸ್ಥೆ ವತಿಯಿಂದ ನಿರಂತರ 80 ತಾಸಿನ ಗಾಯಯೋಗಿ ಸ್ವರ ಉತ್ಸವ-2024 ರಾಷ್ಟ್ರೀಯ ಸಂಗೀತೋತ್ಸವ ಶನಿವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನವರೆಗೆ ನಡೆಯುತ್ತಿದೆ.
ಸಾನಿಧ್ಯವಹಿಸಿದ್ದ ಗದುಗಿನ ಶ್ರೀವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಪದ್ಮಶ್ರೀ ಪಂ.ಎಮ್.ವೆಂಕಟೇಶಕುಮಾರ ಸೇರಿದಂತೆ ಗಣ್ಯರು, ಪಂ.ಪಂಚಾಕ್ಷರ ಹಾಗೂ ಡಾ.ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ನೀಡಿದರು. ಬೆಳಗ್ಗೆಯಿಂದ ಸಂಜೆವರೆಗೆ ಸೃಜನಾ ರಂಗಮಂದಿರದಲ್ಲಿ ಸಂಗೀತೋತ್ಸವ ನಡೆದರೆ ಸಂಜೆಯಿಂದ ಅಹೋರಾತ್ರಿವರೆಗೆ ನಗರದ ಕೆಸಿಡಿ ಮೈದಾನದಲ್ಲಿ ನಡೆಯುತ್ತಿದೆ.
ಬೆಳಗ್ಗೆ 6 ರಿಂದ ಆರಂಭಗೊಂಡ ಸಂಗೀತೋತ್ಸವವು ರವಿವಾರ ಬೆಳಗ್ಗೆ 6 ಗಂಟೆಗೆ ಸಂಪನ್ನಗೊಳ್ಳಲಿದ್ದು, ನಿರಂತರ 24 ತಾಸಿನ ಸಂಗೀತೋತ್ಸವದಲ್ಲಿ ಪಾಲ್ಗೊಂಡಿದ್ದ ಸಂಗೀತ ಕಲಾವಿದರು ತಮ್ಮ ಗಾಯನ, ವಾದನ ಪ್ರಸ್ತುಪಡಿಸಿದರು. ಆರಂಭದಲ್ಲಿ ಮಂಜುನಾಥ ಭಜಂತ್ರಿ ಅವರ ಶಹನಾಯಿ, ಸಿದ್ದಾಂತ್ ಗಾಯನ ಪ್ರಸ್ತುತಪಡಿಸಿದರು.
ಇದಾದ ಬಳಿಕ ಪದ್ಮಶ್ರೀ ಪಂ.ಎಂ.ವೆಂಕಟೇಶಕುಮಾರ ಗಾಯನ ಹಾಗೂ ಉಸ್ತಾದ ಶಫೀಕ್ ಖಾನ ಸಿತಾರ ವಾದನ ಗಮನ ಸೆಳೆದರೆ ಡಾ.ಅವಿನಾಶಕುಮಾರ, ಐಶ್ವರ್ಯಾ ದೇಸಾಯಿ ಗಾಯನ, ಡಾ.ಜಯದೇವಿ ಜಂಗಮಶೆಟ್ಟಿ ಗಾಯನ, ಸದಾಶಿವ ಐಹೊಳೆ ಗಾಯನ ಹಾಗೂ ಪಂ.ರವಿಕಿರಣ ನಾಕೋಡ ತಬಲಾ ಸೋಲೋ ಸಂಜೆವರೆಗೂ ಜರುಗಿತು. ಪ್ರತಿಯೊಬ್ಬ ಕಲಾವಿದರಿಂದ ಕನಿಷ್ಠ ಒಂದರಿಂದ ಒಂದೂವರೆ ತಾಸಿನವರೆಗೆ ಸಂಗೀತ ಕಚೇರಿ ನಡೆದವು.
