“Udupi ಘಟಕದಿಂದ ಸತ್ಕಾರ್ಯಗಳಾಗಲಿ’: ಎಚ್‌.ಎಸ್‌. ಬಲ್ಲಾಳ್‌

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಉಡುಪಿ ಘಟಕ ಉದ್ಘಾಟನೆ

Team Udayavani, Mar 11, 2024, 1:08 AM IST

“Udupi ಘಟಕದಿಂದ ಸತ್ಕಾರ್ಯಗಳಾಗಲಿ’: ಎಚ್‌.ಎಸ್‌. ಬಲ್ಲಾಳ್‌”Udupi ಘಟಕದಿಂದ ಸತ್ಕಾರ್ಯಗಳಾಗಲಿ’: ಎಚ್‌.ಎಸ್‌. ಬಲ್ಲಾಳ್‌

ಉಡುಪಿ: ಕರಾವಳಿಯ ಗಂಡು ಕಲೆಯಾಗಿ ಇಲ್ಲಿನ ಮಣ್ಣಿನ ಕಣಕಣದಲ್ಲೂ ಬೆರೆತಿರುವ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ತನ್ನ ಬದುಕಿನೊಂದಿಗೆ ಇತರರಿಗೂ ಸಹಾಯ, ಸಹಕಾರ ಮಾಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಉಡುಪಿ ಘಟಕದಿಂದ ಸಾಕಷ್ಟು ಸತ್ಕಾರ್ಯಗಳು ನೆರವೇರಲಿ ಎಂದು ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಹಾರೈಸಿದರು.

ಅಂಬಾಗಿಲಿನ ಅಮೃತ್‌ ಗಾರ್ಡನ್‌ನಲ್ಲಿ ರವಿವಾರ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರ ಸ್ಟ್‌ ಮಂಗಳೂರು ಇದರ ಉಡುಪಿ ಘಟಕವನ್ನು ಅವರು ಉದ್ಘಾಟಿಸಿ ಮಾತನಾಡಿ, ಪಟ್ಲ ಸತೀಶ ಶೆಟ್ಟಿಯವರು ಯಕ್ಷಗಾನದಲ್ಲಿ ಭಾಗವತರಾಗಿ ಹೆಸರು ಗಳಿಸಿದ್ದಲ್ಲದೆ, ಟ್ರಸ್ಟ್‌ ಮೂಲಕ ಕಲಾವಿದರ ಶ್ರೇಯೋಭಿವೃದ್ಧಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಯಕ್ಷಗಾನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಚಿಂತಕ ಪಟ್ಲ ಸತೀಶ್‌ ಶೆಟ್ಟಿಯವರು. ಸಂಬಂಧ, ಮಾನವೀಯತೆ, ಅಸಮಾನತೆಯನ್ನು ಎದುರಿಸುತ್ತಿರುವ ಸಮಾಜವನ್ನು ಸರಿಪಡಿಸಲು ಯಕ್ಷಗಾನದಿಂದ ಸಾಧ್ಯವಿದೆ. ಅಂತರಂಗವನ್ನು ತೆರೆಸಬಲ್ಲ ಶಕ್ತಿಯುಳ್ಳ ಕಲೆಗೆ ಇನ್ನಷ್ಟು ಮಾನ್ಯತೆ ದೊರಕಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿಯವರು ಉಡುಪಿ ಘಟಕದ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿದರು. ಯಕ್ಷಗಾನ ಪ್ರಸಂಗಕರ್ತ ಪ್ರೊ| ಪವನ್‌ ಕಿರಣಕೆರೆ ಅವರು, “ಪಟ್ಲ’ ಎನ್ನುವುದು ಒಂದು ಬ್ಯಾಂಡ್‌ ಆಗಿ ಬೆಳೆದು ನಿಂತಿದೆ ಎಂದರು.

ಸಮ್ಮಾನ ಸ್ವೀಕರಿಸಿದ ಪ್ರೊ| ಹರಿಕೃಷ್ಣ ಭಟ್‌ ಮಾತನಾಡಿ, ಇಲ್ಲಿನ ಯುವಕರಿಗೆ ಜಪಾನ್‌ ಭಾಷೆ ಕಲಿಸುವುದರೊಂದಿಗೆ ಜಪಾನ್‌ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು.

