Karnataka ಗೋಬಿ ಮಂಚೂರಿ ನಿಷೇಧ: ನಾಳೆ ಘೋಷಣೆ?
Team Udayavani, Mar 10, 2024, 7:20 AM IST
ಪರೀಕ್ಷೆ ವೇಳೆ ಅಪಾಯಕಾರಿ ರಾಸಾ ಯನಿಕಗಳು ಪತ್ತೆ; ಪ್ರಯೋಗಾಲಯದ ವರದಿ ಬೆನ್ನಲ್ಲೇ ನಿಷೇಧಕ್ಕೆ ಚಿಂತನೆ
ಬೆಂಗಳೂರು: ಜನರ ನೆಚ್ಚಿನ ತಿನಿಸುಗಳಲ್ಲಿ ಒಂದಾದ ಗೋಬಿ ಮಂಚೂರಿ ರಾಜ್ಯದಲ್ಲಿ ಶೀಘ್ರದಲ್ಲೇ ನಿಷೇಧವಾಗುವ ಸಾಧ್ಯತೆಯಿದೆ.
ಇತ್ತೀಚೆಗೆ ಪ್ರಯೋ ಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ ನೂರಕ್ಕೂ ಅಧಿಕ ಬಗೆಯ ಗೋಬಿ ಮಂಚೂರಿಗಳಲ್ಲಿ ಅಸುರಕ್ಷಿತ ಹಾಗೂ ಅಪಾಯಕಾರಿ ರಾಸಾಯನಿಕ ಸನ್ಸೆಟ್ ಎಲ್ಲೋ ಮತ್ತು ಥರ್ಟಜೈನ್ ಪತ್ತೆಯಾಗಿದೆ.
ಹೀಗಾಗಿ ರಾಜ್ಯ ಸರಕಾರವು ಅಸುರಕ್ಷಿತ ಗೋಬಿ ಮಂಚೂರಿಗಳನ್ನು ನಿಷೇಧಿಸಲು ನಿರ್ಧರಿ
ಸಿದೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ರಾಜ್ಯದಲ್ಲಿ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ)ಯನ್ನೂ ನಿಷೇಧಿಸಲಾಗಿತ್ತು.ಇದರ ಬೆನ್ನಲ್ಲೇ ಆಹಾರ ಮತ್ತು ಸುರಕ್ಷತೆ ಇಲಾಖೆಯು ಸಲ್ಲಿಸಿರುವ ವರದಿ ಆಧರಿಸಿ ಮಹತ್ವದ ನಿರ್ಧಾರ ಕೈಗೊಳ್ಳಲು ಸರಕಾರ ಮುಂದಾಗಿದೆ. ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪತ್ರಿಕಾಗೋಷ್ಠಿ ನಡೆಸಿ ಗೋಬಿ ಮಂಚೂರಿ ನಿಷೇಧಿಸುವ ಕುರಿತು ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಕೃತಕ ಬಣ್ಣ ಬೆರೆಸಿದ ಗೋಬಿಗೆ ಅವಕಾಶವಿಲ್ಲ?
ಆರೋಗ್ಯ ಇಲಾಖೆಯು ಎಲ್ಲ ಜಿಲ್ಲೆಗಳಿಂದ ಮಾದರಿ ಸಂಗ್ರಹಿಸಿ ಟೆಸ್ಟ್ಗೆ ಕಳುಹಿಸಲು ಸೂಚನೆ ನೀಡಿತ್ತು. ನೂರಕ್ಕೂ ಹೆಚ್ಚಿನ ಮಾದರಿಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಹೀಗಾಗಿ ಈ ಎರಡು ರಾಸಾಯನಿಕ ಅಂಶಗಳನ್ನು ಗೋಬಿ ಮಂಚೂರಿಗಳಲ್ಲಿ ಬಳಸದಂತೆ ಸೂಚಿಸುವ ಸಾಧ್ಯತೆ ಇದೆ. ಕೃತಕ ಬಣ್ಣ ಬೆರೆಸುವುದಕ್ಕೂ ಅವಕಾಶವಿರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.