Ranji;ಇಂದು ಮುಂಬಯಿ-ವಿದರ್ಭ ನಡುವೆ ಫೈನಲ್ ಫೈಟ್
Team Udayavani, Mar 10, 2024, 6:30 AM IST
ಮುಂಬಯಿ: ದಾಖಲೆಯ 41 ಬಾರಿ ರಣಜಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿರುವ ಮುಂಬಯಿ ಮತ್ತು ಎರಡು ಬಾರಿ ಪ್ರಶಸ್ತಿ ಗೆದ್ದಿರುವ ವಿದರ್ಭ ಮಧ್ಯೆ ರವಿವಾರದಿಂದ ರಣಜಿ ಟ್ರೋಫಿ ಫೈನಲ್ ಸೆಣಸಾಟ ಆರಂಭವಾಗಲಿದೆ. ಈ ಹೋರಾಟ ಇಲ್ಲಿನ ವಾಂಖೆಡೆ ಕ್ರೀಡಾಂಣದಲ್ಲಿ ನಡೆಯಲಿದೆ.
ಅಂಜಿಕ್ಯ ರಹಾನೆ ನಾಯಕತ್ವದ ಮುಂಬಯಿ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಬರೋಡ ವಿರುದ್ಧ ಡ್ರಾ ಸಾಧಿಸಿತ್ತು. ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಮುಂಬಯಿ ಅಲ್ಲಿ ತಮಿಳುನಾಡು ವಿರುದ್ಧ ಇನ್ನಿಂಗ್ಸ್ ಮತ್ತು 70 ರನ್ ಗೆಲುವಿನೊಂದಿಗೆ 48ನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿತ್ತು.
ಇದೇ ವೇಳೆ ಅಕ್ಷಯ್ ವಾಡೆಕರ್ ನೇತೃತ್ವದ ವಿದರ್ಭ, ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ 127 ರನ್ ಜಯ ಗಳಿಸಿತ್ತು. ಆ ಬಳಿಕ ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ 62 ರನ್ ಜಯಭೇರಿ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತ್ತು.
53 ವರ್ಷಗಳ ಬಳಿಕ ಮೊದಲ ಮುಖಾಮುಖಿ
ಈ ಬಾರಿಯ ರಣಜಿ ಟ್ರೋಫಿ ಫೈನಲ್ ಪಂದ್ಯ ಬಲು ವಿಶೇಷವೆನಿಸಿದೆ. ಏಕೆಂದರೆ, 90 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ 53 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ರಾಜ್ಯದ ಎರಡು ತಂಡಗಳು ರಣಜಿ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ರಣಜಿ ಫೈನಲ್‌ನಲ್ಲಿ ಒಂದೇ ರಾಜ್ಯದ ಎರಡು ತಂಡಗಳು ಸೆಣಸಾಡುತ್ತಿರುವುದು ಇದು ಎರಡನೇ ಪ್ರಕರಣವಾಗಿದ್ದು, ಇದಕ್ಕೂ ಮುನ್ನ 1971ರಲ್ಲಿ ಮುಂಬಯಿಯ ಬ್ರಬೋರ್ನ್ ಮೈದಾನದಲ್ಲಿ ನಡೆದಿದ್ದ ರಣಜಿ ಫೈನಲ್‌ನಲ್ಲಿ ಮುಂಬಯಿ ಮತ್ತು ಮಹಾರಾಷ್ಟ್ರ ಕ್ರಿಕೆಟ್ ತಂಡಗಳು ಸ್ಫರ್ಧಿಸಿದ್ದವು. ಇದರಲ್ಲಿ ಮುಂಬಯಿ ಗೆದ್ದಿತ್ತು.
ರಣಜಿ ಫೈನಲ್‌ನಲ್ಲಿ ಮುಂಬಯಿ ಮತ್ತು ವಿದರ್ಭ ಒಟ್ಟು 2 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 2013-14ರ ಋತುವಿನಲ್ಲಿ ಮುಂಬಯಿ 338 ರನ್‌ಗಳಿಂದ ಗೆದ್ದಿತ್ತು. ಇನ್ನು, 2018-19ರಲ್ಲಿ ವಿದರ್ಭ ಇನ್ನಿಂಗ್ಸ್ ಮತ್ತು 145 ರನ್ ಜಯ ಗಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.