Bigg Boss Malayalam 6ನೇ ಸೀಸನ್‌ ಶುರು: ಇವರೇ ನೋಡಿ ಈ ಬಾರಿಯ ಸ್ಪರ್ಧಿಗಳು..


Team Udayavani, Mar 11, 2024, 1:43 PM IST

Bigg Boss Malayalam 6ನೇ ಸೀಸನ್‌ ಶುರು: ಇವರೇ ನೋಡಿ ಈ ಬಾರಿಯ ಸ್ಪರ್ಧಿಗಳು..

ಕೊಚ್ಚಿ: ಭಾರತದ ಬಹುತೇಕ ಭಾಷೆಗಳಲ್ಲಿರುವ ಜನಪ್ರಿಯ ಟಿವಿ ಶೋ ಬಿಗ್‌ ಬಾಸ್‌ ಬಗ್ಗೆ ಪ್ರತ್ಯೇಕವಾಗಿ ಪರಿಚಯ ಮಾಡಿಕೊಡಬೇಕಾಗಿಲ್ಲ. ನಾನಾ ಭಾಷೆಯಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮ ಪ್ರಸಾರವಾಗುತ್ತದೆ. ಆಯಾ ಭಾಗದ ಸಲೆಬ್ರಿಟಿಗಳು ಹಾಗೂ ಸೋಶಿಯಲ್‌ ಮೀಡಿಯಾ ತಾರೆಗಳು, ಇದರೊಂದಿಗೆ ಒಂದಷ್ಟು ವಿವಾದಗಳಿಂದ ಸುದ್ದಿಯಾಗುವವರು ಸ್ಪರ್ಧಿಗಳಾಗಿ ಬಿಗ್‌ ಬಾಸ್‌ ನಲ್ಲಿ ಕಾಣಿಸಿಕೊಳ್ಳುತ್ತಾರೆ.

ಮಲಯಾಳಂನಲ್ಲೂ ಬಿಗ್‌ ಬಾಸ್‌ ಕಾರ್ಯಕ್ರಮ ಜನಪ್ರಿಯವಾಗಿದೆ. ಇದರ 6ನೇ ಸೀಸನ್‌ ಭಾನುವಾರ(ಮಾ.10 ರಂದು) ಶುರುವಾಗಿದೆ. ʼಬಿಗ್ ಬಾಸ್ ಮಲಯಾಳಂ 6ʼ ಕಾರ್ಯಕ್ರಮವನ್ನು ಮೋಹನ್‌ ಲಾಲ್‌ ಅವರು ಹಿಂದಿನ ಬಾರಿಯಂತೆ ಈ ಬಾರಿಯೂ ನಡೆಸಿಕೊಳ್ಳಲಿದ್ದಾರೆ.

ದೊಡ್ಮನೆ ಒಳಗೆ ಹೋದ 19 ಸ್ಪರ್ಧಿಗಳ ಪಟ್ಟಿ ಇಲ್ಲಿದೆ..  

ಅನ್ಸಿಬಾ ಹಾಸನ್: ಖ್ಯಾತ ನಟಿ ಅನ್ಸಿಬಾ ಹಾಸನ್ ಮಲಯಾಳಂ ಬಿಗ್ ಬಾಸ್ ಆರನೇ ಸೀಸನ್‌ನಲ್ಲಿ ಮೊದಲ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಇವರು ʼದೃಶ್ಯಂʼ ಸಿನಿಮಾದಲ್ಲಿ ಮೋಹನ್‌ಲಾಲ್ ಅವರ ಹಿರಿಯ ಮಗಳಾಗಿ ಕಾಣಿಸಿಕೊಂಡಿದ್ದರು.

ಜಿಂಟೋ: ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ಮತ್ತು ಸೆಲೆಬ್ರಿಟಿ ವೈಯಕ್ತಿಕ ತರಬೇತುದಾರಾಗಿರುವ ಜಿಂಟೋ ಅವರು ಎರಡನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಗೆ ಎಂಟ್ರಿ ಆಗಿದ್ದಾರೆ.

ಯಮುನಾ ರಾಣಿ: ಬಿಗ್ ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಖ್ಯಾತ ಕಿರುತೆರೆ ನಟಿ ಯಮುನಾ ರಾಣಿ ಅವರು ಪ್ರವೇಶ ಮಾಡಿದ್ದಾರೆ. ಇವರು. ‘ಇಟ್ಟಿಮನಿ ಮೇಡ್ ಇನ್ ಚೈನಾ’, ‘ಮೀಸಮಾಧವನ್’ ಮುಂತಾದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ರಿಷಿ ಎಸ್ ಕುಮಾರ್: ಕೇರಳ ಕಿರುತರೆಯಲ್ಲಿ ಬಹುತೇಕ ವೀಕ್ಷಕರಿಗೆ ರಿಷಿ ಕುಮಾರ್‌ ಮುಖ ಪರಿಚಯವಿದೆ. ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ಅವರು ʼ ಉಪ್ಪುಂ ಮುಳಕುಂʼ ಶೋನಿಂದ ಜನಪ್ರಿಯರಾಗಿದ್ದಾರೆ.

