Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Mar 12, 2024, 12:47 AM IST
ಕಳವು ಪ್ರಕರಣ: ಆರೋಪಿಯ ಬಂಧನ
ಕಾಸರಗೋಡು: ಕಳವು ಪ್ರಕರಣಕ್ಕೆ ಸಂಬಂಧಿಸಿ ಚೀಮೇನಿಯ ವಾರಂಟ್ ಆರೋಪಿ ಅಖೀಲ್ (28) ಎಂಬಾತನನ್ನು ಚೀಮೇನಿ ಪೊಲೀಸರು ಬಂಧಿಸಿದ್ದಾರೆ.
ಯುವಕನ ಕೊಲೆ: ಇಬ್ಬರು ಕೊಲ್ಲಿಗೆ ಪರಾರಿ
ಮುಳ್ಳೇರಿಯಾ: ಮೀಯಪದವು ಮದಕ್ಕಳ ನಿವಾಸಿ ದಿ|ಅಬ್ದುಲ್ಲ ಅವರ ಪುತ್ರ ಮೊದೀನ್ ಆರಿಫ್ (22) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲು ಬಾಕಿಯಿರುವ ಆರು ಮಂದಿಯ ಪೈಕಿ ಇಬ್ಬರು ಆರೋಪಿಗಳು ಗಲ್ಫ್ ದೇಶಕ್ಕೆ ಪರಾರಿಯಾಗಿದ್ದಾರೆ. ಇತರ ನಾಲ್ವರು ಗೋವಾ ಹಾಗೂ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಮಂಜೇಶ್ವರ ಪೊಲೀಸರು ಶಂಕಿಸಿದ್ದಾರೆ. ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಮಾ. 4ರಂದು ಕೊಲೆ ಪ್ರಕರಣ ನಡೆದಿತ್ತು.
ಕಳವಿಗೆ ಯತ್ನ: ಬಂಧನ
ಕಾಸರಗೋಡು: ನಗರದ ಐ.ಸಿ.ಭಂಡಾರಿ ರಸ್ತೆಯಲ್ಲಿನ ರಾಜ್ಯ ಬಿವರೇಜ್ ಕಾರ್ಪೊರೇಶನ್‌ನ ಮದ್ಯದಂಗಡಿಯಿಂದ ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ತಳಂಗರೆ ನಿವಾಸಿ ಉಮೈರ್(21)ನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮಾ.6 ರಂದು ರಾತ್ರಿ ಮದ್ಯದಂಗಡಿಯಿಂದ ಕಳವು ಯತ್ನ ನಡೆದಿತ್ತು.
ಆಡು ಕಳವು: ಬಂಧನ
ಕುಂಬಳೆ: ಇಲ್ಲಿನ ಪಿಎಚ್‌ಸಿ ರಸ್ತೆಯ ಅಬ್ಟಾಸ್ ಅವರ ಮನೆಯ ಆಡುಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಶಕ್ಕಲ್ಲ ಖಾನ್(23)ನನ್ನು ಕರ್ನಾಟಕದ ಬ್ರಹ್ಮಪುರದಿಂದ ಕರ್ನಾಟಕ ಪೊಲೀಸರ ನೆರವಿನೊಂದಿಗೆ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಿಂಗಳ ಹಿಂದೆ ನಾಲ್ಕು ಆಡುಗಳನ್ನು ಕಳವು ಮಾಡಲಾಗಿತ್ತು.
ಹಲ್ಲೆ ಪ್ರಕರಣ : ಕೇಸು ದಾಖಲು
ಮುಳಿಯಾರು: ಇಲ್ಲಿಗೆ ಸಮೀಪದ ಇರಿಯಣ್ಣಿಯ ಎನ್.ಎಚ್. ರಸ್ತೆಯಲ್ಲಿ ಮಾ.8ರಂದು ಕುತ್ತಿಕೋಲ್ ಬೇತೂರುಪಾರ ಕಾವಿಂಡಡಿ ಹೌಸ್‌ನ ಜಿತೇಶ್ ಕೆ.ಎಚ್. (22) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಳಿಯಾರು ನಿವಾಸಿಗಳಾದ ರಾಜೇಶ್, ಸನಲ್, ಗೋಪು ಕುಟ್ಟನ್ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸಾರಾಯಿ ಸಹಿತ ಬಂಧನ
ಬದಿಯಡ್ಕ: ಅಡೂರು ಗ್ರಾಮದ ಪಯರಡ್ಕ- ತಿಮ್ಮಯ್ಯದಿಂದ ಬದಿಯಡ್ಕ ಅಬಕಾರಿ ದಳ ಐದು ಲೀಟರ್ ಮದ್ಯ ವಶಪಡಿಸಿಕೊಂಡಿದ್ದು, ಈ ಸಂಬಂಧ ತಿಮ್ಮಯ್ಯಮೂಲೆಯ ಚಂದ್ರನ್ ಟಿ. (41)ನನ್ನು ಬಂಧಿಸಿದೆ.
ಭಜನ ಮಂದಿರದಿಂದ ಕಳವು: ಬಂಧನ
ಅಡೂರು: ಪಾಂಡಿಯ ಭಜನ ಮಂದಿರದಿಂದ ಕಾಣಿಕೆ ಹುಂಡಿ ಕಳವುಗೈದಿದ್ದು, ಸ್ಥಳೀಯರು ಓರ್ವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇನ್ನೋರ್ವ ಪರಾರಿಯಾಗಿದ್ದಾನೆ. ಮಾ.10ರಂದು ರಾತ್ರಿ 9.30ಕ್ಕೆ ಹುಂಡಿ ಕಳವು ಮಾಡಿದ್ದು ಹುಂಡಿಯಲ್ಲಿ ಸುಮಾರು ನಾಲ್ಕು ಸಾವಿರ ರೂ. ಇತ್ತೆನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್: ದೇಶದಲ್ಲಿ 7ಕ್ಕೇರಿದ ಕೇಸ್
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ
Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.