Kananda Cinema; ಟ್ರೇಲರ್ ನಲ್ಲಿ ‘ಮೆಹಬೂಬಾ’ ದರ್ಶನ; ಮಾ.15ಕ್ಕೆ ಸಿನಿಮಾ ಬಿಡುಗಡೆ
Team Udayavani, Mar 11, 2024, 4:39 PM IST
ಶಶಿ ನಾಯಕರಾಗಿ ನಟಿಸಿರುವ “ಮೆಹಬೂಬಾ’ ಸಿನಿಮಾ ಮಾ.15ರಂದು ತೆರೆ ಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ ಶುಭಕೋರಿದ್ದಾರೆ.
ಈ ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅವರು, “ಇದೇ 15ರಂದು ಕರ್ನಾಟಕದಾದ್ಯಂತ ಸಿನಿಮಾ ಬಿಡುಗಡೆ ಆಗಲಿದೆ. ಸ್ವಲ್ಪ ಭಯ ಇದೆ. ಪರಿಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ’ ಎಂದರು.
ನಟ ಶಶಿ ಮಾತನಾಡಿ, “ಎಲ್ಲರೂ ಈ ಸಿನಿಮಾವನ್ನು ಥಿಯೇಟರ್‌ಗೆ ಬಂದು ನೋಡಬೇಕು ಎಂದು ಕಳಕಳಿಯಿಂದ ಕೇಳಿಕೊಳ್ಳು ತ್ತೇನೆ. ನೀವು ಚೆನ್ನಾಗಿದೆ ಎಂದು
ಬೇರೆಯವರಿಗೆ ಹೇಳಿದರೆ ಸಾಮಾನ್ಯ ಪ್ರೇಕ್ಷಕರ ಬಂದು ನೋಡುತ್ತಾರೆ. ನೀವು ಬಂದು ನೋಡಿಲ್ಲ ಎಂದರೆ ಒಳ್ಳೊಳ್ಳೆ ಸಿನಿಮಾಗಳು ನಿಲ್ಲುವುದು ಕಷ್ಟವಾಗುತ್ತದೆ. ನಾನು ಈ ಚಿತ್ರದಲ್ಲಿ ಹೊಸಬ. ಎಲ್ಲರೂ ಘಟಾನುಘಟಿಗಳು ಇದ್ದಾರೆ. ನಾವು ಚಿತ್ರ ಮಾಡಿರುವುದು ಎಂಟು ಕೋಟಿ ಜನರಿಗೆ. ಜನರಿಗೆ ನಾವು ಕಂಟೆಂಟ್ ಮೂಲಕ ಕನೆಕ್ಟ್ ಆಗಬೇಕು. ನಾನು ಸಿನಿಮಾ ಹೀರೋ ಆಗಲ್ಲ. ಕಂಟೆಂಟ್ ಹೀರೋ’ ಎಂದರು.
ಮೆಹಬೂಬಾ ಸಿನಿಮಾದಲ್ಲಿ ಶಶಿಗೆ ನಾಯಕಿಯಾಗಿ ಪಾವನಾ ಮಿಂಚಿದ್ದಾರೆ. ದಕ್ಷಾ ಎಂಟರ್‌ಟೈನ್ಮೆಂಟ್ಸ್ ಸಹಯೋಗದಲ್ಲಿ ಬಾಲಾಜಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಮೂಲಕ “ಮೆಹ ಬೂಬಾ’ ಚಿತ್ರವನ್ನು ಶಶಿ ನಿರ್ಮಾಣ ಮಾಡಿದ್ದಾರೆ. ಕೇರಳದಲ್ಲಿ ನಡೆದ ನೈಜ ಘಟನೆ ಆಧಾರಿತ ಚಿತ್ರ ತಯಾರಿಸಲಾಗಿದೆ.
ಮ್ಯಾಥ್ಯೂಸ್ ಮನು ಅವರು “ಮೆಹಬೂಬಾ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.