ಜಾಸ್ಮಿನ್ ಜಾಫರ್:  ಬಿಗ್ ಬಾಸ್ ಮಲಯಾಳಂ ಸೀಸನ್ 6 ರಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿ ಮತ್ತು ಸೌಂದರ್ಯ ಬ್ಲಾಗರ್ ಜಾಸ್ಮಿನ್ ಜಾಫರ್ ಐದನೇ ಸ್ಪರ್ಧಿ ಆಗಿ ಮನೆಯೊಳಗೆ ಎಂಟ್ರಿ ಆಗಿದ್ದಾರೆ.

ಸಿಜೋ ಜಾನ್: ಶಿಕ್ಷಕನಿಂದ ಯೂಟ್ಯೂಬರ್‌ ಆದ ಸಿಜೋ ಜಾನ್‌ ತನ್ನ ʼಸಿಜೋಟಾಕ್ಸ್‌ʼ ಯೂಟ್ಯೂಬ್‌ ಚಾನೆಲ್‌ ನಿಂದ ಫೇಮ್‌ ಆಗಿದ್ದಾರೆ. ಒಂದು ವೇಳೆ ಕಾರ್ಯಕ್ರಮ ಗೆದ್ದರೆ ಅದರಿಂದ ಬರುವ ಹಣದಿಂದ ಅವರು ಬ್ಯುಸಿನೆಸ್‌ ಆರಂಭಿಸುವುದಾಗಿ ವೇದಿಕೆಯಲ್ಲಿ ಹೇಳಿದ್ದಾರೆ.

ಶ್ರೀತು ಕೃಷ್ಣನ್: ಜನಪ್ರಿಯ ಕಿರುತೆರೆ ನಟಿಯಾಗಿರುವ ಶ್ರೀತು ಕೃಷ್ಣನ್‌ ಬಿಗ್ ಬಾಸ್ ಮನೆಯಲ್ಲಿ ಏಳನೇ ಸ್ಪರ್ಧಿಯಾಗಿ ಎಂಟ್ರಿ ಆಗಿದ್ದಾರೆ. ತಮಿಳು ಮತ್ತು ಮಲಯಾಳಂನಲ್ಲಿ ಕಿರುತರೆಯಲ್ಲಿ ಅವರು ಖ್ಯಾತರಾಗಿದ್ದಾರೆ. ʼಅಮ್ಮಯಾರಿಯಾತೆʼ ಧಾರಾವಾಹಿಯಿಂದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಜಾನ್ಮೋನಿ ದಾಸ್:  ಕೇರಳದ ಮೊದಲ ಮೇಕಪ್‌ ಅರ್ಟಿಸ್ಟ್‌ ಎಂದೇ ಗುರುತಿಸಲ್ಪಾಡುವ ಜಾನ್ಮೋನಿ ದಾಸ್ ಎಂಟನೇ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಆಗಿದ್ದಾರೆ. 300 ಕ್ಕೂ ಹೆಚ್ಚು ಕಲಾವಿದರೊಂದಿಗೆ ಮೇಕಪ್‌ ಅರ್ಟಿಸ್ಟ್‌ ಆಗಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ರತೀಶ್ ಕುಮಾರ್:  ಬಿಗ್ ಬಾಸ್ ಮಲಯಾಳಂ ಸೀಸನ್ 6 ರಲ್ಲಿ ಹಾಸ್ಯನಟ ಮತ್ತು ಗಾಯಕ ರತೀಶ್ ಕುಮಾರ್ ಅವರು 9ನೇ ಸ್ಪರ್ಧಿಯಾಗಿ ಎಂಟ್ರಿ ಆದರು.

ಶ್ರೀರೇಖಾ ರಾಜಗೋಪಾಲ್:  

ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತ ನಟಿ ಶ್ರೀರೇಖಾ ರಾಜಗೋಪಾಲ್ ಬಿಗ್ ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಪ್ರವೇಶ ಪಡೆದರು.

ಅಸಿ ರಾಕಿ: ಹೆಸರಾಂತ ಟ್ಯಾಟೂ ಕಲಾವಿದರಾಗಿರುವ ರಾಕಿ ಅವರು ಎರಡು ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಮತ್ತು ಪ್ರಶಸ್ತಿಯನ್ನು ಗೆಲ್ಲುವುದು ಅವರ ಏಕೈಕ ಗುರಿಯಾಗಿದೆ ಎಂದು ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿದ್ದಾರೆ. 11ನೇ ಸ್ಪರ್ಧಿಯಾಗಿ ಅವರು ಮನೆಯೊಳಗೆ ಎಂಟ್ರಿ ಆದರು.