ಅಹೋರಾತ್ರಿ
ಇದಾದ ಬಳಿಕ ರಾತ್ರಿಯಿಡೀ ಮುಂಬಯಿಯ ಪಂ.ರಾಕೇಶ್ ಚೌರಾಸಿಯಾ ಅವರ ಕೊಳಲು ವಾದನ, ಪದ್ಮಶ್ರೀ ಪಂ.ವಿಜಯ ಘಾಟೆಯವರ ತಾಲದಿಂಡಿ ವಿಶೇಷ ಕಾರ್ಯಕ್ರಮ, ಮೈಸೂರು ಬ್ರದರ್‍ಸ್ ವಿದ್ವಾನ್ ನಾಗರಾಜ, ವಿದ್ವಾನ್ ಡಾ.ಮಂಜುನಾಥ ಅವರ ಕರ್ನಾಟಕಿ ಶೈಲಿಯ ದ್ವಂದ್ವ ಪಿಟಿಲು ವಾದನ, ಬೆಂಗಳೂರಿನ ಪಂ.ವಿನಾಯಕ ತೊರವಿ, ಧಾರವಾಡದ ಪಂ.ಸೋಮನಾಥ ಮರಡೂರ, ಉಸ್ತಾದ್ ಫಯಾಜಖಾನ್, ಡಾ.ಮೃತ್ಯುಂಜಯ ಅಗಡಿ, ಸದಾಶಿವ ಐಹೊಳೆ, ಬೆಂಗಳೂರಿನ ಸಿದ್ಧಾರ್ಥ ಬೆಳ್ಮಣ್ಣು, ದೆಹಲಿಯ ಡಾ.ಅವಿನಾಶಕುಮಾರ, ಹುಬ್ಬಳ್ಳಿ ಕೃಷ್ಣೇಂದ್ರ ವಾಡೇಕರ ಅವರ ಗಾಯನ ಜರುಗಿತು. ಪ್ರತಿಯೊಬ್ಬ ಕಲಾವಿದರಿಂದ ಕನಿಷ್ಠ ಒಂದರಿಂದ ಒಂದೂವರೆ ತಾಸಿನವರೆಗೆ ಸಂಗೀತ ಕಚೇರಿ ನಡೆದವು. ಶನಿವಾರ ಬೆಳಿಗ್ಗೆಯಿಂದ ಸಂಜೆವರೆಗೂ ಅಲ್ಲದೇ ಇಡೀ ರಾತ್ರಿಯ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರು ಪಾಲ್ಗೊಂಡಿರುವುದು ವಿಶೇಷವಾಗಿದೆ.
ಇನ್ನು ಈ ಸಂಗೀತೋತ್ಸವದಲ್ಲಿ ವಾದ್ಯ ಸಹಕಾರದಲ್ಲಿ ಪಂ.ರಘುನಾಥ ನಾಕೋಡ, ಬೆಂಗಳೂರಿನ ಪಂ.ರವೀಂದ್ರ ಯಾವಗಲ್, ಪಂ.ರಾಜೇಂದ್ರ ನಾಕೋಡ, ಬೆಳಗಾವಿಯ ಡಾ.ಸುಧಾಂಶು ಕುಲಕರ್ಣಿ, ಉಸ್ತಾದ ನಿಸಾರ ಅಹಮದ್, ಗುರುಪ್ರಸಾದ ಹೆಗಡೆ, ಡಾ.ಉದಯ ಕುಲಕರ್ಣಿ, ಸತೀಶ ಕೊಳ್ಳಿ, ಸತೀಶ ಭಟ್ಟ ಹೆಗ್ಗಾರ, ಡಾ.ಶ್ರೀಹರಿ ದಿಗ್ಗಾಂವಿ, ಬಸವರಾಜ ಹಿರೇಮಠ, ಪ್ರಸಾದ ಮಡಿವಾಳರ ಸಾಥ್ ಸಂಗತ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಗೀತ ಗ್ರಾಮದ ಕಾರ್ಯದರ್ಶಿ ಕುಮಾರ ಮರಡೂರ, ಡಾ.ಎಸ್.ಪಿ.ಬಳಿಗಾರ, ಸಮೀರ ಜೋಶಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದಾರೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.