Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!


Team Udayavani, Mar 10, 2024, 2:31 PM IST

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

ಮೊನ್ನೆ ರಾತ್ರಿ ಏನೋ ಕೆಲಸ ಮಾಡುತ್ತಿದ್ದವನು, ಸುಮ್ಮನೇ ಒಮ್ಮೆ ವಾಟ್ಸಾಪ್‌ ನೋಡಿದರೆ-“ಫೇಸ್‌ಬುಕ್‌ ಸರ್ವರ್‌ ಡೌನ್‌’ ಅಂತ ಕೆಲವರು, “ಫೇಸ್‌ಬುಕ್‌ ಹ್ಯಾಕ್‌ ಆಗಿದೆ’ ಅಂತ ಹಲವರು ಗ್ರೂಪ್‌ಗಳಲ್ಲಿ ಮೆಸೇಜ್‌ ಹಾಕಿದ್ದುದನ್ನು ನೋಡಿದೆ. ಅವರ ಮೆಸೇಜುಗಳಲ್ಲಿ ಒಂದು ನಮೂನೆಯ ಆತಂಕ, ದುಗುಡ ಇದ್ದುದನ್ನು ಗ್ರಹಿಸಬಹುದಿತ್ತು.

ಇವರೆಲ್ಲಾ ಹೀಗಾಡುವುದನ್ನು ಕಂಡು ಈ ಫೇಸ್‌ಬುಕ್‌ಗೆ ಏನಾಯಿತು ಅಂತ ತೆರೆಯಲು ಹೊರಟರೆ “ಯುವರ್‌ ಸೆಷನ್‌ ಪೀರಿಯಡ್‌ ಕ್ಲೋಸ್ಡ್’ ಎಂಬ ಸೂಚನೆಯೊಂದು ಕಾಣಿಸಿಕೊಂಡು “ಕ್ಲೈಮ್‌ ಯುವರ್‌ ಅಕೌಂಟ್‌’ ಎಂಬ ಆಯ್ಕೆಯೊಂದು ಗೋಚರಿಸಿ, ನಿಮ್ಮ ವಾಟ್ಸಾಪ್‌ ನಂಬರಿಗೆ ಒಟಿಪಿ ಕಳುಹಿಸಲಾಗಿದೆ. ಅದನ್ನಿಲ್ಲಿ ನಮೂದಿಸಿ ಅಂತ ತೋರಿಸಲಾರಂಭಿಸಿತು ವಾಟ್ಸಾಪ್‌ ನೋಡಿದರೆ ಯಾವ ಒಟಿಪಿಯೂ ಬಂದಿರಲಿಲ್ಲ. ಒಂದೆರಡು ಸರ್ತಿ ಪ್ರಯತ್ನಿಸಿದೆನಾದರೂ, ಒಟಿಪಿ ಬಾರದೇ ಹೋದಾಗ “ಬರದಿದ್ರೆ ಸಾಯ್ಲಿ ಅತ್ಲಾಗಿ’ ಅಂದುಕೊಂಡು ಕೆಲಸದ ಕಡೆಗೆ ಗಮನ ನೀಡಿದೆ.

ವಾಟ್ಸಾಪ್‌ ಗ್ರೂಪುಗಳಲ್ಲಿ “ಫೇಸ್‌ಬುಕ್‌ ಹೊಗೆ ಹಾಕಿಸಿಕೊಂಡಿದೆ’ ಎನ್ನುವ ಮೆಸೇಜುಗಳನ್ನು ನೋಡಿ ಇವರ್ಯಾಕೆ ಹೀಗೆ ಆಡುತ್ತಿದ್ದಾರೆ ಎನ್ನುವುದು ಅರ್ಥವಾಗದೇ. ಕ್ರೇಝಿ ಫೆಲೋಸ್‌ ಅಂತ ಬೈಕೊಂಡು ನಿರ್ಲಕ್ಷಿಸಿದೆ. ಆದರೆ “ಅರ್ಧಗಂಟೆಯ ಫೇಸುºಕ್‌ ಬಿಕ್ಕಟ್ಟು’ ಜನರನ್ನು ಎಷ್ಟೊಂದು ವಿಷಮ ಸ್ಥಿತಿಗೆ ತಳ್ಳಿಬಿಟ್ಟಿದೆ ಎಂಬುದು ಅರಿವಾಗಿದ್ದು, ಫೇಸುºಕ್‌ ಪುನರ್‌ ಸ್ಥಾಪನೆಯಾಗಿ ಹಲವರು ತಮ್ಮ ತಮ್ಮ ಗೋಡೆಯ ಮೇಲೆ ತರಹೇವಾರಿಯಾಗಿ ಬರೆದುಕೊಂಡು ತಮಗಾಗಿದ್ದ ಆತಂಕ, ಅಸಮಾಧಾನ, ನಿರಾಶೆಗಳನ್ನು ಹೊರಹಾಕಲಾರಂಭಿಸಿದಾಗಲೇ..! ಜನರ ಭಿನ್ನ ಭಿನ್ನ ಪೋಸ್ಟ್ ಗಳನ್ನು, ಅವಕ್ಕೆ ಬರುತ್ತಿದ್ದ ಪ್ರತಿಕ್ರಿಯೆಗಳನ್ನು ಓದುತ್ತಾ ನಕ್ಕು ಮಲಗಿದೆ. ಆದರೆ ಈ ವಿಚಾರವು ಜನರ ಪಾಲಿಗೆ ಅಷ್ಟು ಸರಳವಾಗಿಲ್ಲ ಎನ್ನುವುದು ಹೊರಬರಲಾರಂಭಿಸಿದ್ದು ಮರುದಿನವೇ.