ಅಪ್ಸರಾ ರತ್ನಾಕರನ್:  ಕಿರುತೆರೆ ನಟಿ ಅಪ್ಸರಾ ರತ್ನಕರನ್ ಅವರು ʼಸಾಂತ್ವನಂʼ ಕಾರ್ಯಕ್ರಮದ ಮೂಲಕ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಬಿಗ್ ಬಾಸ್ ಮಲಯಾಳಂನ ಆರನೇ ಸೀಸನ್‌ನಲ್ಲಿ 12ನೇ ಸ್ಪರ್ಧಿ ಆಗಿ ಅವರು ಪ್ರವೇಶ ಪಡೆದರು.

ಗಾಬ್ರಿ ಜೋಸ್: ನಟ ಗಾಬ್ರಿ ಅವರು 13ನೇ ಸ್ಪರ್ಧಿಯಾಗಿ ಮನೆಯೊಳಗೆ ಪ್ರವೇಶ ಪಡೆದರು. ಮಾಲಿವುಡ್‌ ಸಿನಿರಂಗಕ್ಕೆ ಇವರ ಪರಿಚಯ ಹೊಸತೇನಲ್ಲ. ಕಮಲ್ ನಿರ್ದೇಶನದ ಅವರ ಚೊಚ್ಚಲ ಚಿತ್ರ ʼಪ್ರಣಯ ಮೀನುಕಾಲುಡೆ ಕಡಲ್‌ʼ ನಿಂದಾಗಿ ಅವರು ಈಗಾಗಲೇ ಪ್ರೇಕ್ಷಕರಿಗೆ ಪರಿಚಯವಿದ್ದಾರೆ.

ನೋರಾ ಮುಸ್ಕಾನ್: ಸೋಶಿಯಲ್‌ ಮೀಡಿಯಾ ತಾರೆ ಆಗಿರುವ ನೋರಾ ಮುಸ್ಕಾನ್‌ ಅವರು 14ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆದರು.

ಅರ್ಜುನ್ ಶ್ಯಾಮ್ ಗೋಪನ್:  ಮಾಡೆಲ್ ಮತ್ತು ನಟ ಆಗಿರುವ ಅರ್ಜುನ್ ಶ್ಯಾಮ್ ಗೋಪನ್ ಅವರು 15ನೇ ಅಧಿಕೃತ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಆದರು.

ಸುರೇಶ್ ಮೆನನ್: ಈ ಬಾರಿಯ ಬಿಗ್‌ ಬಾಸ್‌ ಸ್ಪರ್ಧಿಗಳಲ್ಲಿ ಹೆಚ್ಚು ಗಮನ ಸೆಳೆದಿರುವ ಸ್ಪರ್ಧಿಗಳಲ್ಲಿ ಸುರೇಶ್‌ ಮೆನನ್‌ ಕೂಡ ಒಬ್ಬರು. ನಟ-ಹಾಸ್ಯಗಾರ ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್‌ ಲಾಲ್‌ ಅವರ ʼಭ್ರಮರಂʼ ಕೂಡ ಅವರು ನಟಿಸಿದ್ದಾರೆ.

ಶರಣ್ಯ ಆನಂದ್:  ಸ್ಪರ್ಧಿಗಳ ಪಟ್ಟಿಯಲ್ಲಿ ಮತ್ತೊಂದು ಜನಪ್ರಿಯ ಹೆಸರು ಎಂದರೆ ಅದು ಶರಣ್ಯ ಆನಂದ್‌ ಅವರದು. ʼಕುಟುಂಬವಿಲಕ್ಕುʼ ಧಾರಾವಾಹಿನಿಂದ ಅವರು ಜನಪ್ರಿಯರಾಗಿದ್ದಾರೆ.

ರೆಸ್ಮಿನ್ ಬಾಯಿ: ಇವರು ದೈಹಿಕ ಶಿಕ್ಷಣ ತರಬೇತುದಾರೆ ಆಗಿದ್ದಾರೆ. ಬಿಗ್‌ ಬಾಸ್‌ ಮನೆಗೆ 18ನೇ ಸ್ಪರ್ಧಿಯಾಗಿ ಎಂಟ್ರಿ ಆದರು.

ನಿಶಾನಾ:  ಬೈಕರ್‌ ಆಲ್‌ ಓವರ್‌ ಇಂಡಿಯಾ ತಿರುಗಾಡಿರುವ ನಿಶಾನಾ ಅವರು, 19ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆದರು.

 

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

2-biggboss

BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ

BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್

BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.