NCB ಕಾರ್ಯಾಚರಣೆ; 2000 ಕೋ.ರೂ.ಮೌಲ್ಯದ ಡ್ರಗ್ಸ್ ಕಳ್ಳ ಸಾಗಣೆ: ನಿರ್ಮಾಪಕ ಸೆರೆ
ನ್ಯೂಜಿಲೆಂಡ್ ಆಸ್ಟ್ರೇಲಿಯಾ ವರೆಗೆ ಹಬ್ಬಿತ್ತು ಡಿಎಂಕೆ ಉಚ್ಚಾಟಿತ ಮುಖಂಡ ಸಾದಿಕ್ ಜಾಲ
Team Udayavani, Mar 10, 2024, 6:12 AM IST
ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ 2000 ಕೋಟಿ ರೂ.ಮೌಲ್ಯದ ಮಾದಕವಸ್ತು ಕಳ್ಳಸಾಗಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಉಚ್ಚಾಟಿತ ಮುಖಂಡ ಹಾಗೂ ಸಿನಿಮಾ ನಿರ್ಮಾಪಕ ಜಾಫರ್ ಸಾದಿಕ್ನನ್ನು ಬಂಧಿಸಿರುವುದಾಗಿ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಭಾರತ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ಗಳ ವರೆಗೆ ಹಬ್ಬಿರುವ ಈ ಮಾದಕವಸ್ತು ಜಾಲಕ್ಕೆ ಸಾದಿಕ್ ರೂವಾರಿ ಹಾಗೂ ಕಿಂಗ್ಪಿನ್ ಆಗಿದ್ದಾ ನೆಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಆತನನ್ನು ದಿಲ್ಲಿಯಲ್ಲಿ ಬಂಧಿಸಿರುವುದಾಗಿ ಎನ್ಸಿಬಿ ಉಪ ಮಹಾನಿರ್ದೇಶಕ ಜ್ಞಾನೇಶ್ವರ್ ಸಿಂಗ್ ತಿಳಿಸಿದ್ದಾರೆ.
ಡಿಎಂಕೆಯ ಎನ್ಆರ್ಐ ವಿಭಾಗದ ಉಪ ಸಂಘಟಕ ಹುದ್ದೆಯಲ್ಲಿದ್ದ ಸಾದಿಕ್ ತಮಿಳು ಸಿನಿಮಾಗಳ ನಿರ್ಮಾಪಕನಾಗಿದ್ದಾನೆ. ಡ್ರಗ್ಸ್ ಕಳ್ಳ ಸಾಗಣೆ ಪ್ರಕರಣದಲ್ಲಿ ಆತನ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಈ ಬಗ್ಗೆ ಬಿಜೆಪಿ, ಡಿಎಂಕೆ ನಡುವೆ ವಾಗ್ವಾದವೂ ನಡೆದಿತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.