ISRO; ಚಂದ್ರಯಾನ-4ಗೆ ಎರಡು ರಾಕೆಟ್‌ಗಳ ಬಳಕೆ: ಬೇರೆ ಬೇರೆ ದಿನ ಹಾರಲಿವೆ
Team Udayavani, Mar 12, 2024, 6:30 AM IST
ಹೊಸದಿಲ್ಲಿ: ಚಂದ್ರನಲ್ಲಿರುವ ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಮರಳುವ ಯೋಜನೆಯಾದ ಚಂದ್ರಯಾನ-4 ಯೋಜನೆಗಾಗಿ ಇಸ್ರೋ 2 ರಾಕೆಟ್‌ಗ ಳನ್ನು ಬಳಕೆ ಮಾಡಲಿದೆ. ಒಂದೇ ಯೋಜನೆಗೆ 2 ರಾಕೆಟ್ ಬಳಕೆ ಮಾಡು ತ್ತಿರುವುದು ಇದೇ ಮೊದಲಾಗಿದ್ದು, ವಿವಿಧ ಪೇಲೋಡ್ ಹೊತ್ತು 2 ರಾಕೆಟ್‌ಗಳು ಬೇರೆ ಬೇರೆ ದಿನ ನಭಕ್ಕೆ ಹಾರಲಿವೆ.
ಇತ್ತೀಚಗೆ ನಡೆದ ಸಮಾರಂಭವೊಂ ದರಲ್ಲಿ ಈ ವಿಷಯವನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದು, 2028ರ ಬಳಿಕ ನಡೆಸಲು ಇಸ್ರೋ ಯೋಜಿಸಿದೆ ಎನ್ನಲಾಗಿದೆ. ಈ ಯೋಜನೆಯಲ್ಲಿ ಒಟ್ಟು 5 ಪೇಲೋಡ್‌ಗಳಿದ್ದು, 3 ಪೇಲೋಡ್‌ಗಳನ್ನು ಎಲ್‌ವಿಎಂ-3 ಹಾಗೂ 2 ಪೇಲೋಡ್‌ಗಳನ್ನು ಪಿಎಸ್‌ಎಲ್‌ವಿ ರಾಕೆಟ್‌ಗಳು ಹೊತ್ತೂಯ್ಯಲಿವೆ.
ಚಂದ್ರನ ಮೇಲೆ ಇಳಿಯಬೇಕಾದ ಹಾಗೂ ಅಲ್ಲಿನ ಮಾದರಿಯನ್ನು ಸಂಗ್ರಹಿಸಬೇಕಾದ ಪೇಲೋಡ್‌ಗಳನ್ನು ಎಲ್‌ವಿಎಂ-3 ಮೂಲಕ ಭೂಕಕ್ಷೆಗೆ ಸಾಗಿಸಿ, ಭೂಮಿಯನ್ನು ಸುತ್ತುತ್ತಾ ಚಂದ್ರನ ಬಳಿಗೆ ರವಾನಿಸಲಾಗುತ್ತದೆ. ಬಳಿಕ ಚಂದ್ರನ ಮೇಲಿನ ಲ್ಯಾಂಡರ್ ಸಂಗ್ರಹಿಸಿರುವ ಮಾದರಿಯನ್ನು ಭೂಮಿಗೆ ತರುವ ಪೇಲೋಡ್‌ಗಳನ್ನು ನೇರವಾಗಿ ಚಂದ್ರನ ಕಕ್ಷೆಗೆ ಪಿಎಸ್‌ಎಲ್‌ವಿ ಸಾಗಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.