ಬೆಳಗಾವಿ: ಗಮನಸೆಳೆದ ಮಹಿಳೆಯರ ಸಾರಿ ವಾಕ್‌ಥಾನ್
ಸೀರೆ ಭಾರತೀಯ ಮಹಿಳೆಯರ ಸಂಸ್ಕೃತಿಯ ಪ್ರತೀಕ
Team Udayavani, Mar 11, 2024, 10:46 AM IST
ಉದಯವಾಣಿ ಸಮಾಚಾರ
ಬೆಳಗಾವಿ: ಸೀರೆಯುಟ್ಟ ಯುವತಿಯರು, ಮಹಿಳೆಯರು, ವೃದ್ಧೆಯರು ಸೇರಿದಂತೆ ಎಲ್ಲ ವಯೋಮಾನದ ಸುಮಾರು 500ಕ್ಕೂ ಹೆಚ್ಚು ಜನ ಸುಮಾರು 3 ಕಿ.ಮೀ. ಸಾರಿ ವಾಕ್‌ಥಾನ್‌ನಲ್ಲಿ ಪಾಲ್ಗೊಂಡು ಗಮನಸೆಳೆದರು. ರೋಟರಿ ಕ್ಲಬ್ ಆಫ್ ಬೆಳಗಾವಿ ಎಲೈಟ್, ಮಾರವಾಡಿ ಯುವ ಮಂಚ್ ಮಹಿಳಾ ವಿಭಾಗ ಪಂಖ್ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಸಾರಿ ವಾಕಥಾನ್ ನಗರದ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಿಂದ 3 ಕಿ.ಮೀ. ನಡೆಯಿತು.
ಸೀರೆಯುಟ್ಟ ನಾರಿಯರು ವಾಕ್‌ಥಾನ್‌ನಲ್ಲಿ ಪಾಲ್ಗೊಂಡಿದ್ದರು. ಸೀರೆಯುಟ್ಟು ಬೂಟ್ ಹಾಕಿದ ಮಹಿಳೆಯರು, ಮಡಿಲಲ್ಲಿ ಮಗುವನ್ನು ಕಟ್ಟಿಕೊಂಡಿದ್ದ ಮಹಿಳೆ, ದೇಶದ ವಿವಿಧ ಭಾಗಗಳ ವಿಶಿಷ್ಟ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟಿದ್ದ ನಾರಿಯರು ಗಮನಸೆಳೆದರು. ಟೋಪಿ ಧರಿಸಿ ನಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಗೋಮಟೇಶ ವಿದ್ಯಾಪೀಠದಿಂದ ಆರಂಭವಾದ ಸಾರಿ ವಾಕ್‌ಥಾನ್ ನವಹಿಂದ್ ಸೊಸೆ„ಟಿ ಮುಖ್ಯ ಕಚೇರಿ, ಆರ್‌ಪಿಡಿ ಕ್ರಾಸ್ ಮಾರ್ಗದಿಂದ ಗೋಮಟೇಶ ವಿದ್ಯಾಪೀಠದವರೆಗೆ ಸಾಗಿತು. ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಬಾಗವಹಿಸಿದ್ದರು. 70ಕ್ಕೂ ಅಧಿಕ ವಯಸ್ಸಿನ ಅಜ್ಜಿಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮಾರವಾಡಿ ಯುವ ಮಂಚ್ ಮಹಿಳಾ ವಿಭಾಗ ಪಂಖ ಅಧ್ಯಕ್ಷೆ ಮನೀಷಾ ಉಪಾಧ್ಯಾಯ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಸೀರೆ ಮರೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ಸಾರಿ ವಾಕ್‌ಥಾನ್ ಮೂಲಕ ಮಹಿಳೆಯರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ,
ಭಾರತೀಯ ಮಹಿಳೆಯರು ಸೀರೆಯಲ್ಲಿ ಅಂದ-ಚಂದವಾಗಿ ಕಾಣುತ್ತಾರೆ. ಸೀರೆ ಭಾರತೀಯ ಮಹಿಳೆಯರ ಸಂಸ್ಕೃತಿಯ ಪ್ರತೀಕ. ಇದನ್ನು ಸಂರಕ್ಷಿಸಲು ಈ ವಾಕ್‌ಥಾನ್ ಹಮ್ಮಿಕೊಳ್ಳಲಾಗಿದೆ. ಸೀರೆ ಉಡುವ ಸಂಪ್ರದಾಯವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪೊಲೀಸ್ ಕಮಿಷನರೆಟ್‌ದಿಂದ ಮ್ಯಾರಥಾನ್
ಬೆಳಗಾವಿ ಮಹಾನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಸುವರ್ಣ ಕರ್ನಾಟಕ ಸಂಭ್ರಮ ಹಿನ್ನೆಲೆಯಲ್ಲಿ ಮಾದಕ ವ್ಯಸನ ವಿರುದ್ಧ ಜಾಗೃತಿಯ ಮ್ಯಾರಥಾನ್ ನಡೆಯಿತು. ನಗರ ಪೊಲೀಸ್ ಕಮಿಷನರ್ ಕಚೇರಿಯಿಂದ ಆರಂಭವಾದ ಮ್ಯಾರಥಾನ್ ನಲ್ಲಿ ಪೊಲೀಸ್ ಅ ಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಸೇರಿ 500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.