![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Mar 12, 2024, 11:30 AM IST
ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ʼಕಾಂತಾರʼ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾದ ಪ್ರೀಕ್ವೆಲ್ ಅನೌನ್ಸ್ ಆದ ಬಳಿಕ ಕುತೂಹಲ ಹೆಚ್ಚಾಗಿದೆ.
ಸಿನಿಮಾದ ಮುಹೂರ್ತ ನಡೆದು, ಕಲಾವಿದರ ಆಯ್ಕೆಗಾಗಿ ಅಡಿಷನ್ ಕೂಡ ನಡೆದಿದೆ. ಈಗಾಗಲೇ ʼಕಾಂತಾರ ಪ್ರೀಕ್ವೆಲ್ʼ ಟೀಸರ್ ದೊಡ್ಟಮಟ್ಟದಲ್ಲಿ ಸೌಂಡ್ ಮಾಡಿದೆ.
ʼಕಾಂತಾರ-1ʼ ನಲ್ಲಿ ಪಂಜುರ್ಲಿ ದೈವದ ಮೂಲದ ಕಥೆ ಇರಲಿದೆ ಎನ್ನಲಾಗಿದೆ. ಕ್ರಿ.ಶ. 301-400 ಕಾಲದ ಕಥೆ ಇರಲಿದೆ. ಪಂಜುರ್ಲಿ ದೈವದ ಹುಟ್ಟು ಹಾಗೂ ಆಚರಣೆ ಕುರಿತ ಕಥೆ ಪ್ರೀಕ್ವೆಲ್ ನಲ್ಲಿ ಇರಲಿದೆ ಎನ್ನಲಾಗಿದೆ.
ಸಿನಿಮಾದ ಕಲಾವಿದರ ಆಯ್ಕೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣ ಆಗುತ್ತಿರುವುದರಿಂದ ಈ ಭಾಗದ ಸ್ಥಳೀಯ ಕಲಾವಿದರ ಜೊತೆ ಅನ್ಯ ಸಿನಿರಂಗದ ಖ್ಯಾತ ಕಲಾವಿದರು ಕೂಡ ಇರಬಹುದು ಎನ್ನಲಾಗುತ್ತಿದೆ. ಈ ಮಾತಿಗೆ ತಕ್ಕಂತೆ ಟಾಲಿವುಡ್ ವಲಯದಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ.
ʼಕಾಂತಾರ ಪ್ರೀಕ್ವೆಲ್ʼ ನಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಸಿನಿಮಾದ ಸ್ಟಾರ್ ನಟರೊಬ್ಬರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ. ಈ ಹಿಂದೆ ಕಾಂತಾರ ಸಿನಿಮಾವನ್ನು ನೋಡಿ ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿ ಅಭಿನಂದತೆ ಸಲ್ಲಿಸಿದ ನಟ ಜೂ. ಎನ್ ಟಿಆರ್ ʼಕಾಂತಾರ ಪ್ರೀಕ್ವೆಲ್ʼ ನಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಟಾಲಿವುಡ್ ನಲ್ಲಿ ಹರಿದಾಡಿದೆ.
ಇತ್ತೀಚೆಗೆ ಪ್ರಶಾಂತ್ ನೀಲ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂ.ಎನ್ ಟಿಆರ್ ದಂಪತಿ ಸಹಿತ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್, ರಿಷಬ್ ಶೆಟ್ಟಿ ದಂಪತಿ ಕೂಡ ಆಗಿದ್ದರು. ಈ ವೇಳೆ ರಿಷಬ್ ಶೆಟ್ಟಿ ತಾರಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ವೈರಲ್ ಆಗಿತ್ತು. ಇದೇ ಕಾರಣದಿಂದ ಜೂ.ಎನ್ ಟಿಆರ್ ʼಕಾಂತಾರ-1ʼ ರಲ್ಲಿ ನಟಿಸಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ.
ಪ್ರಶಾಂತ್ ನೀಲ್ ಅವರೊಂದಿಗೆ ಜೂ.ಎನ್ ಟಿಆರ್ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಜೂ.ಎನ್ ಟಿಆರ್ ಹಾಗೂ ರಿಷಬ್ ಶೆಟ್ಟಿ ಅವರ ಊರು ಕುಂದಾಪುರಕ್ಕೂ ನಂಟಿದೆ. ತಾರಕ್ ಅವರ ತಾಯಿ ಶಾಲಿನಿ ಮೂಲತಃ ಕುಂದಾಪುರದವರು. ಈ ಕಾರಣದಿಂದ ತಾರಕ್ ಕನ್ನಡವನ್ನು ಸರಾಗವಾಗಿ ಮಾತನಾಡುತ್ತಾರೆ.
ಈ ಹಿಂದೆ ಜೂ. ಎನ್‌ಟಿಆರ್ ಜೊತೆ ಸಿನಿಮಾ ಮಾಡುತ್ತೀರಾ ಎಂದು ರಿಷಬ್ ಅವರಿಗೆ ಕೇಳಲಾಗಿತ್ತು. ಆದರೆ ಸದ್ಯಕ್ಕೆ ಅಂಥ ಯೋಚನೆ ಇಲ್ಲ ಎಂದಿದ್ದರು. ಕಥೆ, ಸ್ಕ್ರಿಪ್ಟ್ ತಯಾರಿ ಬಳಿಕ ಕಲಾವಿದರ ಆಯ್ಕೆ ಆಗುತ್ತದೆ ಎಂದು ರಿಷಬ್ ಹೇಳಿದ್ದರು.
ಇದೀಗ ಜೂ. ಎನ್ ಟಿಆರ್ ʼಕಾಂತಾರ ಪ್ರೀಕ್ವೆಲ್ʼ ನಲ್ಲಿ ನಟಿಸಲಿದ್ದಾರೆ ಎಂದು ಟಾಲಿವುಡ್ ಅಭಿಮಾನಿಗಳ ನಡುವೆ ಮಾತುಗಳು ಹರಿದಾಡುತ್ತಿದೆ.
ಆದರೆ ಈ ಬಗ್ಗೆ ಎಲ್ಲೂ ಕೂಡ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
You seem to have an Ad Blocker on.
To continue reading, please turn it off or whitelist Udayavani.