ಇದ್ದಕ್ಕಿದ್ದಂತೆ ಫೇಸುºಕ್‌ ಖಾತೆ ಸ್ವಯಂ ಲಾಗ್‌ಔಟ್‌ ಆಗಿದ್ದು, ಮತ್ತೆ ತೆರೆಯಲು ಪಾಸ್‌ವರ್ಡ್‌ ನಮೂದಿಸುವಂತೆ ಕೇಳಿದ್ದು, ಎಷ್ಟೇ ಪ್ರಯತ್ನಿಸಿದರೂ ಸಹ ಖಾತೆ ತೆರೆಯದೇ ಹೋಗಿದ್ದರಿಂದ ತಮ್ಮ ಖಾತೆಯನ್ನು ಯಾರೋ ಹ್ಯಾಕ್‌ ಮಾಡಿದ್ದಾರೆಂದು ಆತಂಕವಾಗಿದ್ದು, ಕೆಲ ಹೊತ್ತಿನ ಬಳಿಕ ಖಾತೆಯು ಸರಿಹೋಗಿ ತನ್ನಷ್ಟಕ್ಕೆ ತಾನೇ ತೆರೆದುಕೊಂಡಿದ್ದನ್ನೆಲ್ಲಾ ಕೆಲವರು ರಂಗುರಂಗಾಗಿ ಬರೆದುಕೊಂಡು ಆ ಕ್ಷಣದಲ್ಲಿ ತಮಗಾದ ಆತಂಕ, ಅಸಹಾಯಕತೆ, ಫೇಸ್‌ಬುಕ್‌ ಸರಿಹೋದ ಕಾರಣಕ್ಕೆ ತಮಗಾದ ಸಂತೋಷ ಎಲ್ಲವನ್ನೂ ತೋರ್ಪಡಿಸಿಕೊಂಡಿ­ದ್ದರು. ಪುಟ್ಟ ಅಪ್ಲಿಕೇಷನ್ನೊಂದು ಇಡೀ ಜನಸಮೂಹ­ವನ್ನು ಯಾವ ಪರಿ ಆವರಿಸಿಕೊಂಡು ಬಿಟ್ಟಿದೆ ಎನ್ನುವುದಕ್ಕೆ ಅರ್ಧಗಂಟೆಯ ಈ ಪ್ರಹಸನ, ಜನರ ಪ್ರತಿಕ್ರಿಯೆಗಳೇ ಸಾಕ್ಷಿ!

ಅಗತ್ಯವಲ್ಲ, ವ್ಯಸನ!:

ಆಧುನಿಕ ತಂತ್ರಜ್ಞಾನವು ತನ್ನ ಪ್ರಯಾಣ ಪ್ರಾರಂಭಿಸಿ ಎಷ್ಟೋ ದಶಕಗಳಾದರೂ ಸಹ ನಾಗರಿಕ ಪ್ರಪಂಚವನ್ನು ಆವರಿಸಿಕೊಳ್ಳುವಲ್ಲಿ ದಕ್ಕದ ವೇಗವನ್ನು ಸ್ಮಾರ್ಟ್‌ ಫೋನು ಹಾಗೂ ಸಾಮಾಜಿಕ ಜಾಲತಾಣಗಳು ಈ ಜಗತ್ತಿಗೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ನೂರ್ಪಟ್ಟು ಪಡೆದುಕೊಂಡಿವೆ. ಯುವಜನರಂತೂ ಜಾಲತಾಣದ ಲೋಕದೊಳಗೆ ಅಕ್ಷರಶಃ ಅಂಧರಾಗಿ ತಿರುಗುತ್ತಿ¨ªಾರೆ. ಫೋನು ಹಾಗೂ ಜಾಲತಾಣವು ಕೇವಲ ಅಗತ್ಯವಾಗದೇ, ವ್ಯಸನವಾಗಿ ಮಾರ್ಪಟ್ಟಿದೆ. ಇದು ನಮ್ಮ ಮುಂದಿರುವ ಅತಿದೊಡ್ಡ ಅಪಾಯ. ಇದರ ಸೈಡ್‌ ಎಫೆಕr…ಗಳು ಈಗಾಗಲೇ ಜೋರಾಗಿಯೇ ಕಾಣಿಸಿಕೊಂಡಿವೆ. ರೀಲ್ಸ… ಮಾಡಲು ಬಿಡದೇ ಹೋದುದಕ್ಕೆ, ಹೆಚ್ಚು ಲೈಕÕ… ಬರದೇ ಹೋಗಿದ್ದಕ್ಕೆ ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ನಾವೀಗ ನಾವಾಗಿ ಉಳಿದಿಲ್ಲ ಎನ್ನುವುದಕ್ಕೆ ತಾಜಾ ಸಾಕ್ಷಿ.

ಬದುಕು ಬದಲಾಯಿತು!

ನನಗೆ ನೆನಪಿರುವಂತೆ ನಮ್ಮ ಮೊದಲ ಸಂವಹನ ತಂತ್ರಜ್ಞಾನವೆಂದರೆ ಲ್ಯಾಂಡ್‌ಲೈನ್‌ ಫೋನುಗಳು. ಅದಕ್ಕೂ ಮುಂಚೆ ಇದ್ದುದು ಅಂಚೆ ಪತ್ರಗಳು. ದೂರದೂರಿನಲ್ಲಿರುವ ಗಂಡನದ್ದೋ, ಮಕ್ಕಳದ್ದೋ, ಸಂಬಂಧಿಕರದ್ದೋ ಕ್ಷೇಮ ಸಮಾಚಾರವನ್ನು ಪತ್ರಗಳ ಮೂಲಕ ತಿಳಿಯಲು ಅಥವಾ ತಿಳಿಸಲು ಕನಿಷ್ಠ 15 ದಿನ ಬೇಕಾಗುತ್ತಿತ್ತು. ಅಂಥಾ ಕಾಲದಲ್ಲಿಯೂ ಮನುಷ್ಯ ಸ್ವಸ್ಥವಾಗಿಯೇ ಇದ್ದ. ತಮ್ಮವರನ್ನು ನೆನೆದು ವೃಥಾ ಆತಂಕಕ್ಕೀಡಾಗುತ್ತಿರಲಿಲ್ಲ. ಮುಂದೆ ಲ್ಯಾಂಡ್‌ಲೈನ್‌ ಫೋನುಗಳು ಬಂದಮೇಲೂ ಅಂಥಾ ವ್ಯತ್ಯಾಸವೇನೂ ಆಗಲಿಲ್ಲ. ಆದರೆ, ಯಾವಾಗ ಸ್ಮಾರ್ಟ್‌ ಫೋನ್‌ ಎಲ್ಲರ ಕೈಗೂ ಬಂತೋ ಆಮೇಲೆ ನಾವು ವಿನಾಕರಣ ಡೆಲಿಕೇಟ್‌ ಆಗುತ್ತಾ ಹೋದೆವು. ನಮ್ಮವರು ಸದಾ ಕಾಲ್‌ ಬೆರಳಂಚಿನಲ್ಲೇ ಇರಬೇಕೆಂಬ ನಿರೀಕ್ಷೆಗೆ ಬಿದ್ದೆವು. ಅತ್ತಕಡೆ­ ಯಿಂದ ಕರೆ ಸ್ವೀಕರಿಸದಿದ್ದರೂ ಆತಂಕ, ಮೊಬೈಲ್‌ ಸ್ವಿಚ್‌ ಆಫ್ ಅಂದರೂ ಆತಂಕ, ಸಂಭಾಷಣೆ ನೆಟ್ಟಗೆ ಕೇಳದಿದ್ದರೂ ಆತಂಕ. ಇವುಗಳೊಟ್ಟಿಗೆ ಕಾಂಬೋ ಆಫ‌ರಿನಂತೆ, ಕ್ಷಣಾರ್ಧದಲ್ಲಿ ತಲುಪಬಲ್ಲ ಸಾಮಾಜಿಕ ಜಾಲತಾಣಗಳೂ ಸೇರಿಕೊಂಡವು. ಇವೆಲ್ಲದರ ಜೊತೆಗೆ ಫೇಸ್‌ಬುಕ್‌ ಎಂಬ ವೇದಿಕೆಯು ನಮ್ಮನ್ನು ತೆರೆದುಕೊಳ್ಳಲು, ಜಗತ್ತಿನೊಂದಿಗೆ ನಿರಂತರ ಸಂಪರ್ಕದಿಂದಿರುವ ಅವಕಾಶ ಕಲ್ಪಿಸಿತು. ಅಷ್ಟೇ ಅಲ್ಲದೆ “ಗೋಡೆ’ ಎಂಬ ಪರಿಕಲ್ಪನೆಯನ್ನೂ ಪರಿಚಯಿಸಿತು. ಮನಸ್ಸಿಗೆ ಬಂದಿದ್ದನ್ನೆಲ್ಲಾ ಗೀಚಿಕೊಳ್ಳಲು ಪ್ರತಿಯೊಬ್ಬ­ರಿಗೂ ಒಂದೊಂದು ಗೋಡೆಯನ್ನೂ ನೀಡಿತು. ನಿಜಕ್ಕೂ ಅದು ಕೇವಲ ಗೋಡೆಯಷ್ಟೇ ಎಂಬುದರ ಅರಿವಿರದ ನಾವು ಎರಡು ಭ್ರಮೆಗಳನ್ನು ಕಲ್ಪಿಸಿಕೊಂಡೆವು: “ನಮ್ಮ ಗೋಡೆಯ ಮೇಲೆ ಬರೆದುಕೊಂಡಿದ್ದನ್ನು ಜಗತ್ತು ನೋಡುತ್ತಿದೆ ಹಾಗೂ ನಮ್ಮ ಅಭಿಪ್ರಾಯಗಳನ್ನು ನೋಡಿಯೂ ಜಗತ್ತು ಪ್ರತಿಕ್ರಿಯಿಸುತ್ತಿಲ್ಲ!’ ಇವೆರಡೂ ಭ್ರಮೆಗಳೂ ನಮ್ಮನ್ನು ಹೇಗೆ ಹೈರಾಣ ಮಾಡುತ್ತಿವೆ­ಯೆಂದರೆ, ನಾನು ಬರೆದಿದ್ದನ್ನು ಯಾರೂ ಓದುತ್ತಿಲ್ಲ ಎಂಬ ಕಾರಣಕ್ಕೇ ಕೆಲವರು ಡಿಪ್ರಷನ್ನಿಗೆ ಹೋಗುತ್ತಿರುವ ಸಂಗತಿಗಳು ನಡೆಯುತ್ತಿವೆ. ಇವೆಲ್ಲವೂ, ಜಾಲತಾಣವು ನಮ್ಮನ್ನು ಅನಾಮತ್ತಾಗಿ ಹಿಡಿದೆತ್ತಿ ಬುಟ್ಟಿಯೊಳಗೆ ಕೆಡವಿಕೊಂಡು ಆಡಿಸುತ್ತಿರುವುದರ ದ್ಯೋತಕ.

ಮೂರ್ಖರಾಗುವುದು ಬೇಡ:

ಮೊನ್ನೆಯ ಫೇಸುºಕ್‌ ಬಿಕ್ಕಟ್ಟಿನ ಪ್ರಸಂಗವೂ ಇದರ ಒಂದು ಭಾಗವೇ…  ಈ ತಾಂತ್ರಿಕ ಅಪ್ಲಿಕೇಷನ್ನುಗಳನ್ನು ವರ್ಚುವಲ್‌ ಮೀಡಿಯಾಗಳೆಂದು ಕರೆಯುತ್ತಾರೆ. ಇವು ಯಾವತ್ತಿಗೂ ಫಿಸಿಕಲ್‌ ಅಸೆಟ್‌ ಅಲ್ಲ, ಇವನ್ನು ನಮ್ಮ ಬದುಕಿನ ಅಸೆಟ್‌ ಅಂದುಕೊಳ್ಳುವುದು ಮೂರ್ಖತನ. ಈ ಜಾಲತಾಣ­ಗಳಿಗೆ ವ್ಯಯಿಸುವ ಸಮಯವನ್ನು ನಮ್ಮ ಕೆಲಸ ಕಾರ್ಯಗಳ ಮೇಲೆ ವ್ಯಯಿಸಿದರೆ ದುಡಿಮೆ, ಹೆಸರು, ನೆಮ್ಮದಿ ಎಲ್ಲವನ್ನೂ ಗಳಿಸಿಕೊಳ್ಳಬಹುದು. ಇವೆಲ್ಲವೂ ಫೇಸ್‌ಬುಕ್‌ನೊಳಗೆ ಮಾತ್ರವೇ ಇವೆ ಅಂದುಕೊಂಡರೆ ನಮಗಿಂತ ಮೂರ್ಖರು ಯಾರೂ ಇಲ್ಲ. ಫೇಸ್‌ಬುಕ್‌ ಎಂಬುದೊಂದು ಚಾವಡಿಯಷ್ಟೇ ಹೊರತು, ಅದೇ ಮನೆಯಲ್ಲ.

ಏಕಾಗ್ರತೆಯೇ ಇಲ್ಲ… :

ಜಾಲತಾಣಗಳ ವ್ಯಸನವು ನಮ್ಮನ್ನು ಆವರಿಸಿಕೊಂಡಿರುವುದು ಮಾತ್ರವಲ್ಲ, ನಮ್ಮ ಏಕಾಗ್ರತೆಯನ್ನೂ ಕಿತ್ತುಕೊಂಡಿದೆ. ಬೇಕಿದ್ದರೆ ಪರೀಕ್ಷಿಸಿ ನೋಡಿ, ಇತ್ತೀಚೆಗೆ ಹಲವರಿಗೆ ಯಾವುದೇ ಚಟುವಟಿಕೆಗಳಲ್ಲಿ ದೀರ್ಘ‌ ಸಮಯ ತೊಡಗಿಸಿ­ಕೊಳ್ಳಲಾಗುತ್ತಿಲ್ಲ. ಪುಸ್ತಕ ಓದಲು ಹೊರಟರೆ, ಸರಿಯಾಗಿ ಹತ್ತು ಪುಟಗಳನ್ನು ಲಕ್ಷ್ಯವಿಟ್ಟು ಓದಲಾಗು­ತ್ತಿಲ್ಲ. ಹತ್ತು ಪುಟಗಳನ್ನು ಮುಗಿಸುವಷ್ಟರಲ್ಲಿ ಹತ್ತು ಬಾರಿ ಫೋನ್‌ ತೆರೆದು ನೋಡಿರುತ್ತಾರೆ. ಆ ಹತ್ತು ನಿಮಿಷಗಳಲ್ಲಿ ಫೇಸ್‌ಬುಕ್‌, ಮೆಸೆಂಜರ್‌, ವಾಟ್ಸಾಪ್‌ ಎಲ್ಲವನ್ನೂ ರೊಟೀನಿನಂತೆ ಜಾಲಾಡುತ್ತಾರೆ. ಡ್ರೈವ್‌ ಮಾಡಲು ಕುಳಿತರೆ ಪೋನು ಎಡಗೈಲೇ ಇರುತ್ತದೆ. ಇದು ಏಕಾಗ್ರತೆಯ ಸಮಸ್ಯೆ. ಈ ವ್ಯಾಧಿ ಹುಟ್ಟಿದ್ದೂ  ಕೂಡಾ ಇದೇ ಫೇಸ್‌ಬುಕ್‌ನಿಂದ, ಮೆಸೇಜಿಂಗ್‌ ಆ್ಯಪ್‌ಗಳಿಂದ.

-ಕಾರ್ತಿಕಾದಿತ್ಯ ಬೆಳ್ಗೋಡು

ಟಾಪ್ ನ್ಯೂಸ್

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

7

Udupi ನಗರಸಭೆಗೆ ಸರಕಾರದಿಂದ 5 ಸದಸ್ಯರ ನಾಮ ನಿರ್ದೇಶನ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Court Verdict: ಕೊಲ್ಕತ್ತಾ ಅತ್ಯಾಚಾರ ಪ್ರಕರಣ: ಆರೋಪಿ ಸಂಜಯ್ ರಾಯ್ ದೋಷಿ, ಕೋರ್ಟ್ ತೀರ್ಪು

Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ

12-metro

Metro: ನಾಡಿದ್ದಿನಿಂದ ಮೆಟ್ರೋ ಪ್ರಯಾಣ ದರ ಏರಿಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

20

Ban: ಏರ್‌ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್‌ ಬಳಕೆ ನಿಷೇಧ: ಪಾಲಿಕೆ ಆದೇಶ

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

19-

EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್‌ 1 ಸ್ಥಾನ ಪಡೆದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.