Surya Kiran: ಜಾಂಡೀಸ್‌ಗೆ ಬಲಿಯಾದ ಖ್ಯಾತ ಬಹುಭಾಷಾ ನಟ,ನಿರ್ದೇಶಕ

Team Udayavani, Mar 12, 2024, 12:12 PM IST

Surya Kiran: ಜಾಂಡೀಸ್‌ಗೆ ಬಲಿಯಾದ ಖ್ಯಾತ ಬಹುಭಾಷಾ ನಟ,ನಿರ್ದೇಶಕ

ಹೈದರಾಬಾದ್: ಟಾಲಿವುಡ್‌ ಸಿನಿರಂಗದ ಜನಪ್ರಿಯ ನಟ, ನಿರ್ದೇಶಕ ಸೂರ್ಯ ಕಿರಣ್ (48) ಸೋಮವಾರ(ಮಾ.11 ರಂದು) ನಿಧನ ಹೊಂದಿದರು.

ಕಳೆದ ಕೆಲ ಸಮಯದಿಂದ ಜಾಂಡೀಸ್‌ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾ.11 ರಂದು ಚೆನ್ನೈನ ತಮ್ಮ ನಿವಾಸದಲ್ಲಿ ಅವರು ನಿಧನರಾದರು ಎಂದು ವರದಿ ತಿಳಿಸಿದೆ.

ಸಿನಿಪಯಣ..  ಬಾಲನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿಯಾದ ಅವರು,1978 ರಲ್ಲಿ ಬಂದ ʼಸ್ನೇಹಿಕನ್ ಒರು ಪೆನ್ನುʼ ಎನ್ನುವ ಮಲಯಾಳಂ ಸಿನಿಮಾದಲ್ಲಿ ನಟಿಸಿ ಸಿನಿಮಾರಂಗಕ್ಕೆ ಬಂದರು. ಇದಾದ ಬಳಿಕ ಮಲಯಾಳಂನಲ್ಲಿ ಮೊದಲ ಬಾರಿ 3ಡಿ ಸ್ವರೂಪದಲ್ಲಿ ಚಿತ್ರೀಕರಿಸಲಾದ ಫ್ಯಾಂಟಸಿ ಚಿತ್ರ ʼಮೈ ಡಿಯರ್ ಕುಟ್ಟಿಚತನ್ʼ ನಲ್ಲಿನ ಅವರ ಪ್ರಧಾನ ಪಾತ್ರದ ಅಭಿನಯ ಜನಪ್ರಿಯತೆಗೆ ಕಾರಣವಾಯಿತು.

ಬಾಲನಟನಾಗಿದ್ದಾಗಲೇ ಸೂರ್ಯ ಕಿರಣ್‌ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. ಕಮಲ್ ಹಾಸನ್ ಅವರ ʼಕಡಲ್ ಮೀಂಗಲ್ʼ, ರಜಿನಿಕಾಂತ್ ಅವರ ʼರಂಗ, ʼಪಡಿಕ್ಕಡವನ್ʼ, ʼಮೌನ ಗೀತಂಗಲ್ʼ ಸಿನಿಮಾದಲ್ಲಿ ನಟಿಸಿದ್ದರು. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ರಜಿನಿಕಾಂತ್, ಮಾಧವಿ ಮತ್ತು ಪೂನಂ ಧಿಲ್ಲೋನ್ ಒಳಗೊಂಡ ಬಾಲಿವುಡ್ ಚಿತ್ರ ‘ಗೆರಾಫ್ತಾರ್’ ಸಿನಿಮಾದಲ್ಲೂ ಕಿರಣ್‌ ನಟಿಸಿ ಗಮನ ಸೆಳೆದಿದ್ದರು.

ನಟನೆ ಬಳಿಕ ನಿರ್ದೇಶನಕ್ಕಿಳಿದ ಕಿರಣ್‌ ಸೂರ್ಯ ʼಸತ್ಯಂʼ , ʼಧನ 51ʼ ಸಿನಿಮಾಗಳನ್ನು ಮಾಡಿ ನಿರ್ದೇಶನದಲ್ಲೂ ಸೈ ಎನ್ನಿಸಿಕೊಂಡರು. ʼಬ್ರಹ್ಮಾಸ್ತ್ರಂʼ (2006), ʼರಾಜು ಭಾಯಿʼ (2007) ಮತ್ತು ʼಚಾಪ್ಟರ್‌ʼ 6 (2010) ಸಿನಿಮಾಗಳನ್ನು ಮಾಡಿದರು. ಆದರೆ ಈ ಸಿನಿಮಾಗಳು ಅಷ್ಟಾಗಿ ಯಶಸ್ಸು ಕಂಡಿಲ್ಲ.

ಸಿನಿಮಾರಂಗ ವಿರಾಮ ಪಡೆದುಕೊಂಡ ಬಳಿಕ ಅವರು, ಮತ್ತೆ ಸುದ್ದಿಯಾದದ್ದು 2020 ರಲ್ಲಿ ಬಿಗ್‌ ಬಾಸ್‌ ತೆಲುಗು -4 ನಲ್ಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಬರುವ ಮೂಲಕ. ಆದರೆ ಕೆಲವೇ ದಿನಗಳಲ್ಲಿ ಅವರು ಎಲಿಮಿನೇಟ್‌ ಆದರು.

ಸೂರ್ಯ ಕಿರಣ್ ನಟಿ ಕಾವೇರಿ ಅಲಿಯಾಸ್ ಕಲ್ಯಾಣಿ ಅವರನ್ನು ಮದುವೆಯಾಗಿದ್ದರು. ಆದರೆ, ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ನಂತರ, ಕಿರಣ್ ಕಾವೇರಿ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದರು.

ಕಿರಣ್ ಅವರ ಇತ್ತೀಚಿನ ಚಿತ್ರ ʼಅರಸಿʼ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಕೂಡ ನಾಯಕಿಯಾಗಿ ನಟಿಸಿದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

ಶಿವ ಶಿವ ಎಂದ ʼಕಣ್ಣಪ್ಪʼ

Kannappa Movie: ಶಿವ ಶಿವ ಎಂದ ʼಕಣ್ಣಪ್ಪʼ

2-maharaja

Maharaja: 2 ಭಾಗಗಳಲ್ಲಿ ರಾಜಮೌಳಿಯ ಮಹಾರಾಜ ಸಿನಿಮಾ?

Chiranjeevi: ಸಕ್ರಿಯ ರಾಜಕಾರಣಕ್ಕೆ ಮರಳಲ್ಲ, ಸಿನಿಮಾಗಷ್ಟೇ ಸೀಮಿತ: ನಟ ಚಿರಂಜೀವಿ

Chiranjeevi: ಸಕ್ರಿಯ ರಾಜಕಾರಣಕ್ಕೆ ಮರಳಲ್ಲ, ಸಿನಿಮಾಗಷ್ಟೇ ಸೀಮಿತ: ನಟ ಚಿರಂಜೀವಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.