ಗೌರವಾಧ್ಯಕ್ಷರಾದ ಪುರುಷೋತ್ತಮ ಪಿ. ಶೆಟ್ಟಿ, ಕೆ. ದಿವಾಕರ ಶೆಟ್ಟಿ ತೋಟದಮನೆ, ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಿ. ಕಿಶನ್‌ ಹೆಗ್ಡೆ, ತೆಂಕನಿಡಿಯೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ| ಸುರೇಶ್‌ ರೈ, ಟ್ರಸ್ಟ್‌ನ ಕೋಶಾಧಿಕಾರಿ ಸುದೇಶ್‌ ಕುಮಾರ್‌ ರೈ, ಪ್ರದೀಪ್‌ ಆಳ್ವ, ರವಿ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.

ಉಡುಪಿ ಘಟಕದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕಾರ್ಯದರ್ಶಿ ಡಾ| ಹರೀಶ್‌ ಜೋಷಿ ವಿಟ್ಲ ನಿರೂಪಿಸಿದರು. ಉಪಾಧ್ಯಕ್ಷ ಡಾ| ಸುನಿಲ್‌ ಮುಂಡ್ಕೂರು, ತಾರಾ ಆಚಾರ್ಯ ಪರಿಚಯಿಸಿದರು. ಮಹೇಂದ್ರ ಆಚಾರ್ಯ ಹೇರಂಜೆ ವಂದಿಸಿದರು.

ಉಡುಪಿ ಘಟಕದ ಉಪಾಧ್ಯಕ್ಷರಾದ ಆನಂದ ಮಡಿವಾಳ, ಹರಿಪ್ರಸಾದ್‌ ರೈ, ಸಚಿನ್‌ ಶೆಟ್ಟಿ, ಡಾ| ಸಾಯಿ ಗಣೇಶ್‌, ಸಂಚಾಲಕ ಸುಧಾಕರ ಆಚಾರ್ಯ, ಜತೆಕಾರ್ಯದರ್ಶಿ ರತನ್‌ರಾಜ್‌ ರೈ ಮಣಿಪಾಲ, ಕಾರ್ತಿಕ್‌ ಎಸ್‌. ರಾವ್‌, ಸತ್ರಾಜಿತ ಭಾರ್ಗವ್‌, ಹರ್ಷಿತ್‌ ಜೋಷಿ ಮಣಿಪಾಲ, ಚಿರಾಗ್‌ ಹೆಗ್ಡೆ ಬೈಲೂರು, ಭುವನ ಪ್ರಸಾದ್‌ ಹೆಗ್ಡೆ ಗೌರವ ಮಾರ್ಗದರ್ಶಕರು, ಸದಸ್ಯರು ಭಾಗವಹಿಸಿದ್ದರು. ಶ್ರೀ ಪಾವಂಜೆ ಮೇಳದವರಿಂದ “ಅಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನಗೊಂಡಿತು.

ಪಟ್ಲಾಭಿಮಾನಿ ಅಭಿವಂದನೆ
ನಿಟ್ಟೆ ವಿ.ವಿ.ಯ ಜಪಾನ್‌ ಭಾಷಾ ತಜ್ಞರಾದ ಯುಸುಕೋ ಸತೋ ಮತ್ತು ಪ್ರೊ| ಹರಿಕೃಷ್ಣ ಭಟ್‌ ದಂಪತಿಗೆ “ಪಟ್ಲಾಭಿಮಾನಿ ಅಭಿವಂದನೆ’ ಹಾಗೂ ಅಂತಾರಾಷ್ಟ್ರೀಯ ಯೋಗಪಟು ತನು ಶ್ರೀ ಪಿತ್ರೋಡಿಯವರಿಗೆ “ವಿಶೇಷ ಬಾಲ ಪುರಸ್ಕಾರ’ ನೀಡಿ ಸಮ್ಮಾನಿಸಲಾಯಿತು.

ಟಾಪ್ ನ್ಯೂಸ್

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

15

Malpe: ಡ್ರಗ್ಸ್‌ ಪಾರ್ಸೆಲ್‌ ಹೆಸರಲ್ಲಿ ಬೆದರಿಸಿ 20 ಲ.ರೂ. ವಂಚನೆ

15

Udupi: ಪಾರ್ಟ್‌ ಟೈಮ್ ಜಾಬ್‌ ಹೆಸರಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

Udupi: ಗೀತಾರ್ಥ ಚಿಂತನೆ-93: ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Udupi: ಗೀತಾರ್ಥ ಚಿಂತನೆ-93: ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Manipal: ಜಲ್ಲಿ ಅಸುರಕ್ಷಿತ ಸಾಗಾಟ: ಪ್ರಕರಣ ದಾಖಲು

Manipal: ಜಲ್ಲಿ ಅಸುರಕ್ಷಿತ ಸಾಗಾಟ: ಪ್ರಕರಣ ದಾಖಲು